/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್, ಜೈಲಿನಲ್ಲಿ ತಲೆ ದಿಂಬು, ಬೆಡ್ ಶೀಟ್, ಹಾಸಿಗೆ ಕೇಳಿರುವ ಅರ್ಜಿಯ ವಿಚಾರಣೆ ಈಗ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ಆರಂಭವಾಗಿದೆ.
ಮೊದಲಿಗೆ ನಟ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಮಾಡಿದ್ದರು.
ಬೆಂಗಳೂರು ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗೆ ಜೈಲಿಗೆ ಭೇಟಿ ನೀಡಲು ಕೋರ್ಟ್ ಸೂಚನೆ ನೀಡಿತ್ತು. ನಟ ದರ್ಶನ್ ಎಲ್ಲಿದ್ದಾನೆ, ಕೋರ್ಟ್ ಆದೇಶ ಪಾಲನೆ ಮಾಡಲಾಗಿದೆಯೇ ಎಂದು ಪರಿಶೀಲನೆ ಮಾಡಲು ಸೂಚನೆ ನೀಡಿತ್ತು. ಆದ್ರೆ ಜೈಲು ಅಧಿಕಾರಿಗಳು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನ ಮಿಸ್ ಲೀಡ್ ಮಾಡಿದ್ದಾರೆ. ಆದೇಶದಲ್ಲಿ ಎಲ್ಲೂ ಜೈಲಾಧಿಕಾರಿಗಳಿಂದ ಮಾಹಿತಿ ಕೇಳಿ ಎಂದು ಹೇಳಿಲ್ಲ, ಸುಪ್ರಿಕೋರ್ಟ್ ಜಾಮೀನು ರದ್ದು ಮಾಡುವಾಗ ಕನಿಷ್ಠ ಸೌಲಭ್ಯ ನೀಡುವಂತೆ ಸೂಚನೆ ನೀಡಿದೆ. ಅದು ಯಾರೇ ಆಗಿರಲಿ, ಸೆಲೆಬ್ರೆಟಿ ಇದ್ದರೂ, ಸಾಮಾನ್ಯ ವ್ಯಕ್ತಿಯಾಗಿದ್ದರೂ ಕನಿಷ್ಠ ಸೌಲಭ್ಯ ನೀಡಬೇಕು. ದರ್ಶನ್ ಇರುವ ಬ್ಯಾರೆಕ್ ಬಳಿ ಇರೋ ಕ್ಯಾಮೆರಾಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ವಿಚಾರಣಾದೀನ ಕೈದಿಗಳಿಗೆ ಹಾಸಿಗೆ ಬೆಡ್ ಕೊಡೋದಕ್ಕೆ ಸಾಧ್ಯವಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಜೈಲ್ ಮ್ಯಾನ್ಯುಯಲ್ ನಲ್ಲಿ ಉಲ್ಲೇಖಿಸಿಲ್ಲ. ಇದೆಲ್ಲವೂ ಜೈಲಾಧಿಕಾರಿಗಳು ಕಾನೂನು ಸೇವಾ ಪ್ರಾಧಿಕಾರ ಅಧಿಕಾರಿಗಳಿಗೆ ನೀಡಿರುವ ತಪ್ಪು ಮಾಹಿತಿ. ದಾರಿ ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಕೆಲ ಸಹೋದ್ಯೋಗಿಗಳು ಭೇಟಿ ನೀಡಿದ್ದ ವೇಳೆ ಮತ್ತೆ ಅದೇ ಪರಿಸ್ಥಿತಿ ಕಂಡು ಬಂದಿದೆ ಎಂದು ನಟ ಹಾಗೂ ಆರೋಪಿ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಮಾಡಿದ್ದರು.
ಜೈಲಿನಲ್ಲಿ ಬೇರೆ ಖೈದಿಗಳು ರಾಜಾರೋಷವಾಗಿ ಇದ್ದಾರೆ. ಗುಬ್ಬಚ್ಚಿ ಸೀನಾ ತನ್ನ ಸಹಚರರೊಂದಿಗೆ ಬರ್ತಡೇ ಮಾಡಿಕೊಂಡಿದ್ದಾನೆ. ಅದನ್ನ ಸೋಷಿಯಲ್ ಮೀಡಿಯಾ ದಲ್ಲಿ ಹರಿ ಬಿಟ್ಟಿದ್ದಾರೆ. ಅವರಿಗೆ ಸೌಲಭ್ಯ ಕೊಡುತ್ತಿದ್ದಾರೆ. ನಮಗೆ ಕೊಡುತ್ತಿಲ್ಲ ಎಂದು ನಾವು ಹೇಳುತ್ತಿಲ್ಲ. ಎಲ್ಲರಿಗೂ ಒಂದೇ ಸೌಲಭ್ಯ ಕೊಡಿ ಎಂದು ಕೇಳುತ್ತಿದ್ದೇವೆ. ಒಬ್ಬರಿಗೊಂದು ಕಾನೂನು, ಮತ್ತೊಬ್ಬರಿಗೆ ಒಂದು ರೀತಿ ಏಕೆ ಮಾಡುತ್ತೀರಾ ಎಂದು ನಟ ದರ್ಶನ್ ಪರ ವಕೀಲ ಸುನೀಲ್ ಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ಜೈಲು ಅಧಿಕಾರಿಗಳ ವಿರುದ್ದ ವಕೀಲ ಸುನೀಲ್ ಆರೋಪ ಮಾಡಿದ್ದರು.
ಇನ್ನೂ ವರದಿಯಲ್ಲಿ ನಟ ದರ್ಶನ್ ವಾಕಿಂಗ್ ಹೋದಾಗ ಬೇರೆ ಕೈದಿಗಳು ಕಿರುಚುತ್ತಾರೆ. ಹೈಪ್ರೋಫೈಲ್ ಕೇಸ್ ಅಂತ ಉಲ್ಲೇಖಿಸಿದ್ದಾರೆ. ಪೋಟೋ ತೆಗೆದುಕೊಳ್ಳುತ್ತಾರೆ. ವಿಡಿಯೋ ತೆಗೆಯುತ್ತಾರೆ. ಅಪಾರ್ಟ್ ಮೆಂಟ್ ನಿಂದ ಪೊಟೋ ತೆಗೆಯುತ್ತಾರೆ . ಅದಕ್ಕೆ ವಾಕಿಂಗ್ ಅವಕಾಶ ಇಲ್ಲ ಎಂದಿದ್ದಾರೆ. ಕ್ವಾರಂಟೈನ್ ಸೆಲ್ ನಲ್ಲಿ ಇರೋದ್ರಿಂದ ಈ ಸಮಸ್ಯೆ . ಅದಕ್ಕೆ ನಾನು ಮನವಿ ಮಾಡಿಕೊಳ್ಳುತ್ತೇವೆ. ಮುಖ್ಯ ಜೈಲ್ ಗೆ ಶಿಫ್ಟ್ ಮಾಡಿ. ಅಲ್ಲಿ ದೊಡ್ಡ ದೊಡ್ಡ ಗೋಡೆಗಳಿವೆ. ಅಲ್ಲಿ ಯಾರು ಪೋಟೋನೂ ತೆಗೆಯಲ್ಲ. ನಾವೇನೂ ನಮ್ಮ ಸ್ವಂತಕ್ಕೆ ಕೇಳುತ್ತಿಲ್ಲ. ಮೊದಲು ಕ್ವಾರೈಂಟೆನ್ ಸೆಲ್ ಅಲ್ಲ ಅಂದ್ರು. ಆದ್ರೆ ಈಗ ಸ್ಪೆಷಲ್ ಸೆಲ್ ಅಂತ ಉಲ್ಲೇಖಿಸಿದ್ದಾರೆ ಎಂದು ನಟ ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದರು.
ಕನ್ನಡಿ, ಬಾಚಣಿಗೆಯನ್ನು ಭದ್ರತೆಯ ದೃಷ್ಟಿಯಿಂದ ನೀಡಲು ನಿರಾಕರಿಸಿದ್ದಾರೆ. ಈಗಾಗಲೆ ಕೊಲೆ ಕೇಸ್ ನಲ್ಲಿ ಜೈಲಿನಲ್ಲಿದ್ದಾರೆ. ಅಲ್ಲಿ ಸೂಸೈಡ್ ಮಾಡಿಕೊಳ್ತಾರಾ. ಮನೆ ಮಕ್ಕಳು ಅಂತ ಇದ್ದಾರೆ. ಅದರಲ್ಲೂ ಸೆಲೆಬ್ರಿಟಿಯಾದವನು ಸೂಸೈಡ್ ಮಾಡಿಕೊಳ್ತಾರಾ ಎಂದು ಸುನೀಲ್ ಕೋರ್ಟ್ ಗಮನಕ್ಕೆ ತಂದರು. ಕನ್ನಡಿ, ಬಾಚಣಿಕೆ ಕೂಡ ಸಿದ್ದವಿಲ್ಲ ಎಂದ ಮೇಲೆ ಮುಖ್ಯ ಜೈಲಿಗೆ ಶಿಫ್ಟ್ ಮಾಡಲಿ.
ದರ್ಶನ್ ಭದ್ರತೆ, ಸುರಕ್ಷತೆಗೆ ಸಂಬಂಧಿಸಿದಂತೆ ಶಿಫ್ಟ್ ಮಾಡಿಲ್ಲ ಎಂದು ಹೇಳುತ್ತಾರೆ. ಇದು ನಮ್ಮ ಸೇಫ್ಟಿ ಅಲ್ಲ. ಜೈಲು ಅಧಿಕಾರಿಗಳ ಸೇಫ್ಟಿ . ಹೀಗಾಗಿ ಸಿಆರ್ ಪಿಸಿ 91 ರ ಅರ್ಜಿ ಹಾಕಿದ್ದೇವೆ ಎಂದು ಹೇಳಿ ನಟ ದರ್ಶನ್ ಪರ ವಕೀಲ ಸುನೀಲ್ ತಮ್ಮ ವಾದ ಮಂಡನೆ ಮಾಡಿದ್ದರು.
/filters:format(webp)/newsfirstlive-kannada/media/media_files/2025/10/03/darshan-2025-10-03-08-43-31.jpg)
ಇನ್ನೂ ರಾಜ್ಯ ಸರ್ಕಾರ ಹಾಗೂ ಜೈಲು ಅಧಿಕಾರಿಗಳ ಪರ ಸರ್ಕಾರಿ ವಕೀಲ ಸಚಿನ್ ವಾದ ಮಂಡನೆ ಮಾಡಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಭೇಟಿ ನೀಡಿದ್ರು. ಅವರು ಅಲ್ಲಿ ನೋಡಿದ್ದನ್ನ, ಜೈಲಾಧಿಕಾರಿಗಳ ಅಭಿಪ್ರಾಯ ಹೇಳಿದ್ದಾರೆ. ಅಧಿಕಾರಿಗಳು ಎರಡು ಕಡೆ ಪ್ರಶ್ನೆ ಮಾಡಿದ್ದಾರೆ. ದರ್ಶನ್ ನನ್ನ ಕೇಳಿದ್ದಾರೆ. ಜೈಲಾಧಿಕಾರಿಗಳನ್ನು ಕೇಳಿದ್ದಾರೆ. ಅದನ್ನ ವರದಿಯಲ್ಲಿ ನೀಡಿದ್ದಾರೆ. ಅಷ್ಟಕ್ಕೇ ದಿಕ್ಕು ತಪ್ಪಿಸಿದ್ದಾರೆ, ಮಿಸ್ ಲೀಡ್ ಮಾಡಿದ್ದಾರೆ ಅಂದ್ರೆ ಹೇಗೆ? ನಟ ದರ್ಶನ್ ಗೆ ಫಂಗಸ್ ಇನ್ಪೆಕ್ಷನ್ ಆಗಿಲ್ಲ. ಕಾಲು ಹೊಡೆದಿದೆ. ಅದನ್ನೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಭದ್ರತೆ ವಿಚಾರಕ್ಕೆ ಬಂದ್ರೆ ಮೊನ್ನೆ ಕೋರ್ಟ್ ಆವರಣದಲ್ಲೆ ಆರೋಪಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ದರ್ಶನ್ ಒಬ್ಬ ನಟ. ಹೀಗಾಗಿ ಸರ್ವೇ ಸಾಮಾನ್ಯವಾಗಿ ಹೈಪ್ರೋಫೈಲ್ ಕೇಸ್ ಅನ್ನೋ ಅರ್ಥ ಬರುತ್ತೆ. ನಾವು ದರ್ಶನ್ ನ ಹೈಪ್ರೊಫೈಲ್ ಕೇಸ್ ಅಂತ ಭಾವಿಸಿಲ್ಲ ಎಂದು ಸರ್ಕಾರಿ ವಕೀಲ ಸಚಿನ್ ವಾದ ಮಂಡನೆ ಮಾಡಿದ್ದರು.
ಗುಬ್ಬಚ್ಚಿ ಸೀನನ ಬರ್ತ್ ಡೇ ವಿಚಾರಕ್ಕೆ ಸಂಬಂಧಿಸಿದಂತೆ, ತಪ್ಪಿತಸ್ಥ ಏಳು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸರ್ಕಾರದ ಪರ ವಕೀಲ ಸಚಿನ್ ಹೇಳಿದ್ದರು.
ಯಾರೋ ಕಾನ್ಸಟೇಬಲ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ದರ್ಶನ್ ಪರ ವಕೀಲ ಸುನೀಲ್ ಪ್ರತಿಕ್ರಿಯಿಸಿದ್ದರು.
ಬಳಿಕ ವಾದ ಮಂಡನೆಯನ್ನು ಮುಂದುವರಿಸಿದ ದರ್ಶನ್ ಪರ ವಕೀಲ ಸುನೀಲ್, ಆರೋಪಿಗಳು ತಮ್ಮ ಹಕ್ಕಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ನ್ಯಾಯಸಮ್ಮತ ಟ್ರಯಲ್ ನಡೆಯಬೇಕೆಂಬುದು ನಿಯಮ.. ಅದಕ್ಕಾಗಿ ಮೂರು ನಾಲ್ಕು ವರ್ಷ ಜೈಲಿನಲ್ಲಿರಲು ಹಿಂಜರಿಯುವುದಿಲ್ಲ.
ನಾಳೆಯೇ ದೋಷಾರೋಪ ನಿಗದಿ ಮಾಡಿ, ನಾಡಿದ್ದೇ ಗಲ್ಲುಶಿಕ್ಷೆ ಕೊಡಿ. ಶೀಘ್ರ ವಿಚಾರಣೆಗೆ ನಮ್ಮ ಆಕ್ಷೇಪವಿಲ್ಲವೆಂದು ವಕೀಲ ಸುನೀಲ್ ವಾದ ಮಾಡಿದ್ದರು.
ಇನ್ನೂ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ವಿಳಂಬ ಮಾಡಲೆಂದೇ ಆರೋಪಿಗಳು ಒಬ್ಬರ ನಂತರ ಒಬ್ಬರು ಕೇಸ್ ನಿಂದ ಮುಕ್ತಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬ ಪ್ರಾಸಿಕ್ಯೂಷನ್ ಮೊಮೋಗೆ ಪ್ರತಿಕ್ರಿಯಿಸಿದ ನಟ ದರ್ಶನ್ ಪರ ವಕೀಲ ಸುನೀಲ್, ಪ್ರಾಸಿಕ್ಯೂಷನ್ ನಿಂದ ಮೆಮೋ ಸಲ್ಲಿಕೆ ಸಂಬಂಧ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.
ಪ್ರಾಸಿಕ್ಯೂಷನ್ ಪರ ವಕೀಲರು ಕೋರ್ಟ್ ಗೆ ಹೆದರಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ ನಂತರ ಇಪ್ಪತ್ತು ವಿಚಾರಣೆಗಳು ನಡೆದಿವೆ ಎಂದಿದ್ದಾರೆ. ಎರಡೂವರೆ ತಿಂಗಳು ಸಮಯ ಹಾಳು ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾವು ಟ್ರಯಲ್ ಆರಂಭ ಮಾಡಿ ಎಂದು , ಬೇಗ ಮಾಡಿ ಎಂದು ಹೇಳಬೇಕು . ನಾವು ಜೈಲಿನಲ್ಲಿ ಇರುವುದಕ್ಕೆ ಸಿದ್ದರಿದ್ದೇವೆ. ಸುಪ್ರೀಂಕೋರ್ಟ್ ಈ ಪ್ರಕರಣ ದಲ್ಲಿ ನಿಗಾ ಇಟ್ಟಿದ್ದು, ವಿಚಾರಣೆ ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಎಂದು ಸುನೀಲ್ ವಾದಿಸಿದ್ದರು.
ನಾಳೆನೇ ಟ್ರಯಲ್ ಫಿಕ್ಸ್ ಮಾಡಿ, ನಾಳೇ ತೀರ್ಪು ಕೊಡಿ . ನಾಡಿದ್ದು ಶಿಕ್ಷೆ ಕೊಟ್ಟು ಮರಣ ದಂಡನೆ ಕೊಡಿ, ನಾವು ಸಿದ್ದ . ಎಲ್ಲಾ ಆರೋಪಿಗಳಿಗೂ ಸೌಲಭ್ಯ ಕೇಳುವುದು ಅವರ ಹಕ್ಕು. ಇದು ಮೂಲಭೂತ ಹಕ್ಕುಗಳು ಎಂದು ನಟ ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದರು.
ಸುಪ್ರೀಂ ಕೋರ್ಟ್ ಸಾಕ್ಷಿವಿಚಾರಣೆಗೆ ಕಾಲಮಿತಿ ವಿಧಿಸಿಲ್ಲ. ಒಂದೇ ವಾರ, ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಹೇಳಿಲ್ಲ . ನಾವು ಟ್ರಯಲ್ ಗೆ ರೆಡಿಯಾಗಬೇಕು. ವಕೀಲರ ತಂಡವನ್ನು ನೇಮಿಸಬೇಕು . 262 ಸಾಕ್ಷಿಗಳಿದ್ದಾರೆ, ತರಾತುರಿ ಮಾಡಬಾರದು ಎನ್ನುವುದು ಪ್ರಾಸಿಕ್ಯೂಷನ್ ಗೆ ನಮ್ಮ ಮನವಿ ಎಂದು ದರ್ಶನ್ ಪರ ವಕೀಲ ಸುನೀಲ್ ವಾದಿಸಿದ್ದರು.
ನಾವ್ಯಾರು ವಿಚಾರಣೆ ಮಾಡಬೇಡಿ ಎಂದು ಹೇಳಿಲ್ಲ. ಡಿಶ್ಚಾರ್ಜ್ ಅರ್ಜಿ ಸಲ್ಲಿಸೋದು ಪ್ರತಿಯೊಬ್ಬ ಆರೋಪಿಯ ಹಕ್ಕು. ಅದಕ್ಕೆ ಮೆಮೋ ಸಲ್ಲಿಸೋದು ಯಾವ ಕ್ರಮ. ವಿಚಾರಣೆ ತಡವಾಗುವುದರಿಂದ ಸರ್ಕಾರ ಪರ ವಕೀಲರಿಗೆ ಭಯವಿರಬಹುದು. ಕೆಲ ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ಸುನೀಲ್ ವಾದ ಮಂಡನೆ ಮಾಡಿದ್ದರು.
ಕೊನೆಗೆ ವಾದ -ಪ್ರತಿವಾದ ಮಂಡನೆ ಮುಕ್ತಾಯವಾಯಿತು. ನಟ ದರ್ಶನ್‌ಗೆ ಜೈಲಿನಲ್ಲಿ ತಲೆದಿಂಬು, ಹಾಸಿಗೆ, ಬೆಡ್ ಶೀಟ್, ಕನ್ನಡಿ, ಬಾಚಣಿಕೆ ಸೇರಿದಂತೆ ಕನಿಷ್ಠ ಮೂಲಸೌಕರ್ಯ ನೀಡಿಲ್ಲ ಎಂಬ ಅರ್ಜಿಯ ಬಗ್ಗೆ ಕೋರ್ಟ್ ಆದೇಶ ಕಾಯ್ದಿರಿಸಿದೆ. ಅಕ್ಟೋಬರ್ 29 ಕ್ಕೆ ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್ ಆದೇಶ ಕಾಯ್ದಿರಿಸಿದೆ.
/filters:format(webp)/newsfirstlive-kannada/media/media_files/2025/10/24/bangalore-city-civil-court-2025-10-24-15-45-48.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us