RMC ಯಾರ್ಡ್​ ಮಹಿಳೆ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್.. ಕ್ಲೀನ್ ಚಿಟ್

ಆರ್​​ಎಂಸಿ ಯಾರ್ಡ್​ ಮಹಿಳೆ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಎಸ್​ಐಟಿ ಬಿ ರಿಪೋರ್ಟ್​ ಸಲ್ಲಿಕೆ ಮಾಡಿದೆ. ಮಹಿಳೆ ಆರೋಪಕ್ಕೆ ಯಾವ ಸಾಕ್ಷಿಗಳು ಇಲ್ಲ. ಮಹಿಳೆ ಮಾತ್ರೆ ಸೇವಿಸುವ ಬಗ್ಗೆ ರಿಹರ್ಸಲ್ ಮಾಡಲಾಗಿದೆ.

author-image
Bhimappa
Munirathna
Advertisment

ಬೆಂಗಳೂರು: ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆರ್​​ಎಂಸಿ ಯಾರ್ಡ್​ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರಿಗೆ ಕ್ಲೀನ್ ಚೀಟ್ ಸಿಕ್ಕಿದೆ. 

ಆರ್​​ಎಂಸಿ ಯಾರ್ಡ್​ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಎಸ್​ಐಟಿ ಬಿ ರಿಪೋರ್ಟ್​ ಸಲ್ಲಿಕೆ ಮಾಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ.  ಮಹಿಳೆ ಆರೋಪಕ್ಕೆ ಯಾವ ಸಾಕ್ಷಿಗಳು ಇಲ್ಲ. ಮಹಿಳೆ ಮಾತ್ರೆ ಸೇವಿಸುವ ಬಗ್ಗೆ ರಿಹರ್ಸಲ್ ಮಾಡಲಾಗಿದೆ. 8 ಬಾರಿ ರಿಹರ್ಸಲ್ ಅನ್ನು ಮಹಿಳೆ ಮಾಡಿದ್ದರು. ಅಲ್ಲದೇ ಮಹಿಳೆ ದೇಹದಲ್ಲಿ ಮಾತ್ರೆಯ ಅಂಶ ಇಲ್ಲ. ಹೀಗಾಗಿ ಎಸ್​ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. 

ಇದನ್ನೂ ಓದಿ:ಆಸ್ಪತ್ರೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮಹಿಳೆ ಬಗ್ಗೆ ಶಾಸಕ RV ದೇಶಪಾಂಡೆ ಅವಹೇಳನಕಾರಿ ಹೇಳಿಕೆ

ಆಕೆ ನನಗೆ ಚೆನ್ನಾಗಿ ಪರಿಚಯ- ಮಹಿಳೆಯ ಗಂಭೀರ ಆರೋಪಕ್ಕೆ ಟ್ವಿಸ್ಟ್ ಕೊಟ್ಟ ಮುನಿರತ್ನ

ಎಸ್​​ಐಟಿಯು ಸಾಕ್ಷ್ಯಧಾರ ಕೊರತೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ಮಹಿಳೆ ಮಾತ್ರೆ ಸೇವಿಸುವಾಗ 8 ಬಾರಿ ರಿಹರ್ಸಲ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಮಹಿಳೆ ದೇಹದಲ್ಲಿ ನಿದ್ದೆ ಮಾತ್ರೆ ಸೇವಿಸಿರುವುದಕ್ಕೆ ದೇಹದಲ್ಲಿ ಯಾವುದೇ ಅಂಶ ಇಲ್ಲ. ಶಾಸಕ ಮುನಿರತ್ನನ ವಿರುದ್ಧ ಮಹಿಳೆ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ. 

ಈ ಸಂಬಂಧ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಮುನಿರತ್ನ ಅವರು, ಲೋಕಸಭೆ ಚುನಾವಣೆಯಲ್ಲಿ ಯಾವಾಗ ಡಿ.ಕೆ ಸುರೇಶ್ ಅವರು ಸೋತರೋ ಅವಾಗಿಂದ ನನಗೆ ಸಮಸ್ಯೆಗಳು ಬರಲು ಶುರುವಾದವು. ತಲೆ ಮೇಲೆ ಮೊಟ್ಟೆ ಹೊಡೆದರು. ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸಿದರು. ನನ್ನ ಬಗ್ಗೆ ಕೆಟ್ಟದಾಗಿರುವ ಪೋಸ್ಟರ್​ಗಳನ್ನು ಅಂಟಿಸಿದರು. ಒಬ್ಬ ಮಹಿಳೆ ಎಂಎಲ್​ಎ ಸ್ಥಾನ ಸಿಕ್ಕಿಲ್ಲ ಎಂದು ಇಷ್ಟೊಂದೆಲ್ಲಾ ಮಾಡೋದಾ?. ಒಂದು ಕ್ಷೇತ್ರ ಎಂದ ಮೇಲೆ ಯಾರಾದರು ಒಬ್ಬರು ಗೆಲ್ಲುತ್ತಾರೆ, ಇನ್ನೊಬ್ಬರು ಸೋಲುತ್ತಾರೆ. ಆದರೆ ಇದನ್ನೇ ವೈಯಕ್ತಿಕವಾಗಿ ತೆಗೆದುಕೊಂಡು, ದ್ವೇಷ ಸಾಧಿಸುವುದು ಎಷ್ಟು ಸರಿ ಎಂದು ಮುನಿರತ್ನ ಅವರು ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MLA Munirathna
Advertisment