Advertisment

ಧರ್ಮಸ್ಥಳ ಎಸ್‌ಐಟಿ ಯಿಂದ ಸದ್ಯದಲ್ಲೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ : ಬುರುಡೆ ಗ್ಯಾಂಗ್ ವಿರುದ್ಧ ಏನು ಕ್ರಮ? ಶಿಫಾರಸು ಏನು?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಚಿನ್ನಯ್ಯ ನೀಡಿದ್ದ ದೂರಿನ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು. ಈಗ ಎಸ್‌ಐಟಿ ತನ್ನ ತನಿಖೆ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ಸದ್ಯದಲ್ಲೇ ವರದಿ ಸಲ್ಲಿಸಲಿದೆ. ವರದಿಯಲ್ಲಿ ಏನಿರಲಿದೆ? ರಾಜ್ಯ ಸರ್ಕಾರಕ್ಕೆ ಏನು ಶಿಫಾರಸ್ಸು ಮಾಡಲಿದೆ ಎಂಬ ಕುತೂಹಲ.

author-image
Chandramohan
dharmasthala case(11)

ಎಸ್‌ಐಟಿಯಿಂದ ಸದ್ಯದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆ

Advertisment
  • ಎಸ್‌ಐಟಿಯಿಂದ ಸದ್ಯದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆ
  • ಕುತೂಹಲ ಕೆರಳಿಸಿದ ಎಸ್‌ಐಟಿ ಸಲ್ಲಿಸುವ ವರದಿ
  • ಬುರುಡೆ ಗ್ಯಾಂಗ್ ವಿರುದ್ಧ ಏನು ಕ್ರಮ ಎಂಬ ಕುತೂಹಲ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ಬಗ್ಗೆ ತನಿಖೆಯನ್ನು ಎಸ್‌ಐಟಿ ಮತ್ತಷ್ಟು ತೀವ್ರಗೊಳಿಸಿದೆ.  ರಾಜ್ಯ ಸರ್ಕಾರಕ್ಕೆ ಎಸ್‌ಐಟಿ ಆದಷ್ಟು ಬೇಗ ವರದಿ ಸಲ್ಲಿಸಬೇಕಾಗಿದೆ. ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಸ್‌ಐಟಿಗೆ ಸೂಚಿಸಿದ್ದಾರೆ.  ಈ  ಹಿನ್ನಲೆಯಲ್ಲಿ ಪ್ರಕರಣದ ವರದಿಯನ್ನು ಎಸ್‌ಐಟಿ ಅಧಿಕಾರಿಗಳು ಸಿದ್ದಪಡಿಸುತ್ತಿದ್ದಾರೆ.  ಇನ್ನೂ ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಎಸ್‌ಐಟಿ ಸಲ್ಲಿಸಲಿದೆ. 
ಧರ್ಮಸ್ಥಳ ಗ್ರಾಮದಲ್ಲಿ 38 ಅಸಹಜ ಸಾವುಗಳ ಬಗ್ಗೆ ಕೂಲಂಕುಷವಾಗಿ ಎಸ್‌ಐಟಿ ಪರಿಶೀಲನೆ ನಡೆಸಿದೆ.  ಧರ್ಮಸ್ಥಳ ಗ್ರಾಮ ಪಂಚಾಯತ್‌ ವಿಲೇವಾರಿ ಮಾಡಿದ 38 ಶವಗಳ ಬಗ್ಗೆ ಗಂಭೀರ ತನಿಖೆ ನಡೆಸಿದೆ. 
ಧರ್ಮಸ್ಥಳ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಮೃತದೇಹಗಳನ್ನು ವಿಲೇವಾರಿ ಮಾಡಿತ್ತು
ಅಸಹಜ ಸಾವುಗಳಲ್ಲಿ ಗುರುತು ಪತ್ತೆಯಾಗದ 38 ಪ್ರಕರಣಗಳ ಮೃತದೇಹ ವಿಲೇವಾರಿ ಮಾಡಲಾಗಿತ್ತು. 
ಆದರೆ ಈ ಬಗ್ಗೆ ಬೆಳ್ತಂಗಡಿ ಅಥವಾ ಧರ್ಮಸ್ಥಳ ಠಾಣೆಗಳಲ್ಲಿ  ಅಸಹಜ ಸಾವಿನ ವರದಿ (UDR) ದಾಖಲೆ ಲಭ್ಯವಾಗಿಲ್ಲ.  ಧರ್ಮಸ್ಥಳ ಗ್ರಾ.ಪಂ ಮೂರು ದಶಕಗಳಲ್ಲಿ ವಿಲೇವಾರಿ ಮಾಡಿದ್ದ ಶವಗಳ ವಿವರವನ್ನು ಎಸ್‌ಐಟಿ ಕಲೆ ಹಾಕಿದೆ.  ಇದೇ ಅವಧಿಯಲ್ಲಿ ಬೆಳ್ತಂಗಡಿ, ಧರ್ಮಸ್ಥಳ ಠಾಣೆಗಳಲ್ಲಿ ದಾಖಲಾಗಿದ್ದ UDR ಪ್ರಕರಣಗಳ ವಿವರವನ್ನು ಎಸ್‌ಐಟಿ ಕಲೆ ಹಾಕಿದೆ.  ಆದರೆ ಎರಡನ್ನೂ ತಾಳೆ ಹಾಕಿದಾಗ ಕೆಲ ಪ್ರಕರಣಗಳ ದಾಖಲೆ ಇಲ್ಲದಿರುವುದು ಪತ್ತೆಯಾಗಿದೆ.  38 ಪ್ರಕರಣಗಳಲ್ಲಿ ಸ್ಥಳೀಯ ಠಾಣೆಯಲ್ಲಿ ದಾಖಲೆಗಳು ಅಲಭ್ಯವಾಗಿವೆ.  ಬಹುತೇಕ 2-3 ದಶಕಗಳಿಗಿಂತಲೂ ಹಳೆಯ ಪ್ರಕರಣಗಳಾಗಿರೋ ಮಾಹಿತಿ ಮಾತ್ರ ಎಸ್‌ಐಟಿಗೆ ಲಭ್ಯವಾಗಿದೆ.  ಸದ್ಯದಲ್ಲೇ ಎಸ್‌ಐಟಿ , ರಾಜ್ಯ ಸರ್ಕಾರಕ್ಕೆ ತನ್ನ ತನಿಖೆಯ ಬಗ್ಗೆ ವರದಿಯನ್ನು ಸಲ್ಲಿಸಲಿದೆ. 


