/newsfirstlive-kannada/media/post_attachments/wp-content/uploads/2024/11/BMTC_BUS.jpg)
ಬಿಎಂಟಿಸಿ ಬಸ್ ಡಿಕ್ಕಿಯಿಂದ ವೃದ್ಧ ವ್ಯಕ್ತಿ ಸಾವು
ಬೆಂಗಳೂರು: ನಗರದಲ್ಲಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ಮತ್ತೊಂದು ಜೀವ ಬಲಿ ಪಡೆದುಕೊಂಡಿದೆ. ಬಿಎಂಟಿಸಿ ಬಸ್ನಿಂದ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಉಸಿರು ಚೆಲ್ಲಿದ್ದಾರೆ.
ವೃದ್ಧ ಶಂಕರ್ ನಾರಾಯಣ್ (76) ಜೀವ ಕಳೆದುಕೊಂಡವರು. ಓ ಫಾರ್ಮ್ ಕಡೆಯಿಂದ ಚನ್ನಸಂದ್ರ ಕಡೆಗೆ ಬರುತ್ತಿದ್ದ ಬಿಎಂಟಿಸಿ ಬಸ್ ವೃದ್ಧನಿಗೆ ಡಿಕ್ಕಿ ಹೊಡೆದಿತ್ತು. ನಿನ್ನೆ ರಾತ್ರಿ 8:30ರ ಸುಮಾರಿಗೆ ರಸ್ತೆ ದಾಟುತ್ತಿದ್ದಾಗ ಬಿಎಂಟಿಸಿ ಬಸ್ ವೃದ್ಧನಿಗೆ ಗುದ್ದಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಶಂಕರ್ ನಾರಾಯಣ್ ಜೀವ ಬಿಟ್ಟಿದ್ದಾರೆ. ಶಂಕರ್ ನಾರಾಯಣ್ ಅವರು ದೇವಾಲಯದ ಅರ್ಚಕರಾಗಿದ್ದರು. ದೇವಾಲಯದ ಪೂಜೆ ಮುಗಿಸಿಕೊಂಡು ದೇವಾಲಯಕ್ಕೆ ಬಾಗಿಲು ಹಾಕಿ ಶಂಕರ್ ನಾರಾಯಣ್ ಅವರು ಮನೆಗೆ ಹೊರಟಿದ್ದರು. ಈ ವೇಳೆ ಬಿಎಂಟಿಸಿ ಬಸ್ , ಶಂಕರ್ ನಾರಾಯಣ್ ಅವರಿಗೆ ಡಿಕ್ಕಿ ಹೊಡೆದಿದೆ. ಚನ್ನಸಂದ್ರದ ಎಂವಿಜಿ ಕಾಲೇಜು ಬಸ್ ನಿಲ್ದಾಣದ ಬಳಿ ಅಪಘಾತ ನಡೆದಿದೆ.
ಬಸ್ ಅಪಘಾತದಿಂದ ಮೃತಪಟ್ಟ ಶಂಕರನಾರಾಯಣ್.
ಸದ್ಯ ಈ ಸಂಬಂಧ ಬಿಎಂಟಿಸಿ ಬಸ್ ಡ್ರೈವರ್ ಗಂಗರಾಜುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಹದೇವಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇತ್ತೀಚೆಗೆ ನಡೆದ ಬಿಎಂಟಿಸಿ ಬಸ್ ಅಪಘಾತಗಳು
ನಗರದ ಕೆಆರ್ ಮಾರುಕಟ್ಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಬಿಎಂಟಿಸಿ ಬಸ್ ಹರಿದು ಶಬರೀಶ್ (10) ಎಂಬ ಬಾಲಕ ಉಸಿರು ಚೆಲ್ಲಿದ್ದನು. ಇದಾದ ಮೇಲೆ 10 ವರ್ಷದ ಬಾಲಕಿಯ ತಲೆ ಮೇಲೆ ಬಿಎಂಟಿಸಿ ಬಸ್ ಚಕ್ರ ಹರಿದು ಸ್ಥಳದಲ್ಲೇ ಜೀವ ಚೆಲ್ಲಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ಬಳಿ ನಡೆದಿತ್ತು. ಬಿಎಂಟಿಸಿ ಬಸ್ ಹರಿದ ಪರಿಣಾಮ ವ್ಯಕ್ತಿ ಸಂಪಂಗಿ ಎನ್ನುವರು ಸ್ಥಳದಲ್ಲೇ ಉಸಿರು ಚೆಲ್ಲಿದ ಘಟನೆ ಜಯನಗರದ 4ನೇ ಬ್ಲಾಕ್‌ನಲ್ಲಿ ನಡೆದಿತ್ತು. ಒಂದು ತಿಂಗಳ ಒಳಗಾಗಿ 8 ಮಂದಿಯನ್ನು ಬಿಎಂಟಿಸಿ ಬಲಿ ಪಡೆದಂತೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