/newsfirstlive-kannada/media/media_files/2025/11/10/husband-suicide-at-bangalore-2025-11-10-18-22-02.jpg)
ಬೆಂಗಳೂರಿನಲ್ಲಿ ಯದುಕುಮಾರ್ ಆತ್ಮಹತ್ಯೆಗೆ ಶರಣು
ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ಶರಣಾಗಿದ್ದಾರೆ. ಗಿರಿ ನಗರದ ಮನೆಯಲ್ಲಿ ಯದುಕುಮಾರ್ ಎಂಬ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 11 ತಿಂಗಳ ಹಿಂದೆ ಚಾಮರಾಜನಗರ ಮೂಲದ ಮೇಘನಾರನ್ನ ಯದುಕುಮಾರ್ ಮದುವೆಯಾಗಿದ್ದರು.
ಪತಿ ಪತ್ನಿ ಮಧ್ಯೆ ಜಗಳವಾಗಿ ಪತ್ನಿ ತವರು ಮನೆಗೆ ಹೋಗಿದ್ದಳು. ಜೊತೆಗೆ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ದ ಪತ್ನಿ ಮೇಘನಾ ದೂರು ನೀಡಿದ್ದಳು. ಪತಿ ಯದುಕುಮಾರ್ ಗೆ ಬೇರೆ ಯುವತಿಯರ ಜೊತೆ ಸಂಪರ್ಕ ಇದೆ ಎಂಬ ಅನುಮಾನ ಪತ್ನಿ ಮೇಘನಾಗೆ ಇತ್ತಂತೆ. ಹಲವರ ಜೊತೆ ಪತಿ ಸಂಬಂಧ ಹೊಂದಿದ್ದಾನೆಂದು ಗಲಾಟೆ ಆಗಿತ್ತು. ಇದೇ ವಿಚಾರಕ್ಕೆ ತವರು ಮನೆಗೆ ಹೋಗಿದ್ದ ಪತ್ನಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಚಾಮರಾಜನಗರ ಪೊಲೀಸರು ಪತಿ ಪತ್ನಿಗೆ ಈ ಹಿಂದೆ ಎರಡು ಬಾರಿ ಕೌನ್ಸಿಲಿಂಗ್ ಮಾಡಿ ಕಳಿಸಿದ್ರು. ಕಳೆದ ಕೆಲ ದಿನಗಳಿಂದ ಪತಿ ಮತ್ತು ಪತ್ನಿ ಮತ್ತೆ ಜೊತೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಮತ್ತೆ ಪತಿ ಪತ್ನಿ ಮಧ್ಯೆ ಆಗಾಗ್ಗೆ ಜಗಳ ಆಗುತ್ತಿತ್ತು. ಇದರಿಂದಾಗಿ ನೊಂದು ಪತಿ ಯದುಕುಮಾರ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತನ ಕುಟುಂಬಸ್ಥರು ಪತ್ನಿ ಮೇಘನಾ ವಿರುದ್ದ ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us