/newsfirstlive-kannada/media/media_files/2025/12/25/manasa-navya-and-rashmi-died-in-bus-accident-2025-12-25-17-22-07.jpg)
ಆಕ್ಸಿಡೆಂಟ್ ನಲ್ಲಿ ಮೃತಪಟ್ಟ ಮಾನಸ, ನವ್ಯ, ರಶ್ಮಿ
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೀ ಬರ್ಡ್ ಖಾಸಗಿ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ವಿವರ ಈಗ ಸ್ಪಷ್ಟವಾಗಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಐದು ಮಂದಿ ಸಾವನ್ನಪ್ಪಿದ್ದಾರೆ. ಕಂಟೇನರ್ ಲಾರಿ ಚಾಲಕ ಕೂಡ ಸಾವನ್ನಪ್ಪಿದ್ದಾನೆ. ಇದರಿಂದ ಅಪಘಾತದಲ್ಲಿ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 6 ಎಂದು ಪೊಲೀಸರು ಅಧಿಕೃತವಾಗಿ ಹೇಳಿದ್ದಾರೆ.
ಇಂದು ಮುಂಜಾನೆಯಿಂದ ಸಾವನ್ನಪ್ಪಿದವರ ಸಂಖ್ಯೆಯ ಬಗ್ಗೆ ಗೊಂದಲ ಇತ್ತು. ಹೆಚ್ಚಿನ ಜನರು ಸಜೀವ ದಹನವಾಗಿರಬಹುದು ಎಂದು ಪೊಲೀಸರು, ಜನರು ಶಂಕಿಸಿದ್ದರು. ಆದರೇ, ಅದೃಷ್ಟವಶಾತ್ ಬಸ್ ನಲ್ಲಿದ್ದವರು ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ಬಸ್ ನಿಂದ ಹೊರಗೆ ಜಂಪ್ ಮಾಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಗೊಂಡು ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಕೆಲವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ
ಇವತ್ತು ಬೆಳಿಗ್ಗೆ ನಡೆದ ಅಪಘಾತದಲ್ಲಿ ಬಸ್ ನಲ್ಲಿ 5 ಮೃತದೇಹ ಪತ್ತೆಯಾಗಿದೆ . ಒಬ್ಬ ಲಾರಿ ಡ್ರೈವರ್ ಸೇರಿ 6 ಜನ ಮೃತಪಟ್ಟಿದ್ದಾರೆ . ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಿಂದು, ಮಗು ಗ್ರಿಯಾ, ನವ್ಯಾ, ರಶ್ಮಿ, ಮಾನಸ ಮೃತಪಟ್ಟವರು. ನವ್ಯಾ ಮತ್ತು ಮಾನಸ ಮೃತದೇಹಗಳ ಬಗ್ಗೆ ಪೊಲೀಸರಿಗೆ ಅನುಮಾನ ಇದೆ. ಸಾಯಂಕಾಲದ ಹೊತ್ತಿಗೆ ಎಲ್ಲ ಮೃತ ದೇಹಗಳ ಗುರುತು ಪತ್ತೆಯಾಗುತ್ತೆ. ಆಮೇಲೆ ಡಿಎನ್ ಎ ಸ್ಯಾಂಪಲ್ ಪಡೆದು ಮೃತದೇಹ ಹಸ್ತಾಂತರ ಮಾಡುತ್ತೇವೆ. ನಾಪತ್ತೆಯಾಗಿದ್ದ ಶಿವಮೊಗ್ಗ ಮೂಲದ ಮಸ್ರತುನ್ನಿಸಾ ಸೈಯ್ದ್ ಜಮೀರ್ ಗೌಸ್ ಪತ್ತೆಯಾಗಿದ್ದಾರೆ. ಬಸ್ ಗೆ ಬೆಂಕಿ ಬಿದ್ದ ಬಳಿಕ ಶಿರಾ ಕಡೆಗೆ ಹೋಗಿದ್ದೇವು ಅಂತ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದರಿಂದಾಗಿ ಬಸ್- ಲಾರಿ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಚಿತ್ರದುರ್ಗ ಪೊಲೀಸರಿಗೂ ಸ್ಪಷ್ಟತೆ ಸಿಕ್ಕಂತಾಗಿದೆ. ಬಸ್ ನಲ್ಲಿ 33 ಜನರು ಪ್ರಯಾಣ ಮಾಡುತ್ತಿದ್ದರು. ಇವರ ಪೈಕಿ 28 ಮಂದಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಬಸ್ ನಲ್ಲಿದ್ದವರ ಪೈಕಿ 5 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ ಕೆಲವರು ಡಿಸಚಾರ್ಜ್ ಆಗಿ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಇನ್ನೂ ಕೆಲವರು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/12/25/chitradurga-bus-accident-2-2025-12-25-08-42-38.jpg)
ಕಂಟೈನರ್ ಡ್ರೈವರ್ ಮೃತದೇಹ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಇದೆ. ಉಳಿದಂತೆ ಬಿಂದು, ಆಕೆಯ ಮಗಳು ಗ್ರೇಯಾ, ಮಾನಸ, ನವ್ಯ, ರಶ್ಮಿ ಮೃತದೇಹಗಳು ಚಿತ್ರದುರ್ಗ ಆಸ್ಪತ್ರೆಯಲ್ಲಿವೆ. ಇದುವರೆಗೂ ಬಿಂದು ಹಾಗೂ ಮಗಳು ಗ್ರೇಯಾ ಶವಗಳನ್ನು ಬಿಂದು ಪತಿ ದರ್ಶನ್ ಪತ್ತೆ ಮಾಡಿದ್ದಾರೆ.
ಇನ್ನೂಳಿದ ಮೂವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಮಾನಸ, ನವ್ಯ ಹಾಗೂ ರಶ್ಮಿ ಮೃತದೇಹಗಳ ಗುರುತು ಪತ್ತೆ ಆಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ನವ್ಯ ಹಾಗೂ ಮಾನಸ ಮೃತದೇಹಗಳ ಪತ್ತೆಯಲ್ಲಿ ಗೊಂದಲ ಇದೆ. ಚೈನ್ ಮೂಲಕ ಪತ್ತೆ ಮಾಡಲು ಮುಂದಾಗಿದ್ರು . ಆದ್ರೆ ಶವಗಳು ಸುಟ್ಟು ಕರಕಲು ಆಗಿರುವುದರಿಂದ ಸರಿಯಾಗಿ ಗುರುತು ಹಿಡಿಯಲು ಆಗುತ್ತಿಲ್ಲ. ಗುರುತು ಪತ್ತೆ ಕಾರ್ಯವಾದರೇ, ಇಂದೇ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡುತ್ತೇವೆ. ಈಗಾಗಲೇ ಡಿಎನ್ ಎ ಸ್ಯಾಂಪಲ್ ಕೂಡ ಪಡೆಯಲಾಗಿದೆ. ಇಂದು ಸಂಜೆಯೇ ಮೃತದೇಹಗಳ ಹಸ್ತಾಂತರ ಮಾಡಲಾಗುತ್ತೆ ಎಂದು ಚಿತ್ರದುರ್ಗ ಎಸ್ ಪಿ ರಂಜಿತ್ ಭಂಡಾರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us