/newsfirstlive-kannada/media/media_files/2026/01/26/rajeev-gowda-arrested-2026-01-26-18-10-46.jpg)
ರಾಜೀವ್ ಗೌಡನನ್ನು ಬಂಧಿಸಿದ್ದು ಹೇಗೆ ಗೊತ್ತಾ?
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತ ಗೌಡಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ರಾಜೀವ್ ಗೌಡನನ್ನು ನಿನ್ನೆ ಕೇರಳದಲ್ಲಿ ಬಂಧಿಸಲಾಗಿದೆ. ರಾಜೀವ್ ಗೌಡಗೆ ಆಶ್ರಯ ನೀಡಿದ್ದ ಬ್ಯುಸಿನೆಸ್ ಪಾರ್ಟನರ್ ಮೈಕೆಲ್ ರಿಗೋ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಇಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂದು ರಾಜೀವ್ ಗೌಡನನ್ನು ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದಾರೆ.
ಇನ್ನೂ ರಾಜೀವ್ ಗೌಡ ಬಂಧನ ಕೇಸ್‌ಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ರಾಜೀವ್ ಗೌಡ ಪ್ರಯಾಣಿಸುತ್ತಿದ್ದ ಕಾರಿನ ಜಿಪಿಎಸ್ ಹಾಗೂ ಫಾಸ್ಟ್ ಟ್ಯಾಗ್ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕುಶಾಲ್ ಚೌಕ್ಸೆ ಮಹತ್ವದ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 14 ಕ್ಕೆ ರಾಜೀವ್ ಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಪೌರಾಯುಕ್ತೆ ಅಮೃತಾ ಗೌಡ ಬೆದರಿಕೆ ಹಾಕಿದ್ದರಿಂದ ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ಆರೋಪಿ ರಾಜೀವ್ ಗೌಡ ಎಸ್ಕೇಪ್ ಆಗಿದ್ದ. ಬೆಂಗಳೂರು ಬಿಟ್ಟು, ಬೇರೆ ಕಡೆ ಹೋಗಿದ್ದಾರೆ ಎಂಬ ಮಾಹಿತಿ ಇತ್ತು . ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿದ್ದೇವೆ. ಆರೋಪಿ ಕೇರಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಜೊತೆ ಇನ್ನೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರುನಿಂದ ಕೇರಳ ಕಡೆ ಹೋಗಿದ್ದಾರೆ. ರಾಜೀವ್ ಗೌಡ ಬ್ಯುಸಿನೆಸ್ ಪಾರ್ಟನರ್ ಮೈಕೆಲ್ ರಿಗೋ, ಪರ್ನಿಚರ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಮಾರುತಿ ಬ್ರೀಜಾ ಕಾರಿನಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಇಲಾಖೆಯಿಂದ ಶೇ.100 ರಷ್ಟು ಪ್ರಯತ್ನ ಮಾಡಿದ್ದೇವೆ. ಶಿಡ್ಲಘಟ್ಟ ಪೊಲೀಸ್ ಠಾಣೆ, ಸೈಬರ್ ಠಾಣೆ, ಚಿಂತಾಮಣಿ ಠಾಣೆ ಇನ್ಸ್ ಪೆಕ್ಟರ್ ತನಿಖೆ ಮಾಡುತ್ತಿದ್ದಾರೆ. ಮೂರು ತಂಡಗಳ ನೇತೃತ್ವದಲ್ಲಿ ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪೌರಾಯುಕ್ತೆ ಜೀವ ಬೆದರಿಕೆ ಪ್ರಕರಣದಲ್ಲಿ ಮೊದಲು 2 ಎಫ್ಐಆರ್ ದಾಖಲಾಗಿದೆ. ಒಂದು ಪೌರಾಯುಕ್ತೆ ನೀಡಿದ್ದ ದೂರಿನ ಎಫ್‌ಐಆರ್ , ಮತ್ತೊಂದು ಶ್ರೀನಿವಾಸ್ ಎಂಬ ಜೆಡಿಎಸ್ ಮುಖಂಡ ನೀಡಿದ್ದ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಮತ್ತೊಂದು ಬೆದರಿಕೆ ಪತ್ರದ ಬಗ್ಗೆಯೂ ಎಫ್ಐಆರ್ ದಾಖಲಾಗಿದೆ. ಒಟ್ಟು ಮೂರು ಎಫ್ಐಆರ್ ದಾಖಲಾಗಿದೆ.
ಕಾರಿನ ಜಿಪಿಎಸ್, ಫಾಸ್ಟ್ ಟ್ಯಾಗ್ ಆಧಾರದ ಮೇಲೆ ಆರೋಪಿ ಬಂಧನ ಮಾಡಲಾಗಿದೆ. ಜನವರಿ 16 ಕ್ಕೆ ರಾಜೀವ್ ಗೌಡ ಮಂಗಳೂರಿಗೆ ಭೇಟಿ ನೀಡಿದ್ದ. ನಂತರ ನಾಲ್ಕು ದಿನಗಳು ಅಲ್ಲಿಯೇ ತಂಗಿದ್ದ ರಾಜೀವ್ ಗೌಡ, ಬಳಿಕ ಕೇರಳ ಕಡೆಗೆ ಹೋಗಿದ್ದಾರೆ. ಮಂಗಳೂರಿನಲ್ಲಿ ಕಾರ್ ಅನ್ನು ಏಕೆ ಪಾರ್ಕಿಂಗ್ ಮಾಡಿದ್ದರು ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಮೊಬೈಲ್ ಆಡಿಯೋ ವಿಚಾರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ರಾಜೀವ್ ಗೌಡ ಸ್ಪಂದಿಸುತ್ತಿದ್ದಾರೆ. ಶಿಡ್ಲಘಟ್ಟ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ರಾಜೀವ್ ಗೌಡರನ್ನು ಬಂಧಿಸಿದ್ದಾರೆ. ಕೇರಳದ ಮಲ್ಲಪುರಂ ಜಿಲ್ಲೆ ವಾಜಿಕಡೈ ಬಳಿ ಬಂಧನ ಮಾಡಲಾಗಿದೆ. ಕಾನೂನಿನ ಪ್ರಕಾರ ಯಾವ ರೀತಿ ತನಿಖೆ ಆಗಬೇಕೋ ಅದೇ ರೀತಿ ತನಿಖೆ ನಡೆಯುತ್ತಿದೆ. ತನಿಖೆಗೆ ರಾಜೀವ್ ಗೌಡ ಕುಟುಂಬ ಪೊಲೀಸರೊಂದಿಗೆ ಸ್ಪಂದಿಸಿಲ್ಲ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಆದ್ರೆ ಅದಕ್ಕೂ ಮುನ್ನಾ ಎಲ್ಲೆಲ್ಲಿ ಹೋಗಿದ್ದಾರೆ ಎಂಬುವುದು ವಿಚಾರಣೆ ಬಳಿಕ ತಿಳಿಯಲಿದೆ ಎಂದು ಚಿಕ್ಕಬಳ್ಳಾಪುರ ಎಸ್.ಪಿ. ಕುಶಾಲ್ ಚೌಕ್ಸೆ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2026/01/14/complaiant-against-rajeev-gowda-2026-01-14-15-51-55.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us