/newsfirstlive-kannada/media/media_files/2025/12/17/women-loves-police-inspector-satish-2025-12-17-14-11-22.jpg)
ವನಜಾ ಹಾಗೂ ಇನ್ಸ್ ಪೆಕ್ಟರ್ ಸತೀಶ್
ಪ್ರೀತ್ಸೋಣ ಬಾ ಅಂತ ಪೊಲೀಸ್ ಇನ್ಸ್ ಪೆಕ್ಟರ್ ಗೆ ಮಹಿಳೆಯೊಬ್ಬರು ಕಾಟ ಕೊಟ್ಟಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಪ್ರೀತಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಇನ್ಸ್ ಪೆಕ್ಟರ್ ಗೆ ಲವ್ ಲೆಟರ್ ಬರೆದಿದ್ದಾರೆ. ಬರೋಬ್ಬರಿ 11 ಮೊಬೈಲ್ ನಂಬರ್ ನಿಂದ ಇನ್ಸ್ ಪೆಕ್ಟರ್ ಗೆ ಪ್ರೀತಿ ನಿವೇದನೆ ಮಾಡಿಕೊಳ್ಳಲು ಸಂಜನಾ ಅಲಿಯಾಸ್ ವನಜಾ ಎಂಬ ಮಹಿಳೆ ಯತ್ನಿಸಿದ್ದಾರೆ. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಇನ್ಸ್ ಪೆಕ್ಟರ್ ಸತೀಶ್ ಹಿಂದೆ ಬಿದ್ದ ಪಾಗಲ್ ಪ್ರೇಮಿಯ ಕಥೆ ಇದು. ಸಿನಿಮಾ ಕಥೆಯನ್ನ ಮೀರಿಸುವ ಹಾಗೆ ಈಕೆಯ ಒನ್ ಸೈಡ್ ಲವ್ ಸ್ಟೋರಿ ಸಾಗಿ ಬಂದಿದೆ. ಹನಿ ಟ್ರಾಪ್ ಮಾಡಿ ಹಣ ಸಂಪಾದನೆ ಮಾಡಲು ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಪ್ರೀತಿ ಪ್ರೇಮದ ಆಟವಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸ್ ಠಾಣೆಗೆ ಬಂದು ಲವ್ ಲೆಟರ್ ಅನ್ನು ಮಹಿಳೆಯೇ ಇನ್ಸ್ ಪೆಕ್ಟರ್ ಸತೀಶ್ ಗೆ ನೀಡಿದ್ದಾರಂತೆ. ಮಹಿಳೆ ಕಾಟಕ್ಕೆ 11 ಮೊಬೈಲ್ ನಂಬರ್ ಗಳನ್ನು ಇನ್ಸ್ ಪೆಕ್ಟರ್ ಸತೀಶ್ ಬ್ಲಾಕ್ ಮಾಡಿದ್ದ್ದಾರೆ. ಕೊನೆಗೆ ಈಗ ಮಹಿಳೆಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಿಸಿ ಪೊಲೀಸ್ ಇನ್ಸ್ ಪೆಕ್ಟರ್ ಸತೀಶ್ ಹಿಂದೆ ಬಿದ್ದಿದ್ದ ಸಂಜನಾ ಅಲಿಯಾಸ್ ವನಜಾ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಇನ್ಸ್ ಪೆಕ್ಟರ್ ಸತೀಶ್ ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಎಫ್.ಐ.ಆರ್ ನಲ್ಲಿ ವನಜಾ ಅಲಿಯಾಸ್ ಸಂಜನಾ, ಚಿನ್ನಿ ಐ ಲವ್ ಯೂ, ಯೂ ಲವ್ ಮೀ ಎಂದು ಬರೆದಿರುವ ಪತ್ರವನ್ನು ಇನ್ಸ್ ಪೆಕ್ಟರ್ ಸತೀಶ್ ಗೆ ಮಹಿಳೆ ನೀಡಿದ್ದಾರೆ ಎಂದು ದೂರಿದ್ದಾರೆ. ಮಹಿಳೆಯ ಪೋಷಕರನ್ನು ವಿಚಾರಿಸಿ, ಬುದ್ದಿ ಹೇಳುವಂತೆಯೂ ಪೊಲೀಸರು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಾನು ಕಾಂಗ್ರೆಸ್ ಕಾರ್ಯಕರ್ತೆ. ನನಗೆ ಗೃಹ ಸಚಿವರು, ಬೇರೆ ಬೇರೆ ನಾಯಕರು ಪರಿಚಯ ಇದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ನನಗೆ ಈ ಮಹಿಳೆಯ ಪರಿಚಯವೇ ಇಲ್ಲ ಎಂದು ಇನ್ಸ್ ಪೆಕ್ಟರ್ ಸತೀಶ್ ನೀಡಿದ ದೂರಿನಲ್ಲಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/17/women-loves-police-inspector-satish-2-2025-12-17-14-26-28.jpg)
ಪೊಲೀಸ್ ಇನ್ಸ್ ಪೆಕ್ಟರ್ ದೂರು ಆಧರಿಸಿ ದಾಖಲಿಸಿದ ಎಫ್‌ಐಆರ್ ಪ್ರತಿ ಹಾಗೂ ರಾಮಮೂರ್ತಿ ನಗರ ಪೊಲೀಸ್ ಠಾಣೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us