/newsfirstlive-kannada/media/media_files/2026/02/07/husband-and-wife-death-same-day-2026-02-07-18-09-17.jpg)
ಪತಿ ರಾಜು ಹಾಗೂ ಪತ್ನಿ ಮೀನಾ ಒಂದೇ ದಿನ ಸಾವು!
ನೆಲಮಂಗಲದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಪತಿಯ ಸಾವಿನ ವಿಷಯ ತಿಳಿದು ಮನನೊಂದ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ನೆಲಮಂಗಲ ನಗರದ ಜಕ್ಕಸಂದ್ರದ ಮನೆಯ ಬಾತ್ ರೂಂನಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಪತಿ ರಾಜು ಸಾವನ್ನಪ್ಪಿದ್ರು. ಪತಿ ರಾಜು ಸಾವಿನ ಸುದ್ದಿ ತಿಳಿದು ಪತ್ನಿ ಮೀನಾ ಬೆತ್ತನಗೆರೆ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಉತ್ತರ ತಾಲ್ಲೂಕು ಬೆತ್ತನಗೆರೆ ಸಮೀಪದ ಹಲಸಿನಮರದಪಾಳ್ಯದ ಲೇಔಟ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜು ಮತ್ತು ಮೀನಾ ದಂಪತಿಗೆ ತರುಣ್ ಎಂಬ ಮಗನಿದ್ದಾನೆ. ತಂದೆ ಮನೆಯಲ್ಲಿ ಸಾವನ್ನಪ್ಪಿದ ವಿಷಯವನ್ನು ಪುತ್ರ ತರುಣ್ ತಾಯಿ ಮೀನಾಗೆ ಪೋನ್ ಮೂಲಕ ತಿಳಿಸಿದ್ದ. ವಿಷಯ ತಿಳಿದು ಮನೆಗೂ, ಶವಗಾರಕ್ಕೂ ಬಾರದೆ ತಾಯಿ ಮೀನಾ ನಾಪತ್ತೆಯಾಗಿದ್ದರು. ತಡರಾತ್ರಿವರೆಗೂ ಕಾದ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ಪರಿಶೀಲನೆ ನಡೆಸಿದಾಗ ಬೆತ್ತನಗೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮೀನಾ ಮೃತದೇಹ ಪತ್ತೆಯಾಗಿದೆ. ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಪತ್ನಿ ಮೀನಾ ಕೆಲಸ ಮಾಡುತ್ತಿದ್ದರು. ಪತಿ ರಾಜು ಕಾರ್ ಚಾಲಕರಾಗಿದ್ದರು. ನೆಲಮಂಗಲ ಹಾಗೂ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
/filters:format(webp)/newsfirstlive-kannada/media/media_files/2026/02/07/nelamangala-police-station-2026-02-07-18-11-19.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us