ಚಿತ್ರದುರ್ಗದ ಅಪಘಾತಕ್ಕೆ ಲಾರಿ ಚಾಲಕನ ನಿದ್ರೆ ಮಂಪರು ಕಾರಣ ಎಂದ ಪೊಲೀಸರು : ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲು

ಚಿತ್ರದುರ್ಗದ ಬಸ್- ಕಂಟೇನರ್ ಲಾರಿ ಅಪಘಾತಕ್ಕೆ ಲಾರಿ ಚಾಲಕನ ನಿದ್ರೆ ಮಂಪರು ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಘಾತದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಆದರೇ, ಆಕ್ಸಿಡೆಂಟ್‌ಗೆ ಕಾರಣವಾದ ಕಂಟೇನರ್ ಲಾರಿ ಚಾಲಕನೂ ಬದುಕಿ ಉಳಿದಿಲ್ಲ.

author-image
Chandramohan
Chitradurga bus accident (2)

ಕಂಟೇನರ್ ಲಾರಿ ಚಾಲಕನ ನಿದ್ರೆ ಮಂಪರಿನಿಂದ ಆಕ್ಸಿಡೆಂಟ್‌!

Advertisment
  • ಕಂಟೇನರ್ ಲಾರಿ ಚಾಲಕನ ನಿದ್ರೆ ಮಂಪರಿನಿಂದ ಆಕ್ಸಿಡೆಂಟ್‌!


ಚಿತ್ರದುರ್ಗದ J.G. ಹಳ್ಳಿ ಬಳಿ ಬಸ್ ದುರಂತ ಕೇಸ್ ಗೆ ಸಂಬಂಧಿಸಿದಂತೆ ಹಿರಿಯೂರು ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಸ್ ದುರಂತಕ್ಕೆ ಕಂಟೇನರ್ ಲಾರಿ ಚಾಲಕನ ನಿದ್ರೆ ಮಂಪರು ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹರಿಯಾಣ ರಾಜ್ಯದ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಕಂಟೇನರ್ ಲಾರಿಯು ಹೆದ್ದಾರಿ ಡಿವೈಡರ್ ದಾಟಿ, ಬಲಭಾಗಕ್ಕೆ  ಬಂದು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸೀ ಬರ್ಡ್ ಬಸ್‌ಗೆ ಬೇಗನೇ ಬೆಂಕಿ ಹೊತ್ತಿಕೊಂಡಿದೆ. 
ಕಂಟೇನರ್ ಲಾರಿ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಾಲಾ ಬಸ್ ಚಾಲಕ ಸಚಿನ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಲಾರಿ ಚಾಲಕನ ಅತಿವೇಗ& ನಿರ್ಲಕ್ಷ್ಯತನದ ಚಾಲನೆಯಿಂದ ಭೀಕರ ದುರಂತ ಸಂಭವಿಸಿದೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. 
ಬಿಎನ್ಎಸ್ ಸೆಕ್ಷನ್ 125(ಎ)  ಅಡಿ ಕೇಸ್ ದಾಖಲಾಗಿದೆ. ಬಿಎನ್‌ಎಸ್ ಸೆಕ್ಷನ್ 281, ಬಿಎನ್ಎಸ್ 106(1) ಮತ್ತು ಬಿಎನ್‌ಎಸ್ 108(2) ರಡಿ ಕೇಸ್ ದಾಖಲಿಸಲಾಗಿದೆ. ಆದರೇ, ಅಪಘಾತ ಮಾಡಿದ ಕಂಟೇನರ್ ಲಾರಿ ಚಾಲಕನು ಬದುಕಿಲ್ಲ. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

bus accidnet
Advertisment