ಧರ್ಮಸ್ಥಳದ ಬುರುಡೆ ಗ್ಯಾಂಗ್‌ನ ಚಿನ್ನಯ್ಯಗೆ ಈಗ ತನ್ನದೇ ಗ್ಯಾಂಗ್ ನಿಂದ ಜೀವ ಭಯ! : ಭದ್ರತೆ ಕೋರಿ ಪೊಲೀಸ್ ಠಾಣೆಗೆ ದೂರು

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿ, ಜೈಲು ಪಾಲಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಈಗ ಶಿವಮೊಗ್ಗ ಜೈಲಿನಿಂದ ಬಿಡುಗಡೆ ಆಗಿದ್ದಾನೆ. ಆದರೇ, ಈಗ ತನ್ನದೇ ಗ್ಯಾಂಗ್ ನಿಂದ ಜೀವ ಭಯ ಇದೆ ಎಂದು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ. ಪೊಲೀಸ್ ಭದ್ರತೆ ಕೋರಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾನೆ.

author-image
Chandramohan
mask man dharamasthala 011

ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಈಗ ಜೀವ ಭಯ!

Advertisment

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಹಾಗೂ ನೇತ್ರಾವತಿ ನದಿ ದಡದಲ್ಲಿ ಅನೇಕರ ಶವ ಹೂಳಲಾಗಿದೆ ಎಂದು ಪೊಲೀಸರು ಹಾಗೂ ಕೋರ್ಟ್ ಗೆ ದೂರು ನೀಡಿದ್ದ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರೇ ಬಳಿಕ ಬಂಧಿಸಿದ್ದು ಈಗ ಇತಿಹಾಸ. ಆದರೇ, ಈಗ ಅದೇ ಚಿನ್ನಯ್ಯನಿಗೆ ತನ್ನ  ಬೆಂಬಲಕ್ಕಿದ್ದ ಗ್ಯಾಂಗ್ ನಿಂದಲೇ ಜೀವ ಭಯ ಇದೆಯಂತೆ. ಕೋರ್ಟ್ ನಿಂದ ಬೇಲ್ ಪಡೆದು, ನಿನ್ನೆ ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆಯಾಗಿದ್ದಾನೆ. 
ಜೈಲಿನಿಂದ ಬಿಡುಗಡೆ ಬಳಿಕ ಚಿನ್ನಯ್ಯ ಮತ್ತೆ ಧರ್ಮಸ್ಥಳ ಗ್ರಾಮಕ್ಕೆ ಬಂದು ಲಾಡ್ಜ್ ಒಂದರಲ್ಲಿ ತನ್ನ ಹೆಂಡತಿ ಜೊತೆ ವಾಸ್ತವ್ಯ ಹೂಡಿದ್ದಾನೆ. ಧರ್ಮಸ್ಥಳದಲ್ಲಿ ತನಗೆ ಐದು ಮಂದಿಯಿಂದ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಭದ್ರತೆ ನೀಡಿ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾನೆ, 
ಮಹೇಶ್ ಶೆಟ್ಟಿ ತಿಮರೋಡಿ
ಗಿರೀಶ್ ಮಟ್ಟಣ್ಣವರ್
ವಿಠಲ ಗೌಡ
ಜಯಂತ್
ಸಮೀರ್ ಎಂ.ಡಿ 
ಎಂಬವರು  ಜೀವ ಬೆದರಿಕೆ‌ ಹಾಕ ಬಹುದು ಎಂದು ದೂರು ನೀಡಿದ್ದಾನೆ.

Mask man chinnayya timarodi


 ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮನವಿ ಸಲ್ಲಿಸಲು‌ ಧರ್ಮಸ್ಥಳ ಪೊಲೀಸರು ಸೂಚಿಸಿದ್ದಾರೆ.  ಇವರೆಲ್ಲರಿಂದ ಮುಂದೆ ನನಗೆ ಜೀವ ಬೆದರಿಕೆ ಬರಬಹುದು.  ಆದ್ದರಿಂದ ತನಗೆ ಹಾಗೂ ತನ್ನ ಪತ್ನಿಗೆ ರಕ್ಷಣೆ ನೀಡಬೇಕಾಗಿ ದೂರು ಅರ್ಜಿ ಸಲ್ಲಿಸಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಗೂ ಚಿನ್ನಯ್ಯ ಮನವಿ ಮಾಡಿದ್ದಾನೆ.  ಮನವಿಯನ್ನು ಸ್ವೀಕರಿಸಿದ್ದು,  ಬೆಳ್ತಂಗಡಿ   ಪೊಲೀಸ್ ಠಾಣೆಯಲ್ಲಿ PO1070250601253 ರಂತೆ ದೂರರ್ಜಿ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mask man chinnaiah seeks police protection
Advertisment