Advertisment

ಪ್ರಮುಖ ನಿರ್ಧಾರಕ್ಕೆ ಅಡ್ಡಿ.. ಈ ರಾಶಿಯವ್ರಿಗೆ ಇವತ್ತು ಎಚ್ಚರಿಕೆಯ ಗಂಟೆ!

ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು. ಮಾಘ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಹಸ್ತಾ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ರಸ್ತೆ ಪಕ್ಕ ಕಾರ್ ನಿಲ್ಲಿಸಿಕೊಂಡು ನಿಂತಿದ್ದೇ ತಪ್ಪಾಯ್ತು : BMW ಕಾರ್ ಹಿಂದಿನಿಂದ ಡಿಕ್ಕಿ ಹೊಡೆದು ಮಲ್ಲಿಕಾ ದಾರುಣ ಸಾವು

ಮೇಷ

  • ಈ ದಿನ  ಕೋಪ ಹೆಚ್ಚಾಗಿರುತ್ತದೆ ತಾಳ್ಮೆಯಿರಲಿ
  • ನಿಮ್ಮ ಕಾರ್ಯ ಶಿಸ್ತು ಪ್ರಶಂಸನೀಯವಾದದ್ದು
  • ಸ್ನೇಹಿತರ ಮನೆಯಲ್ಲಿ ಶುಭ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಿ
  • ಪ್ರಮುಖ ನಿರ್ಧಾರಕ್ಕೆ ಅಡ್ಡಿಯಾಗಬಹುದು
  • ತಂತ್ರಜ್ಞಾನದ ವಿಚಾರದಲ್ಲಿ ಕೊರತೆ ಉಂಟಾಗಬಹುದು
  • ನಿಮ್ಮ ಜೀವನ ಶೈಲಿಯಿಂದ ಬೇರೆಯವರಿಗೆ ಬೇಸರ ಆಗಬಹುದು
  • ಅಮೃತ ಮೃತ್ಯುಂಜಯ ಜಪಮಾಡಿ

ವೃಷಭ 

  • ನಿಜವಾದ ಸ್ನೇಹಿತರ ಅಸಹಕಾರ
  • ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು
  • ಕೆಲಸ ಮುಂದೂಡಿಕೆ ಮಾಡುವುದರಿಂದ ಬೇಸರ ಆಗಲಿದೆ
  • ತಾಯಿಯವರಿಗೆ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಆಗಬಹುದು ಎಚ್ಚರಿಕೆವಹಿಸಿ
  • ಆರ್ಥಿಕ ಸಮಸ್ಯೆ ಉಂಟಾಗಲಿದೆ
  • ಸಹೋದರರಲ್ಲಿ  ಕಲಹ, ವಾದ- ವಿವಾದಗಳು ನಡೆಯಬಹುದು
  • ಕುಬೇರನನ್ನು ಪ್ರಾರ್ಥಿಸಿ
Advertisment

ಮಿಥುನ 

  • ನಿದ್ದೆ ಅಥವಾ ಆಯಾಸದಿಂದ ಅನಾರೋಗ್ಯ ಕಾಡಬಹುದು
  • ತಾಳ್ಮೆಯಿರಲಿ ನಕಾರಾತ್ಮಕ ಆಲೋಚನೆಗಳು ಬೇಡ
  • ನಿಮ್ಮ ವ್ಯಾಪಾರದಲ್ಲಿ ಅಸಮಾಧಾನ ಉಂಟಾಗಬಹುದು
  • ನಿಮ್ಮ ವೇಗಕ್ಕೆ ಬೇರೆಯವರು ಸಹಕರಿಸುವುದಿಲ್ಲ
  • ಆತುರದ ನಿರ್ಧಾರ ಒಳಿತಲ್ಲ
  • ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಡಲಿದೆ
  • ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ

ಕಟಕ 

  • ಭವಿಷ್ಯದ ಯೋಜನೆಗಳನ್ನು ಚರ್ಚಿಸಬಹುದು
  • ಮನೆ ವೃತ್ತಿಯಲ್ಲಿ ಅನಾನುಕೂಲ
  • ಪ್ರಯಾಣದಲ್ಲಿ ಆಯಾಸ ಆಗಬಹುದು
  • ಆಸ್ತಿ ವಿಚಾರಕ್ಕಾಗಿ ಮಾತುಕತೆ ನಡೆಯಬಹುದು
  • ಮಾನಸಿಕವಾಗಿ ದೃಢವಾಗಬೇಕು
  • ದೊಡ್ಡವರ ಮಾತನ್ನ ನಿರ್ಲಕ್ಷ ಮಾಡಬೇಡಿ
  • ಭೂವರಾಹನನ್ನು ಪ್ರಾರ್ಥಸಿ

