Advertisment

ಯಲಹಂಕ ಕ್ಷೇತ್ರದ ವಾರ್ಡ್‌ಗೆ ಆಕಾಶ್ ಎಂದು ನಾಮಕರಣ : ಡಿಕೆ ಪುತ್ರನಿಗೂ ಆಕಾಶ್ ವಾರ್ಡ್‌ಗೂ ಸಂಬಂಧ ಇದೆಯಾ?

ಬೆಂಗಳೂರಿನ ಯಲಹಂಕ ಕ್ಷೇತ್ರದ ವಾರ್ಡ್ ಒಂದಕ್ಕೆ ಆಕಾಶ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ. ವಾರ್ಡ್ ಹೆಸರಿಗೂ ಆಕಾಶ್ ಗೂ ಏನ್ ಸಂಬಂಧ ಅಂತ ಶಾಸಕ ಎಸ್‌.ಆರ್. ವಿಶ್ವನಾಥ್ ತಲೆ ಕೆಡಿಸಿಕೊಂಡಿದ್ದಾರೆ. ಡಿಸಿಎಂ ಡಿಕೆಶಿ ತಮ್ಮ ಪುತ್ರ ಆಕಾಶ್ ಹೆಸರು ಅನ್ನೇ ವಾರ್ಡ್ ಗೆ ಇಟ್ಟಿದ್ದಾರಾ ಎಂಬ ಅನುಮಾನ ಶುರುವಾಗಿದೆ.

author-image
Chandramohan
YELAHANKA MLA VISHWANTHA02

ಯಲಹಂಕದ ವಾರ್ಡ್ ಒಂದಕ್ಕೆ ಆಕಾಶ್ ವಾರ್ಡ್ ಎಂದು ನಾಮಕರಣ

Advertisment
  • ಯಲಹಂಕದ ವಾರ್ಡ್ ಒಂದಕ್ಕೆ ಆಕಾಶ್ ವಾರ್ಡ್ ಎಂದು ನಾಮಕರಣ
  • ಯಾರು ಈ ಆಕಾಶ್ ಎಂದು ತಲೆಕೆಡಿಸಿಕೊಂಡ ಶಾಸಕ ವಿಶ್ವನಾಥ್
  • ಡಿಸಿಎಂ ಡಿಕೆಶಿ ಪುತ್ರನ ಹೆಸರು ಅನ್ನೇ ವಾರ್ಡ್ ಗೆ ಇಡಲಾಗಿದೆಯೇ ಎಂಬ ಅನುಮಾನ

ಇದು ರಾಜಕಾರಣದ ಸುದ್ದಿಯಲ್ಲ. ಆದ್ರೆ, ರಾಜಕಾರಣಿಗಳ ಸುದ್ದಿ.. ಬಿಜೆಪಿ ಶಾಸಕರೊಬ್ಬರು ಹೇಳ್ತಿರೋ ಈ ಮಾತುಗಳನ್ನ ಕೇಳಿದ್ರೆ ಅಯ್ಯೋ ಏನಪ್ಪಾ? ಬೆಂಗಳೂರನ್ನ ಬ್ರ್ಯಾಂಡ್ ಮಾಡ್ರೀನಿ ಅನ್ನೋ ಡಿಕೆ ಸಾಹೇಬ್ರು ಹೀಗ್ ಮಾಡ್ಬಿಟ್ರಾ? ಅನ್ನೋ ಅನುಮಾನ ನಿಮಗೂ ಬರಬಹುದು. ಮೇ ಬಿ ಈ ಆರೋಪದಲ್ಲಿ ಡಿಕೆ ಪಾತ್ರ ಇಲ್ಲದೆಯೂ ಇರಬಹುದು..  ಕೊಂಕಣ ಸುತ್ತಿ ಮೈಲಾರಕ್ಕೆ ಬರೋಕಿಂತ ಸೀದಾ ಸುದ್ದಿ ಹೇಳ್ತೀವಿ ಕೇಳಿ.
ಇವತ್ತೀಡಿ ದಿನ ಹಳ್ಳಿ ಟು ದಿಲ್ಲಿವರೆಗಿನದ ಖುರ್ಚಿ ಪಾಲಿಟಿಕ್ಸ್.. ಸಿಎಂ ಡಿಸಿಎಂ ಬಣ ಬಡಿದಾಟವನ್ನ ನೋಡಿದ್ದೀರಿ. ಈ​ ನಡುವೆ ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವನಾಥ್, ಡಿಕೆ ಸಾಹೇಬ್ರ ಹೆಸರೇಳಿ ಇದು ಸತ್ಯಾನಾ? ಅಂತ ಪ್ರಶ್ನೆ ಇಟ್ಟಿದ್ದಾರೆ.   

ಜಿಬಿಎ ವಾರ್ಡ್​ಗೆ ಮಗನ ಹೆಸ್ರು ಇಟ್ರಾ ಕನಕಪುರದ ಕಲಿ..? 
ಆ ಆಕಾಶ್.. ಡಿಕೆ ಪುತ್ರ ಆಕಾಶ್.. ಒಬ್ಬರೇನಾ? ಬೇರೆನಾ? 
ನಿಮಗೆಲ್ಲಾ ಗೊತ್ತಿರೋ ಹಾಗೇ.. ಇತ್ತೀಚಿಗೆ ಬಿಬಿಎಂಪಿ ಜಿಬಿಎ ಆಗೋಯ್ತು.. ಜಿಬಿಎಯಲ್ಲಿರೋ ವಾರ್ಡ್​ಗಳ ವಿಂಗಡಣೆ.. ವಾರ್ಡ್​ಗಳ ಮರುನಾಮಕಾರಣ ಮಾಡಲಾಗ್ತಿದೆ.. ಅಲ್ವಾ? ಈ ನಡುವೆಯೇ ಯಲಹಂಕದ ಮೂರನೇ ವಾರ್ಡ್​ಗೆ ಆಕಾಶ್ ಅಂತ ರಿನೇಮ್ ಮಾಡಲಾಗಿದೆ. ಇದು ಆಶ್ಚರ್ಯ ಅಲ್ಲ.. ಈ ಆಕಾಶ್ ಯಾರು? ಡಿಸಿಎಂ ಮಗನೇನಾ? ಅನ್ನೋದೇ ಪ್ರಶ್ನಾರ್ಥಕ..!

