/newsfirstlive-kannada/media/media_files/2025/12/25/chitradurga-district-between-hiriyuru-sira-seabird-bus-accident_massive-bus-tragedy_11-2025-12-25-07-49-53.png)
ಬಸ್ ನ ಡೀಸೆಲ್ ಟ್ಯಾಂಕರ್ ಮೇಲ್ಬಾಗದ ಸೀಟುಗಳಲ್ಲಿ ಕುಳಿತಿದ್ದವರ ಸಾವು
ಚಿತ್ರದುರ್ಗದ ಜವಗೊಂಡನಹಳ್ಳಿ ಬಳಿ ಭೀಕರ ಅಪಘಾತಕ್ಕೀಡಾದ ಬಸ್ ನಲ್ಲಿದ್ದ 33 ಮಂದಿ ಪ್ರಯಾಣಿಕರ ಪೈಕಿ 28 ಮಂದಿ ಬಸ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೇ, ಈ ಐದು ಮಂದಿಗೆ ಮಾತ್ರ ಬಸ್ ನಿಂದ ಸಕಾಲದಲ್ಲಿ ಹೊರಗೆ ಬರಲು ಸಾಧ್ಯವಾಗಲೇ ಇಲ್ಲ. ಬಸ್ ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೃತಪಟ್ಟ ಐದು ಮಂದಿಯೂ ಹೆಣ್ಣು ಮಕ್ಕಳು. ಬಿಂದು ಮತ್ತು ಆಕೆಯ ಮಗಳು ಗ್ರೇಯಾ, ಮಾನಸ, ನವ್ಯ, ರಶ್ಮಿ ಮೃತಪಟ್ಟಿದ್ದಾರೆ. ಈ ಐವರೂ ಕೂಡ ಬಸ್ ನ ಡೀಸೆಲ್ ಟ್ಯಾಂಕ್ ಇದ್ದ ಭಾಗದಲ್ಲಿ ಕುಳಿತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರದುರ್ಗ ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿ ಹೆದ್ದಾರಿಯ ಡಿವೈಡರ್ ದಾಟಿ ಬಂದು ಬಸ್‌ನ ಡೀಸೆಲ್ ಟ್ಯಾಂಕ್ ಭಾಗಕ್ಕೆ ಸರಿಯಾಗಿ ಡಿಕ್ಕಿ ಹೊಡೆದಿದೆ. ಇದರಿಂದ ತಕ್ಷಣವೇ ಡೀಸೆಲ್ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಡೀಸೆಲ್ ಟ್ಯಾಂಕ್‌ಗೆ ಕಂಟನೇರ್ ಲಾರಿ ಡಿಕ್ಕಿ ಹೊಡೆದ ತಕ್ಷಣವೇ ಡೀಸೆಲ್ ಟ್ಯಾಂಕ್ ಸ್ಪೋಟವಾಗಿ ಬೆಂಕಿ ಹೊತ್ತಿಕೊಂಡಿದೆ. ಡೀಸೆಲ್ ಟ್ಯಾಂಕ್ ನ ಮೇಲ್ಬಾಗದ ಸೀಟುಗಳಲ್ಲಿ ಕುಳಿತಿದ್ದವರು ಬಸ್ ನಿಂದ ಹೊರಗೆ ಓಡಿ ಬರಲು ಸಮಯವೇ ಸಿಕ್ಕಿಲ್ಲ. ಇದರಿಂದ ಈ ಭಾಗದಲ್ಲಿ ಕುಳಿತಿದ್ದ 5 ಮಂದಿಯೂ ದಾರುಣವಾಗಿ ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ. ಬಸ್ ಹಿಂಭಾಗ, ಮುಂಭಾಗದಲ್ಲಿ ಕುಳಿತಿದ್ದವರು ಬಸ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಬಸ್ ನಿಂದ ಹೊರಗೆ ಜಿಗಿದು ತಮ್ಮ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
/filters:format(webp)/newsfirstlive-kannada/media/media_files/2025/12/25/manasa-navya-and-rashmi-died-in-bus-accident-2025-12-25-17-22-07.jpg)
ಆಕ್ಸಿಡೆಂಟ್ ನಲ್ಲಿ ಮೃತಪಟ್ಟ ಮಾನಸ, ನವ್ಯ, ರಶ್ಮಿ
