ನಗದು ರೂಪದಲ್ಲೇ 25 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್ ವಿರುದ್ಧ ಐಟಿ ಇಲಾಖೆಗೆ ದೂರು: ಹಿಂದೂ ಮುಖಂಡನಿಂದ ದೂರು ಸಲ್ಲಿಕೆ

ಬಳ್ಳಾರಿಯಲ್ಲಿ ರಾಜಕೀಯ ಘರ್ಷಣೆಯಲ್ಲಿ ಮೃತಪಟ್ಟ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದರು. ಆದರೇ, ನಗದು ರೂಪದಲ್ಲೇ ಪರಿಹಾರ ನೀಡಿದ್ದರ ವಿರುದ್ಧ ಐ.ಟಿ. ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

author-image
Chandramohan
complaiant against zameer ahmed khan

25 ಲಕ್ಷ ರೂ.ಕ್ಯಾಶ್ ಕೊಟ್ಟಿದ್ದ ಜಮೀರ್ ಅಹಮದ್ ವಿರುದ್ಧ ದೂರು

Advertisment
  • 25 ಲಕ್ಷ ರೂ.ಕ್ಯಾಶ್ ಕೊಟ್ಟಿದ್ದ ಜಮೀರ್ ಅಹಮದ್ ವಿರುದ್ಧ ದೂರು
  • ಮೃತ ರಾಜಶೇಖರ್ ರೆಡ್ಡಿ ತಾಯಿಗೆ 25 ಲಕ್ಷ ರೂ. ನಗದು ಪರಿಹಾರ ಕೊಟ್ಟಿದ್ದ ಜಮೀರ್
  • ಆದರೇ, ದೇಶದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಕ್ಯಾಶ್ ನಲ್ಲಿ ಕೊಡುವಂತಿಲ್ಲ!

ರಾಜ್ಯದ ವಸತಿ  ಸಚಿವ ಜಮೀರ್ ಅಹ್ಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಹಿಂದೂ ಸಂಘಟನೆಗಳ ಮುಖಂಡ ತೇಜಸ್ ಗೌಡ ಆದಾಯ ತೆರಿಗೆ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಜನವರಿ 1 ರಂದು ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಹತ್ಯೆಯಾದ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ 25 ಲಕ್ಷ ರೂಪಾಯಿ ಪರಿಹಾರದ ಹಣವನ್ನು ವಿತರಿಸಿದ್ದರು. 25 ಲಕ್ಷ ರೂಪಾಯಿ ಹಣವನ್ನು ಬಟ್ಟೆ ಬ್ಯಾಗ್ ನಲ್ಲಿ ಮುಚ್ಚಿ ರಾಜಶೇಖರ್ ರೆಡ್ಡಿ ಅವರ ತಾಯಿಗೆ ನೀಡಿದ್ದರು. ಹಣ ನೀಡುವ ದೃಶ್ಯಗಳು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಜೊತೆಗೆ ಪತ್ರಿಕೆಗಳಲ್ಲೂ 25 ಲಕ್ಷ ರೂಪಾಯಿ ಅನ್ನು ಸಂಪೂರ್ಣವಾಗಿ ನಗದು ರೂಪದಲ್ಲೇ ನೀಡುವ ಪೋಟೋಗಳು ಕೂಡ ಪ್ರಕಟವಾಗಿವೆ. 


ಆದರೇ, ನಮ್ಮ ದೇಶದಲ್ಲಿ 2017-18 ರಲ್ಲಿ ಆರ್‌ಬಿಐ ನಿರ್ದೇಶನ ಹಾಗೂ ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಹಣವನ್ನು ಬೇರೆಯವರಿಗೆ ನೀಡುವಂತಿಲ್ಲ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಬೇರೆಯವರಿಂದ ಪಡೆಯುವಂತಿಲ್ಲ. ಇದು ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 269ST ಸೆಕ್ಷನ್‌ಗೆ ವಿರುದ್ಧವಾಗಿದೆ. ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 269st ಅಡಿ ಯಾರೇ ಆಗಲಿ ದಿನವೊಂದಕ್ಕೆ ಬೇರೊಬ್ಬರಿಗೆ 2 ಲಕ್ಷ ರೂಪಾಯಿ ಹಣವನ್ನು ಮಾತ್ರ ನಗದು ರೂಪದಲ್ಲಿ ನೀಡಲು ಅವಕಾಶ ಇದೆ. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ಚೆಕ್, ಡಿ.ಡಿ. ಮೂಲಕವೇ ನೀಡಬೇಕು.  2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ. 
ಆದರೇ, ವಸತಿ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, 25 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ಮೃತ ರಾಜಶೇಖರ್ ರೆಡ್ಡಿ ತಾಯಿಗೆ ನೀಡಿದ್ದಾರೆ. ಹೀಗಾಗಿ ಇದು ಐಟಿ ಇಲಾಖೆಯ ಕಾಯಿದೆ, ಸೆಕ್ಷನ್ ಗಳ ಉಲಂಘನೆ. ಹೀಗಾಗಿ ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿ ಜಮೀರ್ ಅಹಮದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಮುಖಂಡ ತೇಜಸ್ ಗೌಡ, ಆದಾಯ ತೆರಿಗೆ ಇಲಾಖೆಯ ಬೆಂಗಳೂರು , ಗೋವಾದ ಡೈರೆಕ್ಟರ್ ಜನರಲ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. 
ಈಗ ಈ ದೂರಿನ ಬಗ್ಗೆ ಐ.ಟಿ. ಇಲಾಖೆ ಏನು ಮಾಡುತ್ತೆ? ಏನಾದರೂ ಕ್ರಮ ಕೈಗೊಳ್ಳುತ್ತಾ? ಹಣ ಎಷ್ಟು ಇತ್ತು ಎಂಬ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನೋಟೀಸ್ ನೀಡಿ, ಅವರಿಂದ  ವಿವರಣೆ ಪಡೆಯುತ್ತಾ ಎಂಬ ಕುತೂಹಲ ಇದೆ.
ದೇಶದಲ್ಲಿ ನಗದು ವ್ಯವಹಾರದ ಮೂಲಕ ಕಪ್ಪು ಹಣದ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ಮಟ್ಟ ಹಾಕಲು ಹಾಗೂ ನಿಯಂತ್ರಿಸಲು ಆರ್‌ಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣದ ವ್ಯವಹಾರವನ್ನು ನಗದು ರೂಪದಲ್ಲಿ ಮಾಡುವಂತಿಲ್ಲ ಎಂದು ನಿಯಮ ರೂಪಿಸಿ ಜಾರಿಗೆ ತಂದಿವೆ. 