ಶಾಸಕ ವಿಶ್ವನಾಥ್ ಹೇಳ್ತಿರೋದೇನು?  
ಆಕಾಶ್​ಗೂ & ಡಿಸಿಎಂ ಪುತ್ರನ ಆಕಾಶ್ ಒಬ್ರೇನಾ? ಗೊತ್ತಿಲ್ಲ
ವಿಶ್ವನಾಥ್​ ಪ್ರಕಾರ, ಇದು ಡಿಕೆ ಪುತ್ರ ಆಕಾಶ್​ ಅವ್ರೇ ಅಂತೆ..
ಡಿಕೆ ಅವ್ರು ಇದಕ್ಕೆಲ್ಲಾ ಒಪ್ಪಲ್ಲ ಎನ್ನುತ್ತಿರೋ ಶಾಸಕ ವಿಶ್ವನಾಥ್ 
ಕೂಡಲೇ ತೆಗೆದು ವೆಂಕಟಾಲ್ /ಮಾರುತಿ ನಗರ ವಾರ್ಡ್ ಅಂತಿಡಿ
ಮೊದಲಿದ್ದ 1ನೇ ವಾರ್ಡ್​ಗೆ ರಾಜ ಕೆಂಪೇಗೌಡ ವಾರ್ಡ್​ ಅಂತ
2ನೇ ವಾರ್ಡ್​ಗೆ ಚೌಡೇಶ್ವರಿ ವಾರ್ಡ್​ ಅಂತ ತಿದ್ದುಪಡಿಗೆ ಆಗ್ರಹ
(ನಿಜ ಹೇಳ್ಬೇಕಂದ್ರೆ, ಈ ಆಕಾಶ್​ಗೂ, ಡಿಸಿಎಂ ಪುತ್ರನ ಆಕಾಶ್ ಒಬ್ರೇನಾ? ಗೊತ್ತಿಲ್ಲ.. ಆದ್ರೆ, ವಿಶ್ವನಾಥ್​ ಅವ್ರಿಗೆ ಬಂದ ಮಾಹಿತಿ ಪ್ರಕಾರ, ಇದು ಡಿಕೆ ಪುತ್ರ ಆಕಾಶ್​ ಅವ್ರೇ ಅಂತೆ.. ಅಲ್ಲದೇ, ಡಿಕೆ ಇದಕ್ಕೆಲ್ಲಾ ಒಪ್ಪಲ್ಲ ಅಂತಾನೂ ಹೇಳೋ ವಿಶ್ವನಾಥ್, ಆಕಾಶ್ ಸಿಕ್ರೇಟ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕೂಡಲೇ ಆಕಾಶ್ ಅನ್ನೋ ಹೆಸ್ರನ್ನ ಕೂಡಲೇ ತೆಗೆದು ವೆಂಕಟಾಲ್ ಅಥವಾ ಮಾರುತಿ ನಗರ ವಾರ್ಡ್​ ಅಂತ ಮರುನಾಮಕಾರಣ ಮಾಡ್ಬೇಕು ಅಂತ ಅಗ್ರಹಿಸಿದ್ದಾರೆ.. ಮೊದಲಿದ್ದ ಒಂದನೇ ವಾರ್ಡ್​ಗೆ ರಾಜ ಕೆಂಪೇಗೌಡ ಅಂತ, ಎರಡನೇ ವಾರ್ಡ್​ಗೆ ಚೌಡೇಶ್ವರಿ ವಾರ್ಡ್​ ಅಂತ ತಿದ್ದುಪಡಿ ಮಾಡೋ ವಿಶ್ವನಾಥ್ ಆಗ್ರಹಿಸಿದ್ದಾರೆ.) 

Advertisment

ಈ ಆಕಾಶ್ ಯಾರೂ? ಏನ್ ಸಾಧನೆ ಮಾಡಿದ್ದಾರೆ? ನಮಗೂ ಗೊತ್ತಿಲ್ಲ.. ಅಲ್ಲದೇ ಈ ಆಕಾಶ್, ಡಿಕೆ ಪುತ್ರ ಆಕಾಶ್ ಒಬ್ಬರೇನಾ? ಅದೂ ಕ್ಲಾರಿಟಿ ಇಲ್ಲ.. ಖುರ್ಚಿ ಪಾಲಿಟಿಕ್ಸ್​ನಲ್ಲಿ ಬ್ಯುಸಿಯಾಗಿರೋ ಡಿಕೆಗೆ ಈ ಸುದ್ದಿ ಬಗ್ಗೆ ಗೊತ್ತಿದ್ಯಾ? ಇಲ್ವೊ?.. ಏನೇ ಇರಲಿ.. ಜಿಬಿಎ ಅಧಿಕಾರಿಗಳೇ ಈ ಅನುಮಾನಕ್ಕೆ ಕ್ಲಾರಿಟಿ ಕೊಟ್ಟು ಆಕಾಶ್ ಸೀಕ್ರೇಟ್ ಹೇಳಿದ್ರೆ ಇನ್ನೂ ಒಳ್ಳೇದು..  

YELAHANKA WARD NAMED AFTER AKASH
Advertisment
Advertisment
Advertisment