/newsfirstlive-kannada/media/media_files/2025/08/13/dharmasthala-case1-2025-08-13-08-18-32.jpg)
ತಲೆಬುರುಡೆ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ಶ*ವಗಳನ್ನ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯ ತಂದಿದ್ದ ತಲೆಬುರುಡೆಯ ಎಫ್‌ಎಸ್‌ಎಲ್ ವರದಿ ಬಂದಿದೆ. ವರದಿಯಲ್ಲಿ ತಲೆಬುರುಡೆಯಲ್ಲಿ ಮಣ್ಣಿನ ಅಂಶ ಪತ್ತೆಯಾಗದ ಕಾರಣ, ಪೊಲೀಸರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆ SIT ಅಧಿಕಾರಿಗಳು ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಚಿನ್ನಯ್ಯ ತಂದಿದ್ದ ತಲೆ ಬುರುಡೆ ಯಾವುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಯಾವುದು ಈ ಬುರುಡೆ?
ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನ ಹೂತು ಹಾಕಿದ್ದೇನೆ ಎಂದು ಆರೋಪ ಮಾಡಿದ್ದ ಚಿನ್ನಯ್ಯ ಬರೋವಾಗ ತಲೆ ಬುರುಡೆಯೊಂದನ್ನು ತೆಗೆದುಕೊಂಡು ಬಂದಿದ್ದ. ಅಲ್ಲದೇ ಅದನ್ನೂ ಕೋರ್ಟ್ಗೆ ಸಹ ಒಪ್ಪಿಸಲಾಗಿತ್ತು. ಬಳಿಕ ತಲೆಬುರುಡೆಯನ್ನು ಎಸ್ಐಟಿ ಅಧಿಕಾರಿಗಳು FSLಗೆ ಕಳುಹಿಸಿದ್ದರು. ಆದ್ರೆ ವರದಿಯಲ್ಲಿ ತಲೆಬುರುಡೆಯಲ್ಲಿ ಮಣ್ಣಿನ ಅಂಶ ಪತ್ತೆಯಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಹೀಗಾಗಿ ಆರೋಪಿ ಚಿನ್ನಯ್ಯ ತಂದಿದ್ದ ತಲೆ ಬುರುಡೆ ಹಿಂದೆ ಬಿದ್ದ ಎಸ್ಐಟಿ ತಂಡ ಬಿದ್ದಿದೆ. ಆ ಬುರುಡೆ ಮಣ್ಣಿನಲ್ಲಿ ಸಿಕ್ಕಿಲ್ಲ ಅಂತ ಅನುಮಾನ ವ್ಯಕ್ತವಾಗಿದೆ. ಯಾವುದಾದ್ರೂ ರಿಸರ್ಚ್ ಸೆಂಟರ್ನಿಂದ ಬುರುಡೆ ತಂದಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಧರ್ಮಸ್ಥಳ ಅಕ್ಕ ಪಕ್ಕದ ರಿಸರ್ಚ್ ಸೆಂಟರ್ಗಳಲ್ಲಿ ಬುರುಡೆ ನಾಪತ್ತೆ ಆಗಿದಿಯಾ ಅಂತ ತನಿಖೆ ಶುರು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