Advertisment

ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಬೀದರ್ ಮಹಿಳೆ ಸಾವು: ಪಾರ್ಥೀವ ಶರೀರ ತರಿಸಲು ಸರ್ಕಾರಕ್ಕೆ ಆಗ್ರಹ

ಸೌದಿ ಅರೇಬಿಯಾದ ಮದೀನಾದಲ್ಲಿ ನಿನ್ನೆ ಸಂಭವಿಸಿದ ಬಸ್- ಟ್ರಕ್ ಅಪಘಾತದಲ್ಲಿ 42 ಮಂದಿ ಭಾರತೀಯರು ಸಾವಿಗೀಡಾಗಿದ್ದಾರೆ. ಈ 42 ಮಂದಿಯಲ್ಲಿ ಬೀದರ್ ಜಿಲ್ಲೆಯ ರೆಹಮತ್ ಬಿ ಎಂಬ ಮಹಿಳೆಯೂ ಸೇರಿದ್ದಾರೆ. ಸೌದಿಯಿಂದ ಪಾರ್ಥೀವ ಶರೀರವನ್ನು ತರಿಸಿಕೊಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

author-image
Chandramohan
MADINA BUS ACCIDENT BIDAR WOMEN DEATH

ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತದಲ್ಲಿ ರೆಹಮತ್ ಬಿ ಸಾವು

Advertisment
  • ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತದಲ್ಲಿ ರೆಹಮತ್ ಬಿ ಸಾವು
  • ಬೀದರ್‌ ಮೈಲೂರು ನಗರದ ಸಿಎಂಸಿ ಕಾಲೋನಿಯಲ್ಲಿರುವ ರಹಮತ್ ನಿವಾಸ

ಸೌದಿ ಅರೇಬಿಯಾದಲ್ಲಿ ಸಂಭವಿಸಿದ   ಬಸ್ ಅಪಘಾತದಲ್ಲಿ  ಬೀದರ್ ಮೂಲದ ಮಹಿಳೆ ಸಾವನ್ನಪ್ಪಿದ್ದಾರೆ.  ಮೃತ ಮಹಿಳೆ ರಹಮತ್ ಬಿ (80) ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ  ಮುಗಿಲುಮುಟ್ಟಿದೆ.  ನವಂಬರ್  9  ರಂದು ಮೆಕ್ಕಾಗೆ ತೆರಳಲು, ಬೀದರ್‌ನಿಂದ ಹೈದ್ರಾಬಾದ್‌ಗೆ  ಮೃತ ಮಹಿಳೆ ರೆಹಮತ್ ಬಿ ತೆರಳಿದ್ದರು.  ಹೈದ್ರಾಬಾದ್‌ನಲ್ಲಿರುವ ಸಂಬಂಧಿ ಜೊತೆಗೆ ರೆಹಮತ್ ಬಿ ಮೆಕ್ಕಾಗೆ ತೆರಳಿದ್ದರು.  ಹೈದ್ರಾಬಾದ್‌ನಿಂದ ಸೌದಿ ಅರೇಬಿಯಾಗೆ ವಿಮಾನದಲ್ಲಿ ತೆರಳಿದ್ದರು. ಮೆಕ್ಕಾದಲ್ಲಿ 8 ದಿನ ಕಳೆದು ಮದಿನಾಗೆ ಬಸ್‌ನಲ್ಲಿ ತೆರಳುವ ವೇಳೆ ದುರಂತ ಸಂಭವಿಸಿದೆ. ಮದಿನಾದಿಂದ 25 ಕಿ‌.ಮೀ. ದೂರದಲ್ಲಿ ಸೋಮವಾರ ಸಂಭವಿಸಿದ್ದ ಭೀಕರ ಬಸ್  ಅಪಘಾತದಲ್ಲಿ ಭಾರತದ 42 ಮಂದಿ ಸಾವನ್ನಪ್ಪಿದ್ದಾರೆ.  42 ಮಂದಿಯ ಪೈಕಿ ಬೀದರ್‌ನ ರೆಹಮತ್ ಬಿ ಕೂಡ ಒಬ್ಬರು. 

Advertisment

ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಬೀದರ್‌ನ ಮೈಲೂರು ನಗರದ ಸಿಎಮ್‌ಸಿ ಕಾಲೋನಿಯಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದಾರೆ.  ನಮ್ಮ ಅಜ್ಜಿಯ ಮೃತದೇಹದ ಬಗ್ಗೆ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಕರ್ನಾಟಕದ  ಹಜ್ ಸಚಿವ ರಹೀಂಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.  ಬೀದರ್‌ ಜಿಲ್ಲೆಯವರೇ ಹಜ್ ಸಚಿವರಿದ್ದರೂ ಇಲ್ಲಿವರೆಗೂ ನಮ್ಮ ಮನೆಗೆ ಬಂದಿಲ್ಲ, ಸಾಂತ್ವನ ಹೇಳಿಲ್ಲ.  ನಮ್ಮ ಕುಟುಂಬಸ್ಥರನ್ನ ಸೌದಿ ಅರೇಬಿಯಾಗೆ ಕಳುಹಿಸಿ ಮೃತದೇಹ ತರಿಸಿಕೊಡುವ ವ್ಯವಸ್ಥೆ ಮಾಡಿಕೊಡುವಂತೆ ಕುಟುಂಬಸ್ಥರು  ರಾಜ್ಯ ಸರ್ಕಾರಕ್ಕೆ  ಮನವಿ ಮಾಡಿಕೊಂಡಿದ್ದಾರೆ.  ನಿನ್ನೆ ಇಡೀ ದಿನ ಬೀದರ್‌ನಲ್ಲೇ ಪ್ರವಾಸ ಕೈಗೊಂಡಿದ್ದ ಹಜ್ ಸಚಿವ ರಹೀಂಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ದಿನ ಬೀದರ್ ನಲ್ಲೇ ಇದ್ದರೂ, ಮೃತ ರಹಮತ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳುವ, ಪಾರ್ಥೀವ ಶರೀರವನ್ನು ಮದೀನಾದಿಂದ ತರಿಸುವ ವ್ಯವಸ್ಥೆ ಮಾಡಿಲ್ಲ ಎಂದು ರೆಹಮತ್ ಕುಟುಂಬಸ್ಥರು ಸಚಿವ ರಹೀಂಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

BIDAR WOMEN DIES IN SAUDI ARABIA BUS ACCIDENT
Advertisment
Advertisment
Advertisment