ಪೊಲೀಸ್ ಪೇದೆಯ ಕೊಂದು ಅನುಕಂಪದ ನೌಕರಿ ಪಡೆಯಲು ಪತ್ನಿ ಪ್ಲ್ಯಾನ್! : ವರದಕ್ಷಿಣೆ ಕಿರುಕುಳ ಕೇಸ್‌ಗೆ ಟ್ವಿಸ್ಟ್ ಕೊಟ್ಟ ಪೇದೆ

ಬೀದರ್ ಜಿಲ್ಲೆಯಲ್ಲೊಂದು ವಿಚಿತ್ರ ಕೇಸ್ ವರದಿಯಾಗಿದೆ. ಪೊಲೀಸ್ ಪೇದೆಯಾಗಿರುವ ಪತಿಯನ್ನು ಕೊಂದು ಅನುಕಂಪದ ನೌಕರಿ ಪಡೆಯಲು ಪತ್ನಿ ಪ್ಲ್ಯಾನ್ ಮಾಡಿದ್ದಾಳಂತೆ. ಹೀಗಾಂತ ಖುದ್ದು ಪೇದೆಯಾಗಿರುವ ಪತಿ ಮಚೇಂದ್ರ ಆರೋಪ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ.

author-image
Chandramohan
BIDAR POLICE DOWRY CASE TWIST

ಪತ್ನಿಯೇ ತನ್ನ ಹತ್ಯೆಗೆ ಯತ್ನಿಸಿದ್ದಾಳೆ ಎಂದ ಪತಿ ಮಚೇಂದ್ರ

Advertisment
  • ಪತ್ನಿಯೇ ತನ್ನ ಹತ್ಯೆಗೆ ಯತ್ನಿಸಿದ್ದಾಳೆ ಎಂದ ಪತಿ ಮಚೇಂದ್ರ
  • ಪೇದೆ ಮಚೇಂದ್ರರಿಂದ ಪತ್ನಿ ಸೀನಾ ವಿರುದ್ದ ಆರೋಪ
  • ತನ್ನನ್ನು ಕೊಂದು ಅನುಕಂಪದ ನೌಕರಿ ಪಡೆಯಲು ಪ್ಲ್ಯಾನ್ ಮಾಡಿದ್ದಾಳೆ -ಪತಿ

