/newsfirstlive-kannada/media/media_files/2026/02/12/mangalore-love-jihad-case-2026-02-12-18-43-27.jpg)
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಮಾಡ್ತಿದೆ.. ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಕೂಪಕ್ಕೆ ತಳ್ಳಿ ಲವ್ ಜಿಹಾದ್ ಮಾಡಲಾಗ್ತಿದೆ ಅಂತ ಹಿಂದೂ ಸಂಘಟನೆಗಳು ಸ್ಫೋಟಕ ಆರೋಪ ಮಾಡಿದ್ದ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪರಾರಿಯಾಗಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ..
ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣ ಕರಾವಳಿಯಲ್ಲಿ ಸಂಚಲನ ಸೃಷ್ಟಿಸಿದೆ. ಕಾಸರಗೋಡು ಮೂಲದ ಹಿಂದೂ ಯುವತಿ.. ಸುರತ್ಕಲ್‌ನ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿದ್ದು ಸದ್ಯ ಕೇರಳದಲ್ಲಿರುವ ಸುಳಿವು ಲಭ್ಯ ಆಗಿದೆ.. ಪ್ರಕರಣದಲ್ಲಿ ಲವ್​ ಜಿಹಾದ್ ಆರೋಪಕ್ಕೂ ಇದೀಗ ಹೊಸ ತಿರುವು ಪಡೆದುಕೊಳ್ತಿದೆ..
ಮುಸ್ಲಿಂ ಯುವಕನ ಜೊತೆ ಯುವತಿ ಪರಾರಿ ಪ್ರಕರಣ!
ಕರಾವಳಿಯಲ್ಲಿ ಡ್ರಗ್ಸ್ ಜಾಲ.. ಲವ್ ಜಿಹಾದ್ ಆರೋಪ!
ಮಂಗಳೂರಲ್ಲಿ ಮುಸ್ಲಿಂ ಯುವಕನ ಜೊತೆ ಪರಾರಿಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಲವ್ ಜಿಹಾದ್ ಆರೋಪ ಸುತ್ತಿಕೊಂಡಿದೆ. ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಲವ್ ಜಿಹಾದ್ ಆರೋಪ ಮಾಡಿದ್ದಾರೆ.. ಪರಾರಿಯಾಗಿರುವ ವೈಶಾಲಿಯನ್ನು ಡ್ರಗ್ಸ್ ಕೂಪಕ್ಕೆ ತಳ್ಳಿ, ಬ್ಲಾಕ್​ಮೇಲ್ ಮಾಡಿ ಲವ್ ಜಿಹಾದ್ ಮಾಡಿದ್ದಾರೆ ಅಂತ ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಆರೋಪಿಸಿದ್ದಾರೆ.. ಮೊಹ್ಮದ್ ಮಿದ್ಲಾಜ್ ಮೊದಲಿಗೆ ಎಸ್​ಡಿಪಿಐ ಮುಖಂಡನ ಜ್ಯೂವೆಲ್ಲರಿ ಶಾಪ್​​ನಲ್ಲಿ ಕೆಲಸ ಮಾಡ್ತಿದ್ದು ಅಲ್ಲಿ ಯುವತಿಯ ತಲೆಕೆಡಿಸಿ ಹೀಗೆ ಮಾಡಿದ್ದಾರೆ.. ಅದೂ ಅಲ್ಲದೇ ಸುರತ್ಕಲ್ ಭಾಗದಲ್ಲಿ ಡ್ರಗ್ಸ್ ಜಾಲ ಆ್ಯಕ್ಟೀವ್ ಆಗಿದೆ ಅಂತ ಆತಂಕ ಹೊರ ಹಾಕಿದ್ದಾರೆ..
‘ಮಂಗಳೂರಿನ ಆ ಪಿಜಿಗಳಲ್ಲೇ ಆಗ್ತಿದ್ಯಾ ಬ್ರೈನ್​ವಾಶ್​?
ಮಗಳು ಮನೆಗೆ ಬರುವ ನಿರೀಕ್ಷೆಯಲ್ಲಿ ವೈಶಾಲಿ ಕುಟುಂಬ!
ಮಂಗಳೂರಿನ ಆ ಪಿಜಿಗಳಲ್ಲೇ ಬ್ರೈನ್​​ವಾಶ್ ಮಾಡಲಾಗ್ತಿದೆ ಅಂತ ವೈಶಾಲಿ ತಾಯಿ ಲತಾ ಕೂಡ ಸ್ಫೋಟಕ ಹೇಳಿಕೆ ಸಿಡಿಸಿದ್ದಾರೆ.. ಕೆಲ ಪಿಜಿಗಳಲ್ಲಿ ಹುಡುಗ-ಹುಡುಗಿ ಒಟ್ಟಿಗೆ ಇರ್ತಾರೆ, ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ.. ಪಿಜಿಗೆ ಮಗಳನ್ನು ಹುಡುಕಿಕೊಂಡು ಹೋಗಿದ್ದೆವು. ಆಗ ಓರ್ವ ಯುವಕ-ಯುವತಿ ಕೊಠಡಿಯಿಂದ ಹೊರ ಬರ್ತಾ ಇದ್ದರು.. ಇದನ್ನು ಪಿಜಿ ಮಾಲೀಕರಿಗೆ ಕೇಳಿದ್ರೆ ಅವರು ದರ್ಪ ತೋರಿದ್ರು ಅಂತ ಆರೋಪಿಸಿದ್ದಾರೆ, ಜನವರಿ 16ರಂದು ಮಗಳು ಕೊನೆಯದಾಗಿ ಮನೆಗೆ ಬಂದಿದ್ದ ಮಗಳು ವಾಪಸ್ ಬರುವ ನಿರೀಕ್ಷೆ ಇದೆ ಅಂತ ಪೋಷಕರ ಅಲವತ್ತುಕೊಂಡಿದ್ದಾರೆ..
ಒಟ್ಟಾರೆ, ಮಗಳನ್ನು ಮರಳಿ ಮನೆಗೆ ಕಳುಹಿಸುವಂತೆ ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಕಳೆದ ಶನಿವಾರ ಮಗಳನ್ನು ನೋಡಿದ್ದ ಹೆತ್ತವರಿಗೆ ಬಳಿಕ ಮಗಳ ಎಲ್ಲಿದ್ದಾಳೆ ಎಂಬ ಸುಳಿವು ಇಲ್ಲ. ಹೀಗಾಗಿ ಸುರತ್ಕಲ್‌ನಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನು ಬೆಂಗಳೂರಲ್ಲಿ ಕೆಲಸ ಮಾಡ್ತಿದ್ದ ವೈಶಾಲಿ, ಮಂಗಳೂರಿನ ಪಿಜಿಗೆ ಬಂದಿದ್ದು ಏಕೆ, ಇಲ್ಲಿ ಏನು ಕೆಲಸ ಇತ್ತು.. ಪಿಜಿಗಳಲ್ಲಿ ಏನೆಲ್ಲಾ ಅಕ್ರಮ ನಡೀತಿದೆ ಎಂಬ ಬಗ್ಗೆ ತನಿಖೆ ಮಾಡುವಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..
ಕಿರಣ್, ನ್ಯೂಸ್ ಫಸ್ಟ್, ಮಂಗಳೂರು.
=====================
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us