/newsfirstlive-kannada/media/media_files/2026/01/12/girl-arrested-for-assaulting-home-guards-2026-01-12-16-05-49.jpg)
ಹೋಮ್ ಗಾರ್ಡ್ಸ್ ಮೇಲೆ ಹಲ್ಲೆ ಮಾಡಿದ ಯುವತಿ ಜೈಲುಪಾಲು
ಬೆಂಗಳೂರಿನಲ್ಲಿ ತುಂಡುಡುಗೆ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವತಿಯೊಬ್ಬಳಿಗೆ ಸರಿಯಾಗಿ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯ ಮೇಲೆ ಯುವತಿ ಹಲ್ಲೆ ನಡೆಸಿದ್ದಾಳೆ. ಇದರಿಂದ ಗೃಹ ರಕ್ಷಕ ದಳದ ವಯೋವೃದ್ದ ಮಹಿಳೆಗೆ ಮೂಗು, ಮುಖದಲ್ಲಿ ರಕ್ತ ಬಂದಿದೆ. ಬೆಂಗಳೂರಿನ ಕೆ.ಆರ್.ಪುರಂ ಬಳಿ ಕಳೆದ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ತುಂಡುಡುಗೆ ಹಾಕಿಕೊಂಡು ಹೋಗುತ್ತಿದ್ದ ಯುವತಿಯ ಮೇಲೆ ಕೆಲ ಯುವಕರು ಕೆಟ್ಟ ದೃಷ್ಟಿ ಬೀರಿದ್ದಾರೆ. ಈ ವೇಳೆ ಆ ಯುವಕರಿಂದ ಯುವತಿಯನ್ನು ಇದೇ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಲಕ್ಷ್ಮಿ ನರಸಮ್ಮ ರಕ್ಷಿಸಿದ್ದಾರೆ. ಬಳಿಕ ಯುವತಿಗೆ ಬುದ್ದಿವಾದ ಹೇಳೋಣ ಎಂದು ಕೆಲ ಮಾತುಗಳನ್ನು ಹೇಳಿದ್ದಾರೆ.
ಈ ರಸ್ತೆಯಲ್ಲಿ ಹುಡುಗರು ಕೆಟ್ಟದ್ದಾಗಿ ವರ್ತಿಸುತ್ತಾರೆ. ನೀವು ಸರಿಯಾಗಿ ಒಳ್ಳೆಯ ಬಟ್ಟೆ ಹಾಕಿಕೊಂಡು ಓಡಾಡಿ. ಯಾರಾದರೂ ಹುಡುಗಿಯರು ಸಿಗ್ತಾರಾ ಎಂದು ಹುಡುಗರು ಕಾಯುತ್ತಿರುತ್ತಾರೆ ಎಂದು ಹೋಮ್ ಗಾರ್ಡ್ ಸಿಬ್ಬಂದಿ ಲಕ್ಷ್ಮಿ ನರಸಮ್ಮ, ಯುವತಿಗೆ ಹೇಳಿದ್ದಾರೆ. ಇದರಿಂದ ಸಿಟ್ಟಾದ ದಾಮಿನಿ ಅಲಿಯಾಸ್ ಮೋಹಿನಿ ತಕ್ಷಣವೇ ಹೋಮ್ ಗಾರ್ಡ್ ಸಿಬ್ಬಂದಿ ಲಕ್ಷ್ಮಿ ನರಸಮ್ಮ ಅವರ ತಲೆ ಕೂದಲು ಜುಟ್ಟು ಹಿಡಿದುಕೊಂಡು ಎಳೆದಾಡಿ ಹೊಡೆದಿದ್ದಾರೆ. ಇದರಿಂದ ಲಕ್ಷ್ಮಿ ನರಸಮ್ಮ ಅವರ ಮುಖ, ಮೂಗಿನಲ್ಲಿ ರಕ್ತ ಬಂದಿದೆ. ತಕ್ಷಣವೇ ಸ್ಥಳದಲ್ಲಿದ್ದ ಜನರು ಬಂದು ಈ ಯುವತಿಯಿಂದ ಲಕ್ಷ್ಮಿ ನರಸಮ್ಮ ಅವರನ್ನು ಬಿಡಿಸಿ ರಕ್ಷಿಸಿದ್ದಾರೆ. ಬಳಿಕ ಹೋಮ್ ಗಾರ್ಡ್ಸ್ ಸಿಬ್ಬಂದಿ ಲಕ್ಷ್ಮಿ ನರಸಮ್ಮ ತಮ್ಮ ಮೇಲೆ ಹಲ್ಲೆ ಮಾಡಿದ ಯುವತಿ ದಾಮಿನಿ ಅಲಿಯಾಸ್ ಮೋಹಿನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಬಳಿಕ ಪೊಲೀಸರು ಬಂದು ದಾಮಿನಿ ಅಲಿಯಾಸ್ ಮೋಹಿನಿಯನ್ನು ಬಂಧಿಸಿದ್ದಾರೆ. ಬಳಿಕ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಕೋರ್ಟ್ ಈಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದೆ.
ಈ ದಾಮಿನಿ ಅಲಿಯಾಸ್ ಮೋಹಿನಿ, ಮಾಲ್ಡೀವ್ಸ್ ನ ಶಾಲೆಯಲ್ಲಿ ಓದಿದ್ದಾಳಂತೆ. ಬೆಂಗಳೂರಿನಲ್ಲಿ ಬಿಬಿಎಂ ಪದವಿ ಪಡೆದಿದ್ದಾಳೆ. ಆದರೇ, ಹಿರಿಯರ ಮಾತು ಅನ್ನು ಕೇಳುವ ಸೌಜನ್ಯ ಹಾಗೂ ಗೌರವಿಸುವ ಸೌಜನ್ಯವನ್ನು ಕಲಿತಿಲ್ಲ. ಇದರಿಂದಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಬೇಕಾದ ಅನಿವಾರ್ಯತೆ ತಂದುಕೊಂಡಿದ್ದಾಳೆ.
/filters:format(webp)/newsfirstlive-kannada/media/media_files/2026/01/12/girl-arrested-for-assaulting-home-guards-1-2026-01-12-16-07-14.jpg)
ಒಂದು ವೇಳೆ ಹೋಮ್ ಗಾರ್ಡ್ ಲಕ್ಷ್ಮಿ ನರಸಮ್ಮ ಅವರ ಮಾತು ಅನ್ನು ಒಪ್ಪದೇ ಇದ್ದರೂ, ಅದನ್ನು ಸೌಜನ್ಯವಾಗಿ ತಿಳಿಸಬಹುದಿತ್ತು. ನನ್ನ ಬಟ್ಟೆ, ನನ್ನ ಇಷ್ಟ ಎಂದು ಹೋಮ್ ಗಾರ್ಡ್ಸ್ ಲಕ್ಷ್ಮಿ ನರಸಮ್ಮಗೆ ಹೇಳಬಹುದಿತ್ತು. ಲಕ್ಷ್ಮಿ ನರಸಮ್ಮ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ಹೋಗಬಾರದಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us