ಬೀದರ್ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸಟೇಬಲ್ ವಿರುದ್ಧ ಆತನ ಪತ್ನಿಯೇ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಳು. ಈಗ ಈ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.  ಪೊಲೀಸ್ ಕಾನ್ಸಟೇಬಲ್ ಮಚೇಂದ್ರ ವಿರುದ್ಧ ಆತನ ಪತ್ನಿ ಮಾಡಿದ್ದ ಆರೋಪ ಸುಳ್ಳೆಂದು ಮಚೇಂದ್ರ ಹೇಳಿದ್ದಾರೆ.  ಅನುಕಂಪದ ನೌಕರಿ ಪಡೆಯೊದಕ್ಕೆ ಊಟಕ್ಕೆ ವಿಷ ಬೆರೆಸಿ ಪತಿ ಕೊಲ್ಲಲು ಪತ್ನಿ  ಪ್ಲಾನ್ ಮಾಡಿದ್ದಳು ಎಂದು ಪೊಲೀಸ್ ಕಾನ್ಸಟೇಬಲ್ ಮಚೇಂದ್ರ ಆರೋಪಿಸಿದ್ದಾರೆ. ಪತ್ನಿ ಸೀನಾ ವಿರುದ್ಧ  ಪೊಲೀಸ್ ಕಾನ್ಸ್‌ಟೇಬಲ್ ಮಚೇಂದ್ರ ಗಂಭೀರ ಆರೋಪ ಮಾಡಿದ್ದಾರೆ.  ಪತಿ ಕೊಂದು, ಅನುಕಂಪದ ನೌಕರಿ ಪಡೆಯಬೇಕೆಂಬ ದುರುದ್ದೇಶದಿಂದ ನಾಟಕ ಮಾಡ್ತಿದ್ದಾಳೆಂದು ಆರೋಪ ಮಾಡಿದ್ದಾರೆ. ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಾ  ಇದ್ದರೂ,  ಕೇರ್ ಮಾಡಿಲ್ಲ  ಎಂದು ಪತ್ನಿ ವಿರುದ್ದ ಮಚೇಂದ್ರ ಆರೋಪಿಸಿದ್ದಾರೆ.  
ಸೆಟಲ್‌ಮೆಂಟ್ ಅಂತಾ ಕರೆದು ಹಲ್ಲೆ‌ ಮಾಡಿದ್ದಾರೆಂದು ಪತ್ನಿ ಕುಟುಂಬಸ್ಥರ ವಿರುದ್ದ ಪತಿ ಮಚೇಂದ್ರ ಆರೋಪಿಸಿದ್ದಾರೆ.  ಹುಮನಾಬಾದ್ ತಾಲೂಕಾ ಪಂಚಾಯತ್ ಕಚೇರಿ ಹತ್ತಿರ ಹಲ್ಲೆ ಮಾಡಿದ್ರು ಎಂದು ಪತಿ ಮಚೇಂದ್ರ ಆರೋಪಿಸಿದ್ದಾರೆ.   ವರದಕ್ಷಿಣೆ ಡಿಮ್ಯಾಂಡ್, ಮಕ್ಕಳಾಗಿಲ್ಲ ಅಂತಾ ಕಿರುಕುಳ ಅನ್ನೋದೆಲ್ಲಾ ಸುಳ್ಳು ಎಂದು ಕಾನ್ಸ್‌ಟೇಬಲ್ ಮಚೇಂದ್ರ ಆರೋಪಿಸಿದ್ದಾರೆ.  ಊಟಕ್ಕೆ ವಿಷಬೆರೆಸಿ ಕೊಲ್ಲಲು ಪತ್ನಿ ಯತ್ನಿಸಿದ್ದಾಳೆಂದು ಪತಿ ಪೊಲೀಸ್ ಕಾನ್ಸ್‌ಟೇಬಲ್ ಮಚೇಂದ್ರ ಆರೋಪಿಸಿದ್ದಾರೆ.  ತಾನು ಅನಾರೋಗ್ಯದಿಂದ  ಚಿಕಿತ್ಸೆ ಪಡೆಯುವ ಸಮಯದಲ್ಲಿ ಪತ್ನಿ ಆಸ್ಪತ್ರೆಗೂ ಬರಲಿಲ್ಲ, ಆರೋಗ್ಯ ವಿಚಾರಿಸಲೂ ಇಲ್ಲ.  ಹುಷಾರಿಲ್ಲಾ ಎಂದು  ಬೀದರ್ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಸ್ವಗ್ರಾಮಕ್ಕೆ ಬಂದಾಗ, ತವರು ಮನೆಗೆ ಹೋದಳು. ತನ್ನನ್ನು ಪತ್ನಿ  ಕೇರ್ ಮಾಡದೇ ಇರೋದಕ್ಕೆ ಜನವರಿ 2025 ರಲ್ಲಿ ಡಿವೋರ್ಸ್ ಗೆ ಕಾನ್ಸಟೇಬಲ್ ಮಚೇಂದ್ರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ  ಸೆಟಲ್‌ಮೆಂಟ್ ಗೆ ಅಂತಾ ಕರೆದು 1 ಕೋಟಿ ಡಿಮ್ಯಾಂಡ್ ಮಾಡಿದ್ರು, ಒಪ್ಪದೆ ಇದ್ದಾಗ ಹಲ್ಲೆ ಮಾಡಿದ್ದರು.  2025 ರ ಸೆಪ್ಟೆಂಬರ್ ತಿಂಗಳಲ್ಲಿ ಹುಮನಾಬಾದ್‌ನಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.  ಗಂಡನ ಕೊಂದು, ಅನುಕಂಪದ ಆಧಾರದ ನೌಕರಿ ಪಡೆಯುವುದು ಅವರ ಉದ್ದೇಶ ಎಂದು ಗಂಭೀರ ಆರೋಪ ಮಾಡಿದ್ದಾರೆ. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Dowry dowry death in KARNATAKA dowry harassment case
Advertisment