ಸಿಂಹ 

  • ಈ ದಿನ ನಿಮಗೆ ಒತ್ತಡದ ದಿನ
  • ಮಾನಸಿಕ ಖಿನ್ನತೆ ಕಾಡಬಹುದು
  • ಹಳೆಯ ನೆನಪು ಕಣ್ಣೀರು ತರಿಸಬಹುದು
  • ವಿವಾಹ ವಿಚಾರ ಪ್ರಸ್ತಾಪವಾಗಿ ಗಲಭೆ ಆಗಬಹುದು
  • ಮಕ್ಕಳಿಂದ ಅಸಮಾಧಾನ ಆಗಲಿದೆ
  • ಅನಾರೋಗ್ಯ ಪೀಡತರಿಗೆ ಚೇತರಿಕೆ
  • ಸ್ವಯಂವರ ಪಾರ್ವತಿ ಪ್ರಾರ್ಥನೆ
Advertisment

ಕನ್ಯಾ 

  • ಹೂ ವ್ಯಾಪಾರ ಮಾಡುವವರಿಗೆ ಲಾಭವಿದೆ
  • ಜವಾಬ್ದಾರಿ ಹೆಚ್ಚಾಗಿ ಆತಂಕ ಸೃಷ್ಠಿಯಾಗಬಹುದು
  • ಮಕ್ಕಳ ಪ್ರಗತಿಯಿಂದ ಸಂತೋಷ ಉಂಟಾಗಲಿದೆ
  • ಕುಟುಂಬದಲ್ಲಿ ಮಂಗಳಕಾರ್ಯದ ಚರ್ಚೆ ನಡೆಯಲಿದೆ
  • ಸ್ತ್ರೀಯರಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು
  • ಅನಗತ್ಯ ಮಾತು ಹಾಸ್ಯ ಬೇಡ ಅಪಮಾನ ಆಗಬಹುದು
  • ಲಲಿತಾ ಸಹಸ್ರನಾಮ ಪಠಿಸಿ

ತುಲಾ

  • ಶರೀರದಲ್ಲಿ ಸಮಸ್ಯೆ ನೋವು ಕಾಣಲಿದೆ
  • ಪ್ರೇಮಿಗಳಿಗೆ ಶುಭದಿನ
  • ಮನೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಲಿದೆ
  • ಭಾವನಾತ್ಮಕವಾಗಿ ದುರ್ಬಲರಾಗಬಹುದು
  • ಮಕ್ಕಳಿಂದ ತೊಂದರೆ ಆಗಬಹುದು
  • ವಿದ್ಯಾರ್ಥಿಗಳಿಗೆ ಶುಭದಿನ
  • ಐಶ್ವರ್ಯ ಲಕ್ಷ್ಮಿಯನ್ನು ಪ್ರಾರ್ಥಿಸಿ

ವೃಶ್ಚಿಕ

  • ವೃತ್ತಿಯಲ್ಲಿ, ಕೆಲಸದಲ್ಲಿ ನಿಮಗೆ ಕಿರುಕುಳ ಆಗಬಹುದು
  • ಆತ್ಮವಿಶ್ವಾಸದ ಕೊರತೆ ಉಂಟಾಗಬಹುದು
  • ಮಾನಸಿಕ ಬೇಸರದಿಂದ ಜಿಗುಪ್ಸೆ ಉಂಟಾಗಲಿದೆ
  • ದಾಂಪತ್ಯದಲ್ಲಿ  ಕಲಹ ಆಗಬಹುದು
  • ಅತಿಯಾದ ಕೋಪದಿಂದ ನಿಷ್ಠೂರ ಆಗುತ್ತೀರಿ
  • ಯಾವುದೇ ಆತುರದ ನಿರ್ಧಾರ ಬೇಡ
  • ಲಕ್ಷ್ಮಿನಾರಾಯಣ ಉಪಾಸನೆ ಮಾಡಿ
Advertisment

