Advertisment

ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಪೋಕ್ಸೋ ಕೇಸ್ : ನವಂಬರ್ 26 ರಂದು ತೀರ್ಪು ಪ್ರಕಟ, ಸ್ವಾಮೀಜಿ ಭವಿಷ್ಯ ನಿರ್ಧಾರ

ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಪೋಕ್ಸೋ ಕೇಸ್ ವಿಚಾರಣೆ ಕೋರ್ಟ್ ನಲ್ಲಿ ಮುಕ್ತಾಯವಾಗಿದೆ. ನವಂಬರ್ 26 ರಂದು ಕೋರ್ಟ್ ತೀರ್ಪು ಪ್ರಕಟಿಸಲಿದೆ. ಅಂದು ಶಿವಮೂರ್ತಿ ಸ್ವಾಮೀಜಿ ಅಪರಾಧಿಯೋ, ನಿರಾಪರಾಧಿಯೋ ಎಂದು ಕೋರ್ಟ್ ತೀರ್ಪು ನೀಡಲಿದೆ.

author-image
Chandramohan
MURUGA MATH SWAMIJI POSCO CASE JUDGEMENT
Advertisment

 ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ  ಸ್ವಾಮೀಜಿ ವಿರುದ್ದ ಫೋಕ್ಸೋ ಕೇಸ್ ನ ವಾದ-ಪ್ರತಿವಾದ ಕೋರ್ಟ್ ನಲ್ಲಿ ಮುಕ್ತಾಯವಾಗಿದೆ. ನವಂಬರ್ 26 ರಂದು ತೀರ್ಪು ಪ್ರಕಟಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಚಿತ್ರದುರ್ಗದ ಕೋರ್ಟ್ ನಲ್ಲಿ ಮುರುಘಾರಾಜೇಂದ್ರ ಮಠದ ಶಿವಮೂರ್ತಿ ಸ್ವಾಮೀಜಿ ವಿರುದ್ಧದ ಪೋಕ್ಸೋ ಕೇಸ್ ನಲ್ಲಿ ತೀರ್ಪು ನೀಡಲು ಇನ್ನೂ ಕೆಲವೇ ದಿನಗಳು ಬಾಕಿ  ಉಳಿದಿವೆ.  ನವಂಬರ್‌ 26 ರ ಬುಧವಾರ ಚಿತ್ರದುರ್ಗದ ಕೋರ್ಟ್,   ಪೋಕ್ಸೋ ಕೇಸ್ ನಲ್ಲಿ ಶಿವಮೂರ್ತಿ ಸ್ವಾಮೀಜಿ ಅಪರಾಧಿಯೋ ನಿರಾಪರಾಧಿಯೋ ಎಂಬ ತೀರ್ಪು  ನೀಡಲಿದೆ. 
ಶಿವಮೂರ್ತಿ ಸ್ವಾಮೀಜಿ ಪರವಾಗಿ ಕೋರ್ಟ್ ನಲ್ಲಿ ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ಸ್ವಾಮೀಜಿ ವಿರುದ್ಧದ ಎಲ್ಲ ಆರೋಪಗಳು ಸುಳ್ಳು ಎಂದು ವಾದಿಸಿದ್ದಾರೆ. ಪ್ರಾಸಿಕ್ಯೂಷನಲ್ ಪರ ವಕೀಲರು ಇಂದು ತಮ್ಮ ವಾದ ಮಂಡನೆಯನ್ನು ಮುಗಿಸಿದ್ದಾರೆ. ಚಿತ್ರದುರ್ಗದ 2ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್ ನ ವಿಚಾರಣೆ ನಡೆದಿತ್ತು. ಕೋರ್ಟ್ ಜಡ್ಜ್ ಗಂಗಾಧರ್ ಚನ್ನಬಸಪ್ಪ ಹಡಪದ  ನವಂಬರ್ 26 ರ ಬುಧವಾರ ತೀರ್ಪು  ಪ್ರಕಟಿಸುವರು. 

Advertisment

Muruga math shivamurthy swamiji POSCO case verdict reserved
Advertisment
Advertisment
Advertisment