ಪೋಕ್ಸೋ ಕೇಸ್​ನಲ್ಲಿ ಮೂವರೂ ನಿರ್ದೋಷಿ.. ವಕೀಲರು ಹೇಳಿದ್ದೇನು..?

ಪೋಕ್ಸೋ ಕೇಸ್​ನಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿತ್ತು.

author-image
Ganesh Kerekuli
Murugha Shree (2)
Advertisment

ಚಿತ್ರದುರ್ಗ: ಪೋಕ್ಸೋ ಕೇಸ್​ನಲ್ಲಿ ಮುರುಘಾ ಶ್ರೀ ನಿರ್ದೋಷಿ ಎಂದು ಚಿತ್ರದುರ್ಗದ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿತ್ತು.

ಇಬ್ಬರು ಸಂತ್ರಸ್ತೆಯರ ದೂರು ಆಧರಿಸಿ ಶ್ರೀಗಳ ವಿರುದ್ಧ ಎರಡು FIR ದಾಖಲಾಗಿತ್ತು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್, ಇಂದು ತೀರ್ಪು ಪ್ರಕಟಿಸಿದ್ದು ಮೂವರನ್ನೂ ಖುಲಾಸೆಗೊಳಿಸಿದೆ. ಮೊದಲ ಆರೋಪಿ ಮುರುಘಾ ಶ್ರೀ, ಎರಡನೇ ಆರೋಪಿ ರಶ್ಮಿ ಹಾಗೂ ನಾಲ್ಕನೇ ಆರೋಪಿ ಪರಮಶಿವಯ್ಯ ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಆ ಮೂಲಕ ಮುರುಘಾ ಶ್ರೀಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. 

ವಕೀಲರು ಹೇಳಿದ್ದೇನು..? 

ಮುರುಘಾ ಶರಣರಿಗೆ ಕೋರ್ಟ್ ರಿಲೀಫ್ ನೀಡಿದೆ. ಜೊತೆಗೆ ಅವರ ಜೊತೆ ಇದ್ದ ಇನ್ನಿಬ್ಬರು ಆರೋಪಿಗಳನ್ನೂ ಕೂಡ ಪ್ರಕರಣದಿಂದ ದೋಷಮುಕ್ತಗೊಳಿಸಿದೆ. ಈ ಪ್ರಕರಣದಿಂದ ಮುರುಘಾ ಶರಣರು ನಿರಾಳರಾಗಿದ್ದಾರೆ. ಪ್ರಕರಣ ಸುಖಾಂತ್ಯ ಕಂಡಿದೆ. ಮುಂದಿನ ದಿನಗಳಲ್ಲಿ ಮುರುಘಾ ಮಠಕ್ಕೆ ಒಳ್ಳೆಯದಾಗಲಿ. ಶ್ರೀಗಳನ್ನು ಪ್ರಕರಣದಿಂದ ದೋಷಮುಕ್ತರನ್ನಾಗಿ ಮಾಡಲು ನಮ್ಮ ಹಿರಿಯ ವಕೀಲ ಸಿವಿ ನಾಗೇಶ್ ಅವರ ಶ್ರಮ ತುಂಬಾನೇ ಇದೆ. ಅವರ ಶ್ರಮವನ್ನು ನಾವಿಲ್ಲಿ ಸ್ಮರಿಸಲೇಬೇಕು. ತೀರ್ಪಿನ ಬಗ್ಗೆ ವಿಸ್ತೃತವಾಗಿ ಮಠದ ವತಿಯಿಂದ ಸುದ್ದಿಗೋಷ್ಟಿ ನಡೆಸಿ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದು ಮುರುಘಾ ಶ್ರೀ ಪರ ವಕೀಲ ಕೆ.ಬಿ.ಕೆ. ಸ್ವಾಮಿ ಹೇಳಿದ್ದಾರೆ. 

ಇದನ್ನೂ ಓದಿ:BREAKING NEWS: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ನಿರ್ದೋಷಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shivamurthy Murugha Sharanaru murugha mutt murugha shree pocso case
Advertisment