ಧರ್ಮಸ್ಥಳ ಬುರುಡೆ ರಹಸ್ಯ ಬೇಧಿಸಲು ಎಸ್​​ಐಟಿ ಖರ್ಚು ಮಾಡಿದ್ದು ಎಷ್ಟು ಲಕ್ಷ?

ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತು ಹಾಕಿದ್ದೇನೆ ಅಂತ ಆರೋಪ ಮಾಡಿದ್ದ ಆರೋಪಿ ಚಿನ್ನಯ್ಯ ನಾಯ್ಯಾಂಗ ಬಂಧನದಲ್ಲಿದ್ದಾನೆ. ಸದ್ಯ SIT ಅಧಿಕಾರಿಗಳು ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

author-image
Veenashree Gangani
dharmasthala case(11)
Advertisment

ಧರ್ಮಸ್ಥಳದಲ್ಲಿ ನೂರಾರು ಶ*ವಗಳನ್ನು ಹೂತು ಹಾಕಿದ್ದೇನೆ ಅಂತ ಆರೋಪ ಮಾಡಿದ್ದ ಆರೋಪಿ ಚಿನ್ನಯ್ಯ ನಾಯ್ಯಾಂಗ ಬಂಧನದಲ್ಲಿದ್ದಾನೆ. ಸದ್ಯ SIT ಅಧಿಕಾರಿಗಳು ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. 

ಇದನ್ನೂ ಓದಿ: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ವಿಘ್ನ ನಿವಾರಕನ ಪ್ರತಿಷ್ಠಾಪನೆ ಸಡಗರ ಜೋರು

dharmasthala case(10)

ಧರ್ಮಸ್ಥಳದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್​ಐಟಿಗೆ ವಹಿಸಿದೆ. ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ಡಾ.ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿತ್ತು. ಎಸ್ಐಟಿ ಸದಸ್ಯರಾಗಿ ಅನುಚೇತ್, ಸೌಮ್ಯಲತಾ, ಜಿತೇಂದ್ರಕುಮಾರ್ ಕೂಡ ಇದ್ದರು. ಜುಲೈ 23ರಿಂದ ಎಸ್​ಐಟಿ ತಂಡ ಧರ್ಮಸ್ಥಳದ ವಿರುದ್ಧ ಗಂಭೀರವಾಗಿ ಆರೋಪ ಮಾಡಿದ್ದ ಚಿನ್ನಯ್ಯ ಸೂಚಿಸಿದ ಜಾಗದಲ್ಲಿ ಮಣ್ಣನ್ನು ಅಗೆಯಲಾಗಿತ್ತು. ಹೀಗಾಗಿ ಅದಕ್ಕೆ ಬೇಕಾಗಿದ್ದ ಎಲ್ಲಾ ಯಂತ್ರಗಳ ಎಸ್​ಐಟಿ ಸ್ಥಳಕ್ಕೆ ಕರೆಸಿತ್ತು. ಆದ್ರೆ ಈವರೆಗೂ ಎಸ್​ಐಟಿ ಬರೋಬ್ಬರಿ 75 ಲಕ್ಷ ರೂಪಾಯಿ ಖರ್ಚು ಮಾಡಿದೆ. ಮುಕ್ಕಾಲು ಕೋಟಿ ಮುಗಿದ್ರೂ, ತಾರ್ಕಿಕ ಅಂತ ಕಂಡಿಲ್ಲ. ಆರೋಪಿ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿರುವುದರಿಂದ SIT ಗರಂ ಆಗಿದೆ. 

dharmasthala case(5)

ಹೌದು, ಬುರುಡೆ ರಹಸ್ಯ ಬೇಧಿಸೋಕೆ ಈವರೆಗೂ ₹75 ಲಕ್ಷ ಖರ್ಚಾಗಿದೆ. ಎಸ್​ಐಟಿ ನಡೆಸಿದ್ದ ಉತ್ಖನನದ ಖರ್ಚೆ ಬರೋಬ್ಬರಿ ₹10 ಲಕ್ಷ ಖರ್ಚಾಗಿದೆ