ಖರ್ಚಿಗೆ ಅಮ್ಮ ಹಣ ಕೊಡಲಿಲ್ಲ ಅಂತ ಬೆಂಕಿ ಹಚ್ಚಿಕೊಂಡ ಮಗ..!

ಖರ್ಚಿಗೆ ಹಣ ಕೊಟ್ಟಿಲ್ಲ ಅಂತ ಮಕ್ಕಳು ಪೋಷಕರ ಜೊತೆ ಗಲಾಟೆ ಮಾಡೋದನ್ನ ನೋಡಿರ್ತಿರಾ. ಸಿಟ್ಟಾಗೋದನ್ನೂ ನೋಡಿರ್ತೀರಾ. ಆದ್ರೆ ಇಲ್ಲೊಬ್ಬ ವ್ಯಕ್ತಿ ಖರ್ಚಿಗೆ ಹಣ ಕೊಟ್ಟಿಲ್ಲ ಅಂತ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

author-image
Ganesh Kerekuli
ctr fire 1
Advertisment

ಖರ್ಚಿಗೆ ತಾಯಿ ಹಣ ಕೊಟ್ಟಿಲ್ಲ ಅಂತ ಮಗ ಬೆಂಕಿ ಹಚ್ಚಿಕೊಂಡಿದ್ದಾರೆ. ಈ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನನ್ನಿವಾಳ ರಸ್ತೆಯಲ್ಲಿ ನಡೆದಿದೆ. 34 ವರ್ಷದ ಮಹೇಶ್ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಘಟನೆ ಆಗಿದ್ದೇನು?

ಚಳ್ಳಕೆರೆಯ ಮಹೇಶ್ ತಾಯಿ ಗಂಗಮ್ಮ ಜಮೀನು ಮಾರಾಟ ಮಾಡಿದ್ದರು. ಕಳೆದ ವಾರ ಕಾರು ಖರೀದಿ ಮಾಡಬೇಕು ಅಂತ ಮಹೇಶ್,​ ತಾಯಿ ಗಂಗಮ್ಮ ಬಳಿ 4 ಲಕ್ಷ ರೂಪಾಯಿ ಹಣ ಪಡೆದಿದ್ದ. ಮತ್ತೆ 2 ಲಕ್ಷ ಹಣಕ್ಕೆ ಡಿಮ್ಯಾಂಡ್​​ ಮಾಡಿದ್ದ. ಆದ್ರೆ ಹಣ ಕೊಡಲು ವಿಳಂಬವಾಗಿದ್ರಿಂದ ಮಹೇಶ್​ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಕೂಡಲೇ ಗಾಯಾಳನ್ನ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದ್ದು, ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಮಗನ ಪರಿಸ್ಥಿತಿ ನೆನೆದು ತಾಯಿ ಆಸ್ಪತ್ರೆ ಮುಂಭಾಗದಲ್ಲಿ ಕಣ್ಣೀರು ಹಾಕ್ತಿದ್ದಾರೆ.

ಇದನ್ನೂ ಓದಿ : ಉಸಿರುಗಟ್ಟಿ ಟೆಕ್ಕಿ ದುರಂತ ಅಂತ್ಯ; ಅಯ್ಯೋ, ಬೆಂಗಳೂರಲ್ಲಿ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chitradurga mahesh challakere police station
Advertisment