ಲಕ್ಷಾಂತರ ಜನರ ಧಾರ್ಮಿಕ ಕ್ಷೇತ್ರವಾಗಿದ್ದ ಧರ್ಮಸ್ಥಳದ ಕುರಿತು ಇಂತಹ ಸುಳ್ಳು ಹಬ್ಬಿಸಿದ್ದು ಯಾರು?. ನಾನು ಹೇಳಿರುವುದೆಲ್ಲ ಸುಳ್ಳು ಕಥೆ ಎಂದು ಚಿನ್ನಯ್ಯ ವಿಚಾರಣೆ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ. ಆದರೆ ಪಾತ್ರಧಾರಿ ಚಿನ್ನಯ್ಯನ ಹಿಂದೆ ಇರುವಂತಹ ಆ ಸೂತ್ರಧಾರಿಗಳು ಯಾರು ಎನ್ನುವುದು ತನಿಖೆಯಿಂದಲೇ ಗೊತ್ತಾಗಬೇಕಿದೆ. ಚಿನ್ನಯ ಅರೆಸ್ಟ್ ಆದ ಮೇಲೆ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಮೀಷಗಳಿಗೆ ಒಳಗಾಗಿ ಸುಳ್ಳು ಹೇಳಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಾನು ಪಾತ್ರಧಾರಿ ಮಾತ್ರ, ಸೂತ್ರಧಾರಿಗಳು ಬೇರೆನೆ ಇದ್ದಾರೆ ಎಂದು ಚಿನ್ನಯ್ಯ ಸ್ಪೋಟಕ ಮಾಹಿತಿ ಎಸ್‌ಐಟಿ ಅಧಿಕಾರಿಗಳಿಗೆ ನೀಡಿದ್ದಾನೆ. ನನಗೆ ಈ ರೀತಿ ಹೇಳಲು ಹೇಳಿದರು. ಆ ರೀತಿ ಹೇಳಿದೆ. ಬುರುಡೆ ತೆಗೆದುಕೊಂಡು ಕೋರ್ಟ್ಗೆ ಒಪ್ಪಿಸು ಅಂತ ಹೇಳಿದರು. ಅದರಂತೆ ನಾನು ಬುರುಡೆನ ಕೋರ್ಟ್ಗೆ ಒಪ್ಪಿಸಿದೆ. ಆ ಬುರುಡೆ ಎಲ್ಲಿಂದ ಬಂತು ಎಂಬುದು ನನಗೆ ಗೊತ್ತಿಲ್ಲ ಎಂದು ಚಿನ್ನಯ್ಯ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