/newsfirstlive-kannada/media/media_files/2025/11/05/youth-suicide-bcoz-of-women-sexual-advances-2025-11-05-13-18-31.jpg)
ಮಹಿಳೆ ಶಾರದಾ ಹಾಗೂ ಮೃತ ಯುವಕ ನಿಖಿಲ್ ಕುಮಾರ್
38 ವರ್ಷದ ಮಹಿಳೆಯ ಕಾಮದಾಟಕ್ಕೆ 19 ವರ್ಷದ ಯುವಕ ಬಲಿಯಾಗಿದ್ದಾನೆ. ಮಹಿಳೆಯ ಲೈಂಗಿಕ ಪ್ರಚೋದನೆ ತಾಳಲಾರದೆ ಯುವಕ ನೇಣಿಗೆ ಶರಣಾಗಿರುವ ಅನುಮಾನ ವ್ಯಕ್ತವಾಗಿದೆ. ವಿಚ್ಛೇದಿತ ಮಹಿಳೆಯೊಂದಿಗೆ ಸಂಬಂಧದಲ್ಲಿದ್ದ ನಿಖಿಲ್ ಕುಮಾರ್ ಎಂಬ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 38 ವರ್ಷದ ಶಾರದ ಎಂಬುವರೊಂದಿಗೆ ಅಕ್ರಮ ಸಂಬಂಧವನ್ನು ನಿಖಿಲ್ ಹೊಂದಿದ್ದ. ಯುವಕನ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಶಾರದ ಮಾತ್ರ ಯುವಕನನ್ನು ಬಿಟ್ಟಿರಲಿಲ್ಲ.
ಯುವಕನ ಪೋಷಕರ ಕಣ್ತಪ್ಪಿಸಿ ಕಾರಿನ ಡಿಕ್ಕಿಯಲ್ಲಿ ಯುವಕನನ್ನು ಹೊರಗಡೆ ಶಾರದ ಕರೆದೊಯ್ಯುತ್ತಿದ್ದಳಂತೆ. ಕಳ್ಳತನ ಪ್ರಕರಣಗಳಲ್ಲಿ ಯುವಕನನ್ನ ಶಾರದ ತೊಡಗಿಸಿದ್ದಳು.
ಹಲವು ವರ್ಷಗಳ ಹಿಂದೆ ಗಂಡನಿಗೆ ವಿಚ್ಚೇದನವನ್ನು ಶಾರದ ನೀಡಿದ್ದಳು. ತನ್ನ ಇಬ್ಬರು ಮಕ್ಕಳೊಂದಿಗೆ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ಶಾರದ ವಾಸವಿದ್ದಳು.
ಚಿಂತಾಮಣಿ ತಾಲ್ಲೂಕಿನ ಕಾಚಹಳ್ಳಿ ಕೆರೆಯ ಬಳಿ ಮರವೊಂದರಲ್ಲಿ ನೇಣು ಬಿಗಿದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಈಗ ಮೃತ ನಿಖಿಲ್ ಕುಮಾರ್ ಪೋಷಕರು ಶಾರದ ವಿರುದ್ಧ ದೂರು ನೀಡಿದ್ದಾರೆ. ಆಕೆಯ ಕಿರುಕುಳ, ತೊಂದರೆಯಿಂದಲೇ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
/filters:format(webp)/newsfirstlive-kannada/media/media_files/2025/11/05/chikkabalapura-sp-office-2025-11-05-13-20-38.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us