ಧನುಸ್ಸು 

  • ಕರ್ತವ್ಯ ನಿರ್ವಹಣೆ ನಿಯಮ ಬದ್ದವಾಗಿರಲಿ
  • ಹಾಲು ವ್ಯಾಪಾರಿಗಳಿಗೆ ಶುಭದಿನ
  • ಹಿರಿಯರ ಆಸ್ತಿ ವಿಚಾರದಲ್ಲಿ ಕಲಹ ಆಗಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ 
  • ಈ ದಿನ ದೊಡ್ಡ ಆಲೋಚನೆಗಳಿರುತ್ತವೆ                                                     
  • ಕಷ್ಠಪಟ್ಟು ಮಾಡಿದ ಕೆಲಸ ಫಲಕೊಡುವುದಿಲ್ಲ
  • ಈಶ್ವರಾರಾಧನೆ ಮಾಡಿ

ಮಕರ

  • ಮನೆಯ ವಾತಾವರಣ ಚೆನ್ನಾಗಿರುತ್ತದೆ
  • ಶತ್ರುಗಳಿಗೆ ಅಧೈರ್ಯ 
  • ಮಕ್ಕಳ ವಿಚಾರದಲ್ಲಿ ತುಂಬಾ ಅನೂಕುಲವಿದೆ
  • ಹಣ ಖರ್ಚು ಆಗುವುದರಿಂದ ಬೇಸರ ಆಗಬಹುದು
  • ಅಣ್ಣ ತಮ್ಮಂದಿರಲ್ಲಿ ಕಲಹವಿರುತ್ತದೆ
  • ಉದೋಗ್ಯದಲ್ಲಿ ಸಣ್ಣ ಬದಲಾವಣೆ ಉಂಟಾಗಲಿದೆ 
  • ವಿಷ್ಣು ಸಹಸ್ರನಾಮ ಪಠಿಸಿ

ಕುಂಭ

  • ಇಂದು ಮಕ್ಕಳಿಗೆ ಪ್ರಗತಿಯಿದೆ
  • ಮನೆಯಲ್ಲಿ ಸಮಾಧಾನವಿರುವುದಿಲ್ಲ
  • ದಾಂಪತ್ಯದ ವೈಮನಸ್ಸು ದೂರವಾಗುತ್ತದೆ
  • ನೌಕರಿ ಸ್ಥಳದಲ್ಲಿ ಹಲವಾರು ಚರ್ಚೆ ಮಾಡುತ್ತೀರಿ
  • ಬೇರೆಯವರ ನಿಂದನೆಗೆ ಒಳಗಾಗುತ್ತೀರಿ
  • ವಿದ್ಯಾರ್ಥಿಗಳಿಗೆ ಅನೂಕುಲವಿದೆ
  • ಮನೆದೇವರಿಗೆ ತುಪ್ಪದ ದೀಪ ಹಚ್ಚಿ
Advertisment

ಮೀನ

  • ಕೆಲಸದ ಒತ್ತಡ ಹೆಚ್ಚಾಗಲಿದೆ
  • ವ್ಯಾಪಾರದಲ್ಲಿ ಹೊಸ ಒಪ್ಪಂದ ಮಾಡಬಹುದು
  • ವ್ಯಾವಹಾರಿಕ ವಿಚಾರಗಳನ್ನು ಮನೆಯಲ್ಲಿ ವಿನಿಮಯ ಮಾಡಿಕೊಳ್ಳಿ
  • ಷೇರು ಮಾರುಕಟ್ಟೆಯಲ್ಲಿ ಲಾಭವಿದೆ
  • ಆರೋಗ್ಯದ ಬಗ್ಗೆ ಗಮನಿಸಿ
  • ವಿದೇಶದಿಂದ ಶುಭ ವಾರ್ತೆ ಕೇಳಬಹುದು
  • ಇಷ್ಟ ದೇವರ ಪ್ರಾರ್ಥನೆ ಮಾಡಿ

ಇದನ್ನೂ ಓದಿ: C-DAC ಯಲ್ಲಿ ನೇಮಕಾತಿಗೆ ಇಂಜಿನಿಯರ್ ಗಳಿಂದ ಅರ್ಜಿ ಆಹ್ವಾನ : 805 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment
Advertisment
Advertisment