ಇನ್ನೂ ಬಹಳಷ್ಟು ಮಂದಿ ಜಮೀನು ಖರೀದಿ, ಸೈಟ್ ಖರೀದಿ, ಪ್ಲ್ಯಾಟ್ ಖರೀದಿಗೂ ನಗದು ( ಕ್ಯಾಶ್ ) ರೂಪದಲ್ಲೇ ಹಣ ನೀಡುತ್ತಾರೆ. ಹಣ ಪಡೆದವರು ಬಳಿಕ ಹಣ ಕೊಟ್ಟಿಲ್ಲ ಎಂದು ಹೇಳಬಹುದು. ಇಂಥ  ಬೆಂಗಳೂರಿನ ಕೇಸ್ ಒಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದು ಜಾಗ ಖರೀದಿಗಾಗಿ 75 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ಭೂಮಿಯ ಮಾಲೀಕರಿಗೆ ನೀಡಿತ್ತು. ಬಳಿಕ ಭೂಮಿಯ ಮಾಲೀಕರು ಜಮೀನು ಅನ್ನು ನಿಮಗೆ ಮಾರಲ್ಲ ಎಂದು ಹೇಳಿದ್ದರು. ಆಗ ಬೆಂಗಳೂರಿನ ಶಿಕ್ಷಣ ಸಂಸ್ಥೆ ಹಣ ಕೊಟ್ಟಿದ್ದೇವೆ. ನಮಗೆ ಜಮೀನು ಮಾರಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆಗ ಸುಪ್ರೀಂಕೋರ್ಟ್ ಹಣವನ್ನು ಹೇಗೆ , ಯಾವ ರೂಪದಲ್ಲಿ ಕೊಟ್ಟಿದ್ದೀರಿ ಎಂದು ಶಿಕ್ಷಣ ಸಂಸ್ಥೆಯ ಪರ ವಕೀಲರನ್ನು ಪ್ರಶ್ನಿಸಿತು. ಆಗ ನಗದು ( ಕ್ಯಾಶ್) ರೂಪದಲ್ಲೇ 75 ಲಕ್ಷ ರೂಪಾಯಿ ಹಣವನ್ನು ನೀಡಿದ್ದೇವೆ ಎಂದು ಶಿಕ್ಷಣ ಸಂಸ್ಥೆ ಪರ ವಕೀಲರು ಹೇಳಿದ್ದರು. ಆಗ ಸುಪ್ರೀಂಕೋರ್ಟ್, 2017-18 ರಿಂದಲೇ ದೇಶದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಕೊಡುವಂತಿಲ್ಲ ಎಂಬ ಆರ್‌ಬಿಐ ನಿಯಮ  ಹಾಗೂ ಐ.ಟಿ. ಇಲಾಖೆಯ ನಿಯಮ ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿತು. ಕೊನೆಗೆ ಶಿಕ್ಷಣ ಸಂಸ್ಥೆಯ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ನೀವು ಹಣ ಕೊಟ್ಟಿದ್ದಕ್ಕೆ ಯಾವುದೇ ಸಾಕ್ಷಿ, ಆಧಾರವೂ ಇಲ್ಲ. ಹಣವನ್ನು ಭೂಮಿ ಮಾಲೀಕರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕಾಗಿತ್ತು ಎಂದು ಸುಪ್ರೀಂಕೋರ್ಟ್ ಹೇಳಿತು.  ಹೀಗಾಗಿ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡದಂತೆ  ಜನರಲ್ಲಿ ಜಾಗೃತಿ ಮೂಢಿಸುವಂತೆ ಸುಪ್ರೀಂಕೋರ್ಟ್ , ಐ.ಟಿ. ಇಲಾಖೆ ಹಾಗೂ ಆರ್‌.ಬಿ.ಐ.ಗೆ ನಿರ್ದೇಶನವನ್ನು ನೀಡಿದೆ. 

INCOME TAX DEPARTMENT02





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Minister zameer ahmed khan
Advertisment