/newsfirstlive-kannada/media/media_files/2025/11/20/bidar-highway-robberry-2025-11-20-14-45-43.jpg)
ಬೀದರ್‌ನ ಬಸವ ಕಲ್ಯಾಣ ಹೈವೇನಲ್ಲೂ ಕಾರ್ ತಡೆದು ದರೋಡೆ!
ಬೆಂಗಳೂರು ದರೋಡೆ ಪ್ರಕರಣ ಬೆನ್ನಲ್ಲೇ, ಬೀದರ್‌ನಲ್ಲಿ ಮತ್ತೊಂದು ದರೋಡೆ ಕೇಸ್ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿ 23.90 ಲಕ್ಷ ರೂಪಾಯಿ ಮೌಲ್ಯ ಚಿನ್ನಾಭರಣ ದರೋಡೆ ಮಾಡಲಾಗಿದೆ. ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿ-65ರಲ್ಲಿ ನಿನ್ನೆ ಬೆಳ್ಳಂಬೆಳಿಗ್ಗೆ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರ್ ಟೈರ್ ಬಸ್ಟ್ (ಪಂಕ್ಚರ್) ಮಾಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಸುಮಾರು 1.60 ಲಕ್ಷ ನಗದು, 223 ಗ್ರಾಂ ಬಂಗಾರ ಸೇರಿ 23.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ಮಹಾರಾಷ್ಟ್ರದ ಯೇಥಗಾಂವ್‌ನಿಂದ ಹೈದ್ರಾಬಾದ್‌ಗೆ ತೆರಳುತ್ತಿದ್ದ ಕಾರು ಬಸ್ಟ್(ಪಂಕ್ಚರ್) ಮಾಡಿ ದರೋಡೆ ಮಾಡಿರುವುದು ವಿಶೇಷ.
ಹೈದ್ರಾಬಾದ್‌ನಲ್ಲಿದ್ದ ಮದುವೆ ರಿಶಪ್ಶನ್‌ಗೆ ಹೊರಟಿದ್ದ ಕಾರು ಅನ್ನು ದರೋಡೆ ಮಾಡಲಾಗಿದೆ. ನಿನ್ನೆ ಬೆಳಿಗ್ಗೆ 5 ಗಂಟೆಗೆ ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಗ್ರಾಮದ ಶಿವಾರದ ಎನ್.ಹೆಚ್. 65ರಲ್ಲಿ ಘಟನೆ ನಡೆದಿದೆ. ಹೈವೇ ಮೇಲೆ ಜಾಕ್ ಎಸೆದು ಕಾರಿನ ಟೈರ್ ಪಂಕ್ಚರ್ ಮಾಡಿ 6-8 ಜನ ಖದೀಮರಿಂದ ದರೋಡೆ ನಡೆದಿದೆ. ಕಾರು ನಿಲ್ಲಿಸುತ್ತಿದ್ದಂತೆ, ಸುತ್ತುವರೆದು ಕಾರಿನಲ್ಲಿದ್ದವರಿಗೆ ಚಾಕು & ಬಡಿಗೆ ತೋರಿಸಿ 23.90 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ. ದರೋಡೆ ಕುರಿತು ಯೇಥಗಾಂವ್ ಮೂಲದ ಪ್ರವೀಣ್ ಜರಗ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
/filters:format(webp)/newsfirstlive-kannada/media/media_files/2025/11/20/bidar-highway-robberry02-2025-11-20-14-49-49.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us