ಹೀಗಾಗಿ ಈಗ ಎಸ್‌ಐಟಿ ರಾಜ್ಯ ಸರ್ಕಾರಕ್ಕೆ ಯಾವ ವರದಿ ಸಲ್ಲಿಸುತ್ತೆ, ಬುರುಡೆ ಗ್ಯಾಂಗ್ ಹೇಳಿದ್ದು ಸತ್ಯ ಎಂದು ವರದಿ ಸಲ್ಲಿಸುತ್ತೋ, ಇಲ್ಲವೋ ಬುರುಡೆ ಗ್ಯಾಂಗ್ ದೂರು ಸುಳ್ಳು ಎಂದು ವರದಿ ಸಲ್ಲಿಸುತ್ತೋ ಎಂಬ ಕುತೂಹಲ ಇದೆ. 

ಧರ್ಮಸ್ಥಳದಲ್ಲಿ ತಾನು ನೂರಾರು ಶವಗಳನ್ನು ಹೂತು ಹಾಕಿದ್ದೆ, ಆ ಜಾಗಗಳನ್ನು ತೋರಿಸುತ್ತೇನೆ ಎಂದು ಲಿಖಿತ ದೂರು ನೀಡಿ ಬಂದಿದ್ದ ಚಿನ್ನಯ್ಯ ತಾನು ತಂದ ತಲೆ ಬುರುಡೆ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇರೋ ಕಾರಣದಿಂದ ಈಗಾಗಲೇ ಬಂಧಿಸಿ ಶಿವಮೊಗ್ಗ ಜೈಲಿಗೆ ಕಳಿಸಲಾಗಿದೆ.
ಹೀಗಾಗಿ ಈಗ ಈ ತಲೆ ಬುರುಡೆ ಹಿಂದಿನ ಷಡ್ಯಂತ್ರದ ಹಿಂದೆ ಇರೋರ ಬಗ್ಗೆ ಎಸ್‌ಐಟಿ ರಾಜ್ಯ ಸರ್ಕಾರಕ್ಕೆ ಏನು ವರದಿ ನೀಡುತ್ತೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.  
 ಚಿನ್ನಯ್ಯ ಹಿಂದಿನ ಶಕ್ತಿಗಳ ಯಾವ ಕ್ರಮ ಕೈಗೊಳ್ಳಲಾಗುತ್ತೆ, ಈ ಬಗ್ಗೆ ಎಸ್‌ಐಟಿ ರಾಜ್ಯ ಸರ್ಕಾರಕ್ಕೆ ಏನಾದರೂ ಶಿಫಾರಸ್ಸುಗಳನ್ನು ಮಾಡುತ್ತಾ, ಇಲ್ಲವೇ ತಾನೇ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಾ  ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. 

Advertisment

dharmasthala(3)




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Dharmasthala case
Advertisment
Advertisment
Advertisment