/newsfirstlive-kannada/media/media_files/2025/11/04/wife-run-away-from-house-2025-11-04-14-33-25.jpg)
ಗಂಡ ರಂಗಸ್ವಾಮಿ, ಮಕ್ಕಳನ್ನು ಬಿಟ್ಟು ಪರಾರಿಯಾದ ಸಾವಿತ್ರಿ!
ಗಂಡ, ಮೂರು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬಳು ಪರಾರಿಯಾಗಿದ್ದಾಳೆ ! ಮೊಬೈಲ್ ಪೋಟೋ, ವಾಟ್ಸಾಫ್ ಚಾಟ್ ಗಳನ್ನು ಡೀಲೀಟ್ ಮಾಡಿ ವಿವಾಹಿತ ಗೃಹಿಣಿ ಎಸ್ಕೇಪ್ ಆಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಜೋಡಿ ಚಿಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅತ್ತ ತವರಿಗೂ ಹೋಗಿಲ್ಲ, ಇತ್ತ ಸಂಬಂಧಿಗಳ ಮನೆಗೂ ಗೃಹಿಣಿ ಹೋಗಿಲ್ಲ. ಪರ ಪುರುಷನೊಂದಿಗೆ ಪರಾರಿಯಾಗಿರುವ ಶಂಕೆ ಇದೆ.
ಇತ್ತ ಪತ್ನಿ ಮನೆಗೆ ಮರಳಲಿ ಅಂತಾ ಪತಿ ರಂಗಸ್ವಾಮಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಕಂಡ ಕಂಡ ದೇವಸ್ಥಾನಗಳಿಗೆ ಹೋಗಿ ಪತ್ನಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಸೊಸೆಯ ಫೋಟೋ ಅಲ್ಬಂ ಹಿಡಿದು ಅತ್ತೆ-ಮಾವ ಗೋಳಾಡುತ್ತಿದ್ದಾರೆ. ಜೋಡಿ ಚಿಕ್ಕೇನಹಳ್ಳಿ ಗ್ರಾಮದ ಸಾವಿತ್ರಿ ಪರಾರಿಯಾದ ಮಹಿಳೆ ಆಗಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಸಾವಿತ್ರಿ-ರಂಗಸ್ವಾಮಿ ಎಂಬುವರ ನಡುವೆ ವಿವಾಹ ಏರ್ಪಟ್ಟಿತ್ತು.
ಮಾವನ ಮಗಳನ್ನೇ ಪ್ರೀತಸಿ ರಂಗಸ್ವಾಮಿ ಮದುವೆಯಾಗಿದ್ದರು. ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಸಾವಿತ್ರಿಯನ್ನು ರಂಗಸ್ವಾಮಿ ಮದುವೆಯಾಗಿದ್ದರು. ಗಂಡನ ಗ್ರಾಮವಾದ ಜೋಡಿ ಚಿಕ್ಕೇನಹಳ್ಳಿಯಲ್ಲಿ ತೋಟದ ಮನೆಯಲ್ಲಿ ಗಂಡನೊಂದಿಗೆ ವಾಸವಿದ್ದ ಸಾವಿತ್ರಿ ದಿ ಬೆಳಗಾಗುತ್ತಲೇ ನಾಪತ್ತೆ ಆಗಿದ್ದಾಳೆ. ನಾಲ್ಕು ದಿನಗಳ ಹಿಂದೆ ಬೆಳ್ಳಂ ಬೆಳಿಗ್ಗೆ ನಾಪತ್ತೆಯಾಗಿದ್ದಾಳೆ.
/filters:format(webp)/newsfirstlive-kannada/media/media_files/2025/11/04/wife-run-away-from-house02-2025-11-04-14-35-24.jpg)
ಮನೆಗೆ ಮರಳಿ ಬಾ ಅಂತಾ ಗಂಡ, ಅತ್ತೆ-ಮಾವಂದಿರು ಗೋಳಾಡುತ್ತಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಾವಿತ್ರಿ ನಾಪತ್ತೆ ಬಗ್ಗೆ ಎಫ್‌ಐಆರ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us