ಇನ್ನೂ ಅಪಘಾತದಲ್ಲಿ ಮೃತಪಟ್ಟ ರಶ್ಮಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಆನಂದಾಶ್ರಮದಲ್ಲೇ ಶಿಕ್ಷಣವನ್ನು ಪಡೆದಿದ್ದರು. ರಶ್ಮಿ ತಂದೆ ರತ್ನಾಕರ್ ಮಹಾಲೆ ಟೀ ಅಂಗಡಿ ವ್ಯವಹಾರ ಮಾಡುತ್ತಿದ್ದಾರೆ. ತನ್ನ ಮೂವರು ಗೆಳತಿಯರ ಜೊತೆ ರಶ್ಮಿ ಗೋಕರ್ಣಕ್ಕೆ ಹೋಗಿ ಅಲ್ಲಿಂದ ತಮ್ಮೂರಿಗೆ ಹೋಗಲು ಹೊರಟಿದ್ದರು. ಕ್ರಿಸಮಸ್ ರಜೆ ಇದ್ದಿದ್ದರಿಂದ ಕಂಪನಿಯಲ್ಲಿ ನಾಲ್ಕು ದಿನಗಳ ಕಾಲ ರಜೆ ಪಡೆದಿದ್ದರು. ಬೆಂಗಳೂರಿನಲ್ಲಿ ಡೇಲಾಯ್ಟ್ ಕಂಪನಿಯಲ್ಲಿ ರಶ್ಮಿ ಕೆಲಸ ಮಾಡುತ್ತಿದ್ದರು. ರಶ್ಮಿಗೆ ರಕ್ಷಾ ಎನ್ನುವ ಅಕ್ಕ ಇದ್ದಾರೆ. ರಕ್ಷಾ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ತಂದೆ-ತಾಯಿ ಇಬ್ಬರು ಊರಿನಲ್ಲಿದ್ದರು. ಎಲ್ಲ ಕೆಲಸಗಳಲ್ಲೂ ರಶ್ಮಿ ಚುರುಕಾಗಿದ್ದರು. ರಶ್ಮಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನವರು.
ಇನ್ನೂ ಬಸ್ ಅಪಘಾತದಲ್ಲಿ ಮೃತಪಟ್ಟ ಬಿಂದು ಅವರ ಕುಟುಂಬದಲ್ಲಿ ಇದ್ದಿದ್ದು ಮೂರು ಮಂದಿ ಮಾತ್ರ. ಗಂಡ, ಹೆಂಡತಿ ಮತ್ತು ಮಗು ಮಾತ್ರ ಇದ್ದರು. ಗಂಡ ದರ್ಶನ್ ಹಾಗೂ ಪತ್ನಿ ಬಿಂದು ಇಬ್ಬರಿಗೂ ತಂದೆ, ತಾಯಿ ಇರಲಿಲ್ಲ. ಬಿಂದು ಮಗಳು ಗ್ರೇಯಾ ಕೂಡ ಇದೇ ನತದೃಷ್ಟ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಮಗಳು ಗ್ರೇಯಾ ಸಾವನ್ನಪ್ಪಿದ್ದಾಳೆ.
ಬಸ್ ಅಪಘಾತದಲ್ಲಿ ಮೃತಪಟ್ಟ ಮಾನಸ ಎಂಬಾಕೆಯು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನವರು. ಮಾನಸ ತಂದೆ, ತಾಯಿಗೆ ಇಬ್ಬರು ಮಕ್ಕಳು. ಮಾನಸಗೆ ಓರ್ವ ಸೋದರ ಇದ್ದಾರೆ. ಮಾನಸ ತಂದೆ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/12/25/manasa-bindu-and-greya-died-in-accident-2025-12-25-18-20-41.jpg)
ಆಕ್ಸಿಡೆಂಟ್ ನಲ್ಲಿ ಮೃತಪಟ್ಟ ಮಾನಸ, ಬಿಂದು ಹಾಗೂ ಬಿಂದು ಪುತ್ರಿ ಗ್ರೇಯಾ
ಇನ್ನೂ ಬಸ್ ಅಪಘಾತದಲ್ಲಿ ಮೃತಪಟ್ಟ ನವ್ಯ, ಹಾಸನ ಜಿಲ್ಲೆಯವರು. ನವ್ಯ ಮತ್ತು ಮಾನಸ ಇಬ್ಬರೂ ಬಾಲ್ಯ ಸ್ನೇಹಿತರು. ಇಬ್ಬರು ಟೆಕ್ಕಿಗಳಾಗಿದ್ದರು. ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ವಾಸ, ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಸಾವಿನಲ್ಲೂ ಗೆಳತಿಯರು ಒಂದಾಗಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಮಾನಸ ಹಾಗೂ ನವ್ಯ ಇಬ್ಬರ ಮದುವೆ ಕೂಡ ಫಿಕ್ಸ್ ಆಗಿತ್ತು.
/filters:format(webp)/newsfirstlive-kannada/media/media_files/2025/12/25/chitradurga-accident-1-2025-12-25-11-55-51.jpg)
ಗಾಯಾಳು ಗಗನಾ, ರಕ್ಷಿತಾ, ರಶ್ಮಿ ಸ್ನೇಹಿತೆಯರು . ಎಲ್ಲರೂ ಗೋಕರ್ಣ ಗೆ ಟ್ರಿಪ್ ಗೆ ತೆರಳುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us