Advertisment

ಡಿಜಿಟಲ್ ಅರೆಸ್ಟ್​; 30 ಲಕ್ಷ ರೂಪಾಯಿ ಕಳೆದುಕೊಂಡ ಮಾಜಿ ಶಾಸಕ.. ಯಾರಿದು?

ಮೊದಲಿಗೆ ಸೈಬರ್​ ಖದೀಮರು ಆಗಸ್ಟ್ 12ರಂದು ಸಿಬಿಐ ಆಫೀಸರ್ ಅಂತಾ ಮಾಜಿ ಶಾಸಕಗೆ ಫೋನ್​ ಮಾಡ್ತಾರೆ. ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್​ನಲ್ಲಿ ಭಾಗಿಯಾಗಿದ್ದೀರಿ. ಅಷ್ಟೇ ಅಲ್ಲದೇ, ನರೇಶ್ ಗೋಯಲ್ ಜೊತೆ ಅಕ್ರಮ ವ್ಯವಹಾರ ಮಾಡಿದ್ದೀರಿ ಅಂತ ಹೆದರಿಸಿದ್ದಾರೆ.

author-image
Bhimappa
GUNDAPPA_VAKIL
Advertisment

ಬೀದರ್​: ಔರದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್​ ಡಿಜಿಟಲ್ ಅರೆಸ್ಟ್…ಆಗಿ ಬರೋಬ್ಬರಿ 30 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಮಾಜಿ ಶಾಸಕರು ಸಿಬಿಐಗೆ ದೂರು ನೀಡಿದ್ದಾರೆ.

Advertisment

ಮಾಜಿ ಶಾಸಕ ಗುಂಡಪ್ಪ ವಕೀಲ್​ನಿಂದ ಹಂತ ಹಂತವಾಗಿ ಸೈಬರ್​ ಖದೀಮರು ಹಣವನ್ನ ದೋಚಿದ್ದಾರೆ. ಮೊದಲಿಗೆ ಸೈಬರ್​ ಖದೀಮರು ಆಗಸ್ಟ್ 12ರಂದು ಸಿಬಿಐ ಆಫೀಸರ್ ಅಂತಾ ಮಾಜಿ ಶಾಸಕ ಗುಂಡಪ್ಪ ವಕೀಲ್​ಗೆ ಫೋನ್​ ಮಾಡ್ತಾರೆ. ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್​ನಲ್ಲಿ ಭಾಗಿಯಾಗಿದ್ದೀರಿ. ಅಷ್ಟೇ ಅಲ್ಲದೇ ನರೇಶ್ ಗೋಯಲ್ ಜೊತೆ ಅಕ್ರಮ ವ್ಯವಹಾರ ಮಾಡಿದ್ದೀರಿ ಅಂತ ಹೆದರಿಸಿದ್ದಾರೆ.

ಇದಾದ ನಂತರ ಗುಂಡಪ್ಪ ವಕೀಲ್​ಗೆ ಆಗಸ್ಟ್ 13ರಂದು ಸಿಬಿಐ ಡಿಸಿಪಿ ಅಂತ ಮತ್ತೊರ್ವ ಕರೆ ಮಾಡಿದ್ದಾನೆ. ಡಿಜಿಟಲ್ ಅರೆಸ್ಟ್ ಆಗಿದ್ದೀರಾ, ಕಾಲ್ ಕಟ್ ಮಾಡಬೇಡಿ ಎಂದು ಹೆದರಿಸಿದ್ದರು. ಬಳಿಕ ಖದೀಮರು ಮಾಸ್ಟರ್​  ಪ್ಲಾನ್​ ಮಾಡಿ ಆನ್ಲೈನ್​ನಲ್ಲಿ ಫೇಕ್ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಹಾಲ್ ರೀತಿ ಸೆಟ್ಅಫ್ ಮಾಡಿ ನಂಬಿಕೆ  ಹುಟ್ಟಿಸಿದ್ದರು.

ನಿಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಿ ಎಂದು ಮೊದಲಿಗೆ 10 ಲಕ್ಷ ಹಣ ವರ್ಗಾಯಿಸಿಕೊಂಡಿದ್ದರು. ಬಳಿಕ ಪ್ರಾಪರ್ಟಿ ತನಿಖೆ ಮಾಡಬೇಕೆಂದು 20 ಲಕ್ಷ ಡೆಪಾಸಿಟ್ ಮಾಡಿಸಿಕೊಂಡಿದ್ದಾರೆ. ಹೀಗೆ ಖದೀಮರ ಮಾತು ನಂಬಿ ಹಂತ-ಹಂತವಾಗಿ 30 ಲಕ್ಷ 99 ಸಾವಿರ ಹಣ ವರ್ಗಾವಣೆ…ಮಾಡಿಕೊಂಡಿದ್ದಾರೆ. 

Advertisment

ಹಣ ಹಾಕಿಸಿಕೊಂಡು ತನಿಖೆ ಮುಗಿದ ನಂತರ ಮರಳಿ ಕೊಡುವುದಾಗಿ ನಂಬಿಸಿದ್ದರು. ಇದೀಗ ವರ್ಗಾಯಿಸಿದ ಹಣ ವಾಪಾಸ್ಸಾಗದೆ ಇದ್ದಾಗ ಮಾಜಿ ಶಾಸಕ ಗುಂಡಪ್ಪ ವಕೀಲ್​ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಜಿ ಶಾಸಕ ಗುಂಡಪ್ಪ ವಕೀಲ್ ನೀಡಿದ ದೂರಿನ ಅನ್ವಯ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

cyber fraud and digital arrest Crime News in Kannada
Advertisment
Advertisment
Advertisment