/newsfirstlive-kannada/media/media_files/2026/01/01/old-lover-murder-by-girl-would-be-2026-01-01-16-08-10.jpg)
ಹತ್ಯೆಯಾದ ಮಂಜು ಅಲಿಯಾಸ್ ಮಂಜುನಾಥ್
ಬರ್ತ್​ಡೇಗೆ ವಿಶ್​ ಮಾಡಿದ್ದಕ್ಕೆ ಮಾಜಿ ಲವರ್​ ಕಥೆ ಫಿನಿಶ್​ ಆಗಿದೆ. ತನ್ನ ಜೊತೆ ಎಂಗೇಜ್ ಮೆಂಟ್ ಆದ ಹುಡುಗಿಗೆ ವಿಶ್​ ಮಾಡಿದ್ದಕ್ಕೆ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಅತ್ತಿಗನಾಳದಲ್ಲಿ ಈ ಕೊಲೆ ಘಟನೆ ನಡೆದಿದೆ. 28 ವರ್ಷದ ಮಂಜುನಾಥ್ ಎಂಬಾತನನ್ನು ವೇಣು ಎಂಬಾತ ಹತ್ಯೆಗೈದಿದ್ದಾನೆ. ವೇಣುವಿನ ಬಾವಿ ಪತ್ನಿಗೆ ಮಂಜುನಾಥ್ ಬರ್ತಡೇ ವಿಶ್ ಮಾಡಿದ್ದ. ಇದೇ ವಿಚಾರಕ್ಕೆ ಗಲಾಟೆ ನಡೆದು ಮಂಜುನಾಥ್​ನ ಮರ್ಡರ್​ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಉಡೇವಾದ ಗ್ರಾಮದ ಮಂಜುನಾಥ್ ಕಳೆದ ಕೆಲ ವರ್ಷಗಳಿಂದ ಯುವತಿಯೋರ್ವಳನ್ನ ಪ್ರೀತಿಸುತ್ತಿದ್ದ. ಆದ್ರೆ ಆ ಯುವತಿಗೆ ವೇಣು ಎಂಬುವವನ ಜೊತೆ ಮದುವೆ ನಿಶ್ಚಿತಾರ್ಥ ಆಗಿತ್ತು. ಇತ್ತೀಚೆಗೆ ಆಕೆ ಹುಟ್ಟು ಹಬ್ಬ ಇದ್ದ ಹಿನ್ನೆಲೆ ಮಂಜು ವಿಶ್​ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬಕ್ಕೆ ಮಂಜುನಾಥ್ ವಿಶ್ ಮಾಡಿದ್ದ . ಇದೇ ವಿಚಾರಕ್ಕೆ ಮಂಜುನಾಥ್​ ಹಾಗೂ ವೇಣುವಿನ ಮಧ್ಯೆ ಕಿರಿಕ್​​ ಶುರುವಾಗಿದೆ. ಮಂಜುನಾಥ್ ಅತ್ತಿಗನಾಳಕ್ಕೆ ಕೆಲಸಕ್ಕೆ ಹೋದಾಗ ಮಾರ್ಗ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ವೇಳೆ ಮಂಜುಗೆ ಚಾಕು ಇರಿದ ವೇಣು ಹಾಗೂ ಸ್ನೇಹಿತರು ಹತ್ಯೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಂಜು ಸಾವನ್ನಪ್ಪಿದ್ದಾನೆ. ಈ ಕೊಲೆ ಘಟನೆ ಬಗ್ಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ.
ಇನ್ನೂ ಪೊಲೀಸರು ಹತ್ಯೆ ಆರೋಪಿ ವೇಣು ಹಾಗೂ ಹುಡುಗಿಯ ಸೋದರ ಕಿರಣ್ ರನ್ನು ವಶಕ್ಕೆ ಪಡೆದಿದ್ದಾರೆ. ಕಿರಣ್, ವೇಣು, ಅಪ್ಪು, ಮಂಜು ಎಂಬ ನಾಲ್ವರ ವಿರುದ್ಧ ಹತ್ಯೆ ಕೇಸ್ ದಾಖಲಾಗಿದೆ.
/filters:format(webp)/newsfirstlive-kannada/media/media_files/2026/01/01/old-lover-murder-by-girl-would-be-1-2026-01-01-16-13-03.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us