/newsfirstlive-kannada/media/media_files/2025/11/18/muruga-math-swamiji-posco-case-judgement-2025-11-18-14-21-08.jpg)
ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ಪೋಕ್ಸೋ ಕೇಸ್ ನಲ್ಲಿ ಖುಲಾಸೆ ಆಗಿದ್ದೇಗೆ?
ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.. ಸದ್ಯ ನ್ಯಾಯಾಲಯ ಸ್ವಾಮೀಜಿಗೆ ಬಿಗ್ ರಿಲೀಫ್​ ನೀಡಿದೆ.. ಆದ್ರೆ, ಕಠಿಣಾತಿಕಠಿಣ ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿ ಖುಲಾಸೆಯಾಗಿದ್ದೇಗೆ.. ಅದೊಂದು ಅಂಶ ಶ್ರೀಗಳನ್ನು ಕೇಸ್​ನಿಂದ ಬಚಾವ್ ಮಾಡ್ತಾ.. ಕೋರ್ಟ್​​​ನ ಜಡ್ಜ್​ಮೆಂಟ್ ಕಾಪಿ ಲಭ್ಯ ಆಗಿದ್ದು ಎಲ್ಲವೂ ರಿವೀಲ್ ಆಗಿದೆ..
ಪೋಕ್ಸೋ ಪ್ರಕರಣದ ತೂಗುಗತ್ತಿಯಿಂದ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಗೆ ಬಿಡುಗಡೆ ಸಿಕ್ಕಿದೆ.. ನ್ಯಾಯಾಲಯ ಸ್ವಾಮೀಜಿ ನಿರ್ದೋಷಿ ಅಂತ ತೀರ್ಪಿತ್ತಿದೆ.. ಈ ಮೂಲಕ ಮುರುಘಾ ಸ್ವಾಮೀಜಿಗೆ ಬಿಗ್ ಬಿಗ್ ರಿಲೀಫ್​ ಸಿಕ್ಕಂತಾಗಿದ್ದು ಆತಂಕವೂ ದೂರಾಗಿದೆ. ಪೋಕ್ಸೋ ಪ್ರಕರಣದ ಆರಂಭದಿಂದ ನಿರ್ದೋಷಿವರೆಗೆ ಸ್ವಾಮೀಜಿ ಅನುಭವಿಸಿದ್ದ ಮುಜುಗರ ಕೊನೆಯಾಗಿದ್ದು ಮಠದ ಭಕ್ತರನ್ನೂ ನಿರಾಳರನ್ನಾಗಿಸಿದೆ..
ಪೋಕ್ಸೋ ಕೇಸ್​​​ನಲ್ಲಿ ಮುರುಘಾ ಸ್ವಾಮೀಜಿ ಖುಲಾಸೆಯಾಗಿದ್ದೇಗೆ?
ಕೋರ್ಟ್ ಜಡ್ಜ್​ಮೆಂಟ್​ ಪ್ರತಿಯಲ್ಲಿ ಸ್ಫೋಟಕ ಅಂಶ ಉಲ್ಲೇಖ!
ಹೌದು.. ಇದು ಚಿತ್ರದುರ್ಗದ ಮುರುಘಾ ಸ್ವಾಮೀಜಿ ಮೊದಲ ಪೋಕ್ಸೋ ಕೇಸ್​ನಿಂದ ಸೇಫ್ ಆಗಿದ್ದಾರೆ. ಪ್ರಕರಣದಲ್ಲಿ ನ್ಯಾಯಾಲಯ ಅವರನ್ನ ದೋಷಮುಕ್ತಗೊಳಿಸಿದೆ.. ಕಳೆದ ನವೆಂಬರ್ 26ರಂದು ಮುರುಘಾ ಸ್ವಾಮೀಜಿ ವಿರುದ್ಧದ ಒಂದನೇ ಫೋಕ್ಸೋ ಪ್ರಕರಣ ಖುಲಾಸೆ ಕುರಿತಾದ ತೀರ್ಪಿನ ಪ್ರತಿ ನ್ಯೂಸ್​​ಫಸ್ಟ್​​ಗೆ ಲಭ್ಯವಾಗಿದ್ದು ಸ್ಫೋಟಕ ಅಂಶಗಳನ್ನು ಉಲ್ಲೇಖಿಸಲಾಗಿದೆ.. ಚಾರ್ಜ್​ಶೀಟ್ ಆಧರಿಸಿ ಸ್ವಾಮೀಜಿ ಪರ ಪ್ರಬಲ ವಾದ ಮಂಡಿಸಿದ್ದ ವಕೀಲರು ಕೇಸ್ ಗೆದ್ದಿದ್ದಾರೆ.. ಈ ಮೂಲಕ ಸ್ವಾಮೀಜಿ ಹಾಗೂ ಮುರುಘಾ ಮಠ ಭಕ್ತರ ಆತಂಕವೂ ದೂರ ಆಗಿದೆ..
ಮುರುಘಾಶ್ರೀ ‘ಖುಲಾಸೆ’ ಮರ್ಮ!
2ನೇ ಸಂತ್ರಸ್ತೆ ಚಾರ್ಜ್​​​ಶೀಟ್​​ನ ಜಡ್ಜ್‌ಮೆಂಟ್​ ಪ್ರತಿ ಲಭ್ಯ
ಪೋಕ್ಸೋ ಕೇಸ್​ನಲ್ಲಿ A, B ಚಾರ್ಜ್​​​ಶೀಟ್ ಸಲ್ಲಿಸಲಾಗಿತ್ತು
2022,ಜುಲೈ 24ರಂದು ಅತ್ಯಾಚಾರ ನಡೆದಿದೆ ಅಂತ ಉಲ್ಲೇಖ
ಸಂತ್ರಸ್ತೆಯ ಸಾಕ್ಷಿಯ ಕ್ರಾಸ್ ಎಕ್ಸಾಮಿನ್ ಮಾಡಿದ್ದ ವಕೀಲರು
ಅತ್ಯಾಚಾರ ನಡೆದ ದಿನ ಮುರುಘಾಶ್ರೀ ಈ ದೇಶದಲ್ಲೇ ಇರಲಿಲ್ಲ
ಅಮೆರಿಕ ಸೇರಿ ಬೇರೆ ದೇಶಗಳ ಪ್ರವಾಸದಲ್ಲಿದ್ದರು ಅಂತ ವಾದ
ಕೇಸ್​​ನ ದೂರು ಕೊಡಲು ಹೋಗಿದ್ದೇ ಷಡ್ಯಂತ್ರದ ಒಂದು ಭಾಗ
ಸಂತ್ರಸ್ತೆ ಹೇಳಿಕೆ, ಸಂಶಯಾಸ್ಪದ ಸಾಕ್ಷಿಗಳಿಂದ ಕೇಸ್ ಖುಲಾಸೆ
ಚಿತ್ರದುರ್ಗದ 2ನೇ ಅಪರ ಜಿಲ್ಲಾ, ಸತ್ರ ನ್ಯಾಯಾಲಯದ ತೀರ್ಪು
ಕೇಸ್ ಖುಲಾಸೆಗೊಳಿಸಿ ನ್ಯಾಯಾಧೀಶ GC ಹಡಪದ ಆದೇಶ
2ನೇ ಸಂತ್ರಸ್ತೆ ಚಾರ್ಜ್​​​ಶೀಟ್​​ನ ಜಡ್ಜ್‌ಮೆಂಟ್​ ಪ್ರತಿ ಲಭ್ಯ ಆಗಿದ್ದು ಪೋಕ್ಸೋ ಕೇಸ್​ನಲ್ಲಿ A ಮತ್ತು B ಎಂದು ಚಾರ್ಜ್​​​ಶೀಟ್ ಸಲ್ಲಿಸಲಾಗಿತ್ತು.. 2022ರ ಜುಲೈ 24ರಂದು ಅತ್ಯಾಚಾರ ನಡೆದಿದೆ ಅಂತ ಉಲ್ಲೇಖ ಮಾಡಲಾಗಿತ್ತು ಬಳಿಕ ಮುರುಘಾ ಸ್ವಾಮೀಜಿ ಪರ ವಕೀಲರು ಸಂತ್ರಸ್ತೆಯ ಸಾಕ್ಷಿಯ ಕ್ರಾಸ್ ಎಕ್ಸಾಮಿನ್ ಮಾಡಿದ್ದರು.. ಇದನ್ನೇ ಆಧರಿಸಿ ವಾದ ಮಾಡಿದ್ದ ವಕೀಲರು, ಅತ್ಯಾಚಾರ ನಡೆದ ದಿನ ಮುರುಘಾಶ್ರೀ ಈ ದೇಶದಲ್ಲೇ ಇರಲಿಲ್ಲ, ಅಮೆರಿಕ ಸೇರಿ ವಿವಿಧ ದೇಶಗಳ ಪ್ರವಾಸದಲ್ಲಿದ್ದರು, ಪ್ರಕರಣದ ಬಗ್ಗೆ ಠಾಣೆಗೆ ದೂರು ಕೊಡಲು ಹೋಗಿದ್ದೇ ಷಡ್ಯಂತ್ರದ ಒಂದು ಭಾಗವಾಗಿದೆ ಅಂತ ವಾದ ಮಾಡಿದ್ದರು.. ಸಂತ್ರಸ್ತೆ ಹೇಳಿಕೆ, ಸಂಶಯಾಸ್ಪದ ಸಾಕ್ಷಿಗಳಿಂದ ಪ್ರಕರಣವನ್ನು ಖುಲಾಸೆಗೊಳಿಸಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪು ನೀಡಿದೆ.. ಪ್ರಕರಣದಲ್ಲಿ ನ್ಯಾಯಾಧೀಶ GC ಹಡಪದ ಆದೇಶ ನೀಡಿದ್ದಾರೆ..
ಇನ್ನು ಸಂತ್ರಸ್ತೆಯರು ನೀಡಿರುವ ಹೇಳಿಕೆ ಒಂದಕ್ಕೊಂದು ತಾಳೆ ಇಲ್ಲದಿರುವುದು, ಫೋಟೊ ಸಾಕ್ಷ್ಯಗಳನ್ನು ಸರಿಯಾಗಿ ಸಲ್ಲಿಸದಿರುವುದು, ಸಂತ್ರಸ್ತೆಯರ ಸಾಕ್ಷ್ಯ ಅಸಮಂಜಸ ಹಾಗೂ ವಿಶ್ವಾಸಾರ್ಹವಲ್ಲ ಅನ್ನೋ ಅಂಶಗಳು ಕೋರ್ಟ್ ತೀರ್ಪಿನಲ್ಲಿದೆ.. ಒಟ್ಟಾರೆ, ಬರೋಬ್ಬರಿ 3 ವರ್ಷ, 17 ದಿನಗಳ ಕಾಲ ನಡೆದಿದ್ದ ಪೋಕ್ಸೋ ಪ್ರಕರಣದಲ್ಲಿ ವಾದ-ಪ್ರತಿವಾದ ಪೂರ್ಣಗೊಳಿಸಿದ್ದ ನ್ಯಾಯಾಧೀಶರು ತೀರ್ಪು ನೀಡಿದ್ದು ಮುರುಘಾ ಸ್ವಾಮೀಜಿ ನಿಷ್ಕಳಂಕರಾಗಿ ನಿಟ್ಟುಸಿರು ಬಿಟ್ಟಂತಾಗಿದೆ.
ರಾಘವೇಂದ್ರ, ನ್ಯೂಸ್​​​ಫಸ್ಟ್​, ಚಿತ್ರದುರ್ಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us