/newsfirstlive-kannada/media/media_files/2026/03/01/alllipura-village-in-mourning-2-2026-03-01-18-38-57.jpg)
1986 ರಲ್ಲಿ ಅಲಿಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಆಯತೊಲ್ಲಾ ಅಲಿ ಖಮೇನಿ
ಇತ್ತ ಇರಾನ್​ನ ಸರ್ವೋಚ್ಛ ನಾಯಕ ಖಮೇನಿಯ ಹತ್ಯೆಯಾಗಿರೋ ಸುದ್ದಿ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ತೀವ್ರ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಶೋಕಾಚರಣೆ ಮಾಡಲಾಗಿದೆ. ಅಲ್ಲದೆ ಬೆಂಗಳೂರಿನಲ್ಲೂ ಖಮೇನಿ ಹತ್ಯೆಗೆ ಶಿಯಾ ಪಂಗಡದ ಮುಸ್ಲಿಮರು ಶೋಕಾಚರಣೆ ಮಾಡಿದ್ದಾರೆ.
ಇರಾನ್ ಮೇಲೇ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಮೂರನೇ ಯುದ್ಧನಾ ಅಂತ ಕಾದು ನೋಡುವಂತೆ ಮಾಡಿದೆ. ಇರಾನ್ ಸುಪ್ರೀಂ ಲೀಡರ್ ಅಯಾತೊಲ್ಲ ಅಲಿ ಖಮೇನಿ ಹತ್ಯೆ.. ಖಮೇನಿ ಸಾವಿನಪ್ಪಿರುವ ಸುದ್ದಿ ಕೇಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಅಲೀಪುರ ಗ್ರಾಮದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. 3 ದಿನಗಳ ಕಾಲ ಬ್ಲಾಕ್ ಡೇ ಅಂದ್ರೆ ಕರಾಳ ದಿನ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೆ ಇರಾನ್​ ಬಾವುಟ.. ಖಮೇನಿ ಜೊತೆ ಮೃತಪಟ್ಟವರ ಫೋಟೋ ಬ್ಯಾನರ್​ಗಳನ್ನ ಹಾಕಿ ಶೋಕಾಚರಣೆ ಮಾಡಲಾಗ್ತಿದೆ. ಸದ್ಯ ಅಲೀಪುರ ಗ್ರಾಮ ಮೌನಕ್ಕೆ ಜಾರಿದ್ದು, ಇಲ್ಲಿನ ಜನ ಕಣ್ಣೀರು ಹಾಕುತ್ತಿದ್ದಾರೆ.
ಬೇಬಿ ಅಫ್ ಇರಾನ್ ಅoತಲೇ ಕರೆಸಿಕೊಳ್ಳುವ ಅಲೀಪುರ ಗ್ರಾಮಕ್ಕೆ 1986 ರಲ್ಲಿ ಖಮೇನಿ ಭೇಟಿ ನೀಡಿದ್ರು. ಇವರ ಹೆಸರಲ್ಲಿ ಆಸ್ಪತ್ರೆ ಸಹ ಈ ಗ್ರಾಮದಲ್ಲಿದೆ. 25 ಸಾವಿರ ಜನಸಂಖ್ಯೆ ಈ ಗ್ರಾಮದಲ್ಲಿದೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಬದಲಾಗೋ ಹಂತದಲ್ಲಿದೆ. ದೊಡ್ಡ ಜನಸಂಖ್ಯೆಯ ಪಟ್ಟಣವಾಗಿ ಬೆಳೆದಿರೋ ಅಲೀಪುರದಲ್ಲಿ ಈಗಲೂ ಒಂದೇ ಒಂದು ಮದ್ಯದ ಅಂಗಡಿ, ಚಿತ್ರಮಂದಿರವೂ ಇಲ್ಲ ಅನ್ನೋದು ಅಚ್ಚರಿ ಮತ್ತು ವಿಶೇಷ.
/filters:format(webp)/newsfirstlive-kannada/media/media_files/2026/03/01/alllipura-village-in-mourning-3-2026-03-01-18-40-10.jpg)
ಮೃತ ಖಮೇನಿ ಹೆಸ್ರಲ್ಲಿ ಆಸ್ಪತ್ರೆ ಸಹ ಈ ಗ್ರಾಮದಲ್ಲಿದೆ. ಖಮೇನಿ ಅಂದ್ರೆ ಇಲ್ಲಿನ ಜನರಿಗೆ ಪೂಜ್ಯ ಮತ್ತು ಗೌರವ ಭಾವ. ಹಾಗಾಗಿ ಅವರ ಸಾವಿನ ಸುದ್ದಿಯಿಂದ ಅಲೀಪುರ ಸ್ತಬ್ಧವಾಗಿತ್ತು. ಸಂಜೆ ಆಗ್ತಿದ್ದಂತೆ ಖಮೇನಿ ಹತ್ಯೆ ಖಂಡಿಸಿ ಗ್ರಾಮದ ಜಾಫ್ರಿಯಾ ಮಸೀದಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೃಹತ್ ಜಾಥಾದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ರು.
ಖಮೇನಿ ಹತ್ಯೆ ಖಂಡಿಸಿ ಇತ್ತ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಲಾಯ್ತು. ರಿಚ್ಮಂಡ್ ಸರ್ಕಲ್ ಬಳಿ ಇರೋ ಮಸೀದಿ ಬಳಿ ಬ್ಲಾಕ್ ಡೇ ಱಲಿ ನಡೆಸಲಾಯ್ತು. ಈ ಱಲಿಯಲ್ಲಿ ಕಾಂಗ್ರೆಸ್​ ಶಾಸಕ ಹ್ಯಾರಿಸ್​ ಕೂಡ ಭಾಗಿಯಾಗಿದ್ರು.
ಇರಾನ್-ಇಸ್ರೇಲ್‌ನ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ಕರ್ನಾಟಕದ ಹಲವೆಡೆ ಖಮೇನಿ ಅಭಿಮಾನಿಗಳು ಇದು ಶಿಯಾ ಸಮುದಾಯದ ಟಾರ್ಗೆಟ್​ ಅಂತ ಹೇಳ್ತಿದ್ದಾರೆ. ಇದಕ್ಕೆ ಅರಬ್ ರಾಷ್ಟ್ರಗಳ ಕುಮ್ಮಕ್ಕು ಇದೆ ಅಂತ ಆಕ್ರೋಶ ಕೂಡ ಹರಿದು ಬಂದಿದೆ.
/filters:format(webp)/newsfirstlive-kannada/media/media_files/2026/03/01/alllipura-village-in-mourning-1-2026-03-01-18-40-25.jpg)
ನ್ಯೂಸ್ ಫಸ್ಟ್​ ಬ್ಯೂರೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us