/newsfirstlive-kannada/media/media_files/2026/01/14/complaiant-against-rajeev-gowda-2026-01-14-15-51-55.jpg)
ಎಫ್ಐಆರ್ ರದ್ದು ಕೋರಿದ್ದ ರಾಜೀವ್ ಗೌಡ ಅರ್ಜಿ ವಜಾ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಬೆದರಿಕೆ ಕೇಸ್ ನ ಎಫ್ಐಆರ್ ರದ್ದು ಕೋರಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ. ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿದ್ದ ರಾಜೀವ್ ಗೌಡಗೆ ಶಾಕ್ ಆಗಿದೆ. ಯಾವುದೇ ರಕ್ಷಣೆ ನೀಡದೇ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ರಾಜೀವ್ ಗೌಡ ಅವರ ಅರ್ಜಿಗಳಲ್ಲಿ ಯಾವುದೇ ಮೆರಿಟ್ ಇಲ್ಲ. ಹೀಗಾಗಿ, ಅವುಗಳನ್ನು ವಜಾಗೊಳಿಸಲಾಗಿದೆ. ಹಾಲಿ ಅರ್ಜಿಗಳನ್ನು ಪರಿಗಣಿಸುವ ಸಂಬಂಧ ಈ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದರಿಂದಾಗಿ ತಲೆ ಮರೆಸಿಕೊಂಡಿರುವ ರಾಜೀವ್ ಗೌಡಗೆ ಈಗ ಬಂಧನದಿಂದ ಯಾವುದೇ ರಕ್ಷಣೆ ಹೈಕೋರ್ಟ್ ನಿಂದ ಸಿಕ್ಕಿಲ್ಲ. ರಾಜೀವ್ ಗೌಡನನ್ನು ಪತ್ತೆ ಹಚ್ಚಿ ಬಂಧಿಸಲು ಚಿಕ್ಕಬಳ್ಳಾಪುರ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಾಜೀವ್ ಗೌಡ ವಿರುದ್ಧ ಪೋಕ್ಸೋ, ಬೆದರಿಕೆ, ಕೊಲೆ ಯತ್ನ ಸೇರಿದಂತೆ 16 ಕ್ರಿಮಿನಲ್ ಕೇಸ್ ಗಳಿವೆ. ಈತ ಸಾಮಾನ್ಯ ವ್ಯಕ್ತಿಯಲ್ಲ. ನಟೋರಿಯಸ್ ವ್ಯಕ್ತಿ ಎಂದು ಚಿಕ್ಕಬಳ್ಳಾಪುರ ಎಸ್.ಪಿ.ಕುಶಾಲ್ ಚೌಕ್ಸೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us