ಧರ್ಮಸ್ಥಳ ಪ್ರಕರಣದಲ್ಲಿ ಕ್ರೆಡಿಟ್ ಪಾಲಿಟಿಕ್ಸ್ ಜೋರಾಗಿದ್ದು ಈ ಸಂಬಂಧ ಮೂರು ಪಕ್ಷಗಳು ಪೈಪೋಟಿ ನಡೆಸಿವೆ. ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿದೆ. ಇದರ ನಡುವೆ ಇತ್ತ ಬಿಜೆಪಿ ಧರ್ಮಸ್ಥಳ ಜಾಥಾ ನಡೆಸುತ್ತಿದ್ದು ಇದರಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ.
ಇತ್ತ ಕಾಂಗ್ರೆಸ್ ಶಾಸಕರಿಂದಲೂ ಧರ್ಮಸ್ಥಳ ಚಲೋ ನಡೆಯುತ್ತಿದೆ. ಪುಣ್ಯ ಕ್ಷೇತ್ರದ ಪರ ನಾವಿದ್ದೇವೆ ಎಂದು ಸಂದೇಶ ಕೊಡುತ್ತಿದ್ದಾರೆ. ಪರಸ್ಪರ ಆರೋಪ, ಪ್ರತ್ಯಾರೋಪ, ಕೆಸರೆರಚಾಟ ಮಾಡುತ್ತಿದ್ದಾರೆ. ಎಸ್ಐಟಿ ರಚನೆ ಮಾಡುವ ಸಂದರ್ಭದಲ್ಲಿ ಇದ್ದಂತಹ ಆ ತಟಸ್ಥ ನಿಲುವು ರಾಜಕೀಯ ಪಕ್ಷಗಳಲ್ಲಿ ಈಗ ಕಾಣುತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