ಮತಗಳ್ಳತನಲ್ಲಿ ಗೆದ್ದವರಿಂದ ಮೋದಿ, ಪ್ರಧಾನ ಮಂತ್ರಿ ಆಗಿದ್ದಾರೆ- ಸಚಿವ KN ರಾಜಣ್ಣ ಸ್ಫೋಟಕ ಆರೋಪ

ಮತಗಳ್ಳತನದಲ್ಲಿ ಮಹದೇವಪುರವನ್ನೇ ಏಕೆ ತೆಗೆದುಕೊಂಡಿದ್ದಾರೆ ಎಂದರೆ, ಸೆಂಟ್ರಲ್ ಅಸೆಂಬ್ಲಿ ಅದು. 8 ಅಸೆಂಬ್ಲಿಯಲ್ಲಿ 7 ಅಸೆಂಬ್ಲಿ ಸೆಗ್ಮೆಂಟ್​ನಲ್ಲಿ ನಮ್ಮ ಪಕ್ಷ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಾರೆ. ಆದರೆ ಈ ಕ್ಷೇತ್ರದಲ್ಲಿ 1 ಲಕ್ಷಕ್ಕಿಂತ ಹೆಚ್ಚು ವೋಟ್​ಗಳಲ್ಲಿ ಅವರು ಮುನ್ನಡೆ ಸಾಧಿಸಿದರು.

author-image
Bhimappa
Advertisment

ಈ ಹಿಂದಿನ ಸರ್ಕಾರ ಇಡಿ, ಸಿಬಿಐ ಸೇರಿ ಇತರೆ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಈಗ ಇವೆಲ್ಲವನ್ನು ದುರುಪಯೋಗ ಮಾಡಿಕೊಂಡು ರಾಜಕೀಯ ವಿರೋಧಿಗಳನ್ನು ಮುಗಿಸುತ್ತಿದ್ದಾರೆ. ಭಯ ಬೀಳಿಸಿ ಅವರು ರಾಜಕಾರಣದಲ್ಲಿ ಇರಬಾರದಂತೆ ಮಾಡುತ್ತಿದ್ದಾರೆ. ಇಂತವುಗಳು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ. 

ಮತಗಳ್ಳತನದಲ್ಲಿ ಮಹದೇವಪುರವನ್ನೇ ಏಕೆ ತೆಗೆದುಕೊಂಡಿದ್ದಾರೆ ಎಂದರೆ, ಸೆಂಟ್ರಲ್ ಅಸೆಂಬ್ಲಿ ಅದು. 8 ಅಸೆಂಬ್ಲಿಯಲ್ಲಿ 7 ಅಸೆಂಬ್ಲಿ ಸೆಗ್ಮೆಂಟ್​ನಲ್ಲಿ ನಮ್ಮ ಪಕ್ಷ ಅಭ್ಯರ್ಥಿ ಮುನ್ನಡೆ ಸಾಧಿಸುತ್ತಾರೆ. ಆದರೆ ಈ ಕ್ಷೇತ್ರದಲ್ಲಿ 1 ಲಕ್ಷಕ್ಕಿಂತ ಹೆಚ್ಚು ವೋಟ್​ಗಳಲ್ಲಿ ಅವರು ಮುನ್ನಡೆ ಸಾಧಿಸಿದರು. 40-50 ಸಾವಿರದಲ್ಲಿ ನಮ್ಮವರು ಸೋಲುತ್ತಾರೆ. ನಿಜಕ್ಕೂ ಮತಗಳ್ಳತನ ಆಗಿದೆ. ಇದೇ ರೀತಿ ದೇಶದಲ್ಲಿ ಮತಗಳ್ಳತನ ಆಗಿ ಅವರು ಗೆದ್ದಿದ್ದಾರೆ. ಇಂತಹವರ ಬಹುಮತ ತೆಗೆದುಕೊಂಡು ಮೋದಿ ಪ್ರಧಾನ ಮಂತ್ರಿ ಆಗಿದ್ದಾರೆ ಎಂದು ಸಚಿವ ರಾಜಣ್ಣ ಅವರು ಹೇಳಿದ್ದಾರೆ.   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KN Rajanna
Advertisment