/newsfirstlive-kannada/media/media_files/2025/09/11/chikkaballapura-line-man-2025-09-11-09-54-28.jpg)
ಚಿಕ್ಕಬಳ್ಳಾಪುರ: ವಿದ್ಯುತ್ ಶಾಕ್​ ತಗುಲಿ ಜೀವ ಕಳೆದುಕೊಂಡಿದ್ದ ಬೆಸ್ಕಾಂ ಗುತ್ತಿಗೆ ಕಾರ್ಮಿಕನನ್ನ ಲೈನ್​ಮ್ಯಾನ್ ರಹಸ್ಯವಾಗಿ ಹೂತಿಟ್ಟಿರುವ ಆರೋಪ ಕೇಳಿಬಂದಿದೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬಂದಾರ್ಲಹಳ್ಳಿ ಕೆರೆ ಬಳಿ ನಡೆದಿದೆ.
ಆಗಿದ್ದೇನು..?
ಬೀಚಗಾನಹಳ್ಳಿ ಗ್ರಾಮದ ಗುತ್ತಿಗೆ ಕಾರ್ಮಿಕ ರವಿ ಮೃತ ದುರ್ದೈವಿಯಾಗಿದ್ದಾನೆ. ಮೃತ ರವಿ ವಿದ್ಯುತ್ ಕಂಬದಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ಹರಿದು ಸುಟ್ಟು ಕರಕಲಾಗಿದ್ದ ಎನ್ನಲಾಗಿದೆ. ಈ ವಿಚಾರವನ್ನು ಲೈನ್​ಮ್ಯಾನ್​ ಚಂದ್ರಕುಮಾರ್ ಯಾರಿಗೂ ತಿಳಿಸದೆ ಗುಂಡಿ ತೋಡಿ ರವಿ ಮೃತದೇಹವನ್ನು ಹೂತಿಟ್ಟಿದ್ದ ಎನ್ನಲಾಗಿದೆ.
ಕೆಲಸಕ್ಕೆ ಹೋಗಿದ್ದ ಮಗ ಮೂರು ದಿನಗಳಾದರೂ ಬಾರದೇ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸ್​​ ಠಾಣೆಗೆ ದೂರು ನೀಡಿದ್ದರು. ಗುಡಿಬಂಡೆ ಪೊಲೀಸರು ಅನುಮಾನಗೊಂಡು ಚಂದ್ರ ಕುಮಾರ್​ನ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ತಾನೇ ಮೃತ ರವಿಯನ್ನ ಯಾರಿಗೂ ಗೊತ್ತಿಲ್ಲದಂತೆ ಹೂತು ಹಾಕಿದ್ದೀನಿ ಅಂತ ಆರೋಪಿ ಚಂದ್ರ ಕುಮಾರ್ ಒಪ್ಪಿಕೊಂಡಿದ್ದಾನೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್​ಪಿ ಕುಶಲ್ ಚೌಕ್ಸೆ ಹಾಗೂ ಗುಡಿಬಂಡೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಚಂದ್ರ ಕುಮಾರ್​ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಇದು ಕೊಲೆಯೋ ಅಥವಾ ಆಕಸ್ಮಿಕವಾಗಿ ನಡೆದ ಘಟನೆಯೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅರೆಸ್ಟ್.. ಏನಾಯ್ತು..? | VIDEO
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us