/newsfirstlive-kannada/media/media_files/2025/09/06/cm_siddaramaiah_car-2025-09-06-07-55-43.jpg)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ 7 ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ಸಿಎಂ ಸಿದ್ದರಾಮಯ್ಯ ಅವರು ದಂಡ ಪಾವತಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನಿತ್ಯ ಸಂಚಾರ ಮಾಡುವ ಫಾರ್ಚೂನರ್ ಕಾರು 2024ರಿಂದ ಈವರೆಗೂ 7 ಬಾರಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿರುವುದು ಇದೆ. ಈ ಪೈಕಿ 6 ಪ್ರಕರಣಗಳು ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ ಕೇಸ್ ಆಗಿವೆ. ಇವು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂನಲ್ಲಿ (ಐಟಿಎಂಎಸ್) ಸಂಚಾರ ನಿಯಮ ಉಲ್ಲಂಘಿಸಿರುವುದು ಸೆರೆಯಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಬೆನ್ನಲೇ ದಂಡ ಪಾವತಿ ಆಗಿದೆ.
ಇದನ್ನೂ ಓದಿ: ‘ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್’ ಎಂದು ಹೇಳಿದ ಸಿಎಂ
ಸದ್ಯ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಶೇ.50ರಷ್ಟು ದಂಡ ಪಾವತಿಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಸವಾರರು ದಂಡ ಕಟ್ಟುತ್ತಿದ್ದಾರೆ. ಇದೇ ಆಫರ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಿಗಳು 2,500 ರೂಪಾಯಿ ದಂಡ ಪಾವತಿ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್ಗಳು ಕ್ಲೀಯರ್ ಆಗಿವೆ. ಈ ವರ್ಷ ಜುಲೈ 9ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಏರ್ಪೋರ್ಟ್ ಎಕ್ಸ್ಪ್ರೆಸ್ ಕಾರಿಡಾರ್ನಲ್ಲಿ ಸಿಎಂ ಅವರಿದ್ದ ಕಾರು ಓವರ್ ಸ್ಟೀಡಾಗಿ ಚಲಾಯಿಸಿ ನಿಯಮ ಉಲ್ಲಂಘಿಸಿತ್ತು.
2024ರ ಜನವರಿ 24ರಂದು ಮಧ್ಯಾಹ್ನ 12.19ರಂದು ಒಲ್ಡ್ ಏರ್ಪೋರ್ಟ್ ರಸ್ತೆಯ ಲೀಲಾ ಪ್ಯಾಲೇಸ್ ಜಂಕ್ಷನ್ ಬಳಿ ಹೋಗುವಾಗ ಸಿದ್ದರಾಮಯ್ಯ ಅವರು ಸೀಟು ಬೆಲ್ಟ್ ಧರಿಸಿಲ್ಲ. ಅದೇ ಜಂಕ್ಷನ್ನಲ್ಲಿ ಫೆಬ್ರುವರಿ ಹಾಗೂ ಆಗಸ್ಟ್ನಲ್ಲಿ ಮತ್ತೆರಡು ಪ್ರಕರಣಗಳು ದಾಖಲಾಗಿದ್ದವು. ಮಾರ್ಚ್ನಲ್ಲಿ ಚಂದ್ರಿಕಾ ಹೋಟೆಲ್ ಜಂಕ್ಷನ್ ಹಾಗೂ ಆಗಸ್ಟ್ನಲ್ಲಿ ಶಿವಾನಂದ ಸರ್ಕಲ್ ಹಾಗೂ ಡಾ.ರಾಜ್ಕುಮಾರ್ ಪ್ರತಿಮೆ ಜಂಕ್ಷನ್ಗಳ ಬಳಿ ಸೀಟು ಬೆಲ್ಟ್ ಧರಿಸಿದೇ ನಿಯಮ ಉಲ್ಲಂಘಿಸಿದ ಪ್ರಕರಣಗಳು ದಾಖಲಾಗಿದ್ದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