/newsfirstlive-kannada/media/media_files/2026/02/23/wild-elephant-attack-in-chikkamagaluru-1-2026-02-23-18-37-30.jpg)
ನಿರಂತರ ಕಾಡಾನೆ ದಾಳಿಯಿಂದ ಕಂಗೆಟ್ಟಿದ್ದ ಮಲೆನಾಡಿಗರನ್ನ ನಿನ್ನೆ ಪೊಲೀಸರ ಲಾಠಿ ಏಟು ಮತ್ತಷ್ಟು ಆಕ್ರೋಶಿತರನ್ನಾಗಿಸಿತ್ತು. ಲಾಠಿ ಬೀಸಿದ ಪೊಲೀಸರ ನಡೆ ವಿರುದ್ಧ ಶೃಂಗೇರಿ ಕ್ಷೇತ್ರದಲ್ಲಿ ಇವತ್ತು ಬಂದ್​​ಆಚರಣೆ ಮಾಡಲಾಯ್ತು. ಕಾಡಾನೆ ಹಾವಳಿಗೆ ಜನ ಸಾಯ್ತಿದ್ದಾರೆ. ಹೀಗಾಗಿ ಶಾಶ್ವತ ಪರಿಹಾರ ಮಾಡಿಕೊಡಿ ಅನ್ನೋದು ಈ ಭಾಗದ ಜನರ ಬೇಡಿಕೆಯಾಗಿದೆ.
ನಿನ್ನೆ ಕಾಫಿನಾಡಲ್ಲಿ ಪರಿಸ್ಥಿತಿ ಹೇಗಿತ್ತು ಅಂದರೇ, ಒಂಟಿ ಸಲಗವೊಂದು ಮಹಿಳೆಯನ್ನ ತುಳಿದು ಹಾಕಿತ್ತು. ಇದರಿಂದ ಕೆಂಡಕಾರಿದ ಮಲೆನಾಡ ಮಂದಿ ಅರಣ್ಯ ಇಲಾಖೆ, ಸಚಿವರು, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಲಾಠಿಚಾರ್ಜ್​ ಕೂಡಾ ನಡೆದಿದ್ದು. ಇದನ್ನ ಖಂಡಿಸಿ ಇವತ್ತು ಚಿಕ್ಕಮಗಳೂರಿನ ಮೂರು ತಾಲೂಕುಗಳಲ್ಲಿ ಬಂದ್​ ಆಚರಿಸಲಾಯ್ತ್ತು.
ಇನ್ನು ಇಂದಿನ ಬಂದ್ ಗೆ ಮಲೆನಾಡಿಗರಿಂದ ಪೂರ್ಣ ಪ್ರಮಾಣದ ಬೆಂಬಲ ಸಿಕ್ಕಿದೆ. ವರ್ಷದಿಂದ ತಿಂಗಳಿಗೊಂದರಂತೆ ಹೆಣ ಬಿದ್ದಿದ್ದು ಮಲೆನಾಡಿಗರು ಆತಂಕದಲ್ಲಿ ಬದುಕುತ್ತಿದ್ದಾರೆ. ಕಾರ್ಮಿಕರು ಹೆದರಿ ಕೆಲಸಕ್ಕೆ ಬರುತ್ತಿಲ್ಲ. ಬೆಳೆ ಕೈಗೆ ಬರುತ್ತಿಲ್ಲ. ತೋಟ ಹಾಳಾಗ್ತಿದೆ. ಹೀಗೆ ಮುಂದುವರಿದ್ರೆ ನಮಗೆ ಭವಿಷ್ಯವಿಲ್ಲ. ಬದುಕು-ಜೀವಕ್ಕೆ ಭದ್ರತೆ-ಗ್ಯಾರಂಟಿ ಎರಡೂ ಇಲ್ಲ ಎಂದು ಭವಿಷ್ಯದ ಬದುಕಿಗಾಗಿ ಮಲೆನಾಡಿಗರು ಬಂದ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ನಮಗೆ ಪರ್ಮನೆಂಟ್ ಸಲ್ಯೂಷನ್ ಕೊಡಿ ಎಂದು ಆಗ್ರಹಿಸಿ, ಸಹಿ ಸಂಗ್ರಹ ಅಭಿಯಾನ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2026/02/23/wild-elephant-attack-in-chikkamagaluru-3-2026-02-23-18-38-00.jpg)
ರೈತರು-ಹೋರಾಟಗಾರರು ಶೃಂಗೇರಿ ಶಾಸಕ ರಾಜೇಗೌಡ, ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದ್ರೆ ಬಿಜೆಪಿ ಜೆಡಿಎಸ್​ನವ್ರು ಸಾವಲ್ಲಿ ಬೇಳೆ ಬೇಯಿಸಿಕೊಳ್ತಿದ್ದಾರೆ ಅಂತ ಶಾಸಕ ರಾಜೇಗೌಡ ಕಿಡಿ ಕಾರಿದ್ದಾರೆ.
ಸಚಿವ ಖಂಡ್ರೆ ಅಧಿಕಾರಿಗಳ ವರದಿ-ಮಾಹಿತಿ ನಂಬಿ ಅಲ್ಲೇ ಕೂರೋದು ಬೇಡ. ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಕೇಳಿ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಒಟ್ಟಾರೆ, ಈ ಬಜೆಟ್ ನಲ್ಲೇ ಶಾಶ್ವತ ಪರಿಹಾರಕ್ಕೆ ಪ್ಲಾನ್ ರೂಪಿಸಿ. ಇಲ್ಲವಾದರೆ, ಮಲೆನಾಡಲ್ಲಿ ಕಾಡಾನೆಯಿಂದ ಇನ್ನೊಂದು ಸಾವಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಸರ್ಕಾರ ಈ ಕುರಿತು ಏನ್​ ಕ್ರಮ ಕೈಗೊಳ್ಳುತ್ತೋ ಕಾದು ನೋಡ್ಬೇಕಿದೆ
/filters:format(webp)/newsfirstlive-kannada/media/media_files/2026/02/23/wild-elephant-attack-in-chikkamagaluru-2-2026-02-23-18-38-22.jpg)
ಮಹಾರುದ್ರ ಹಿತ್ತಲ್ಲಕೊಪ್ಪ ನ್ಯೂಸ್ ಫಸ್ಟ್ ಚಿಕ್ಕಮಗಳೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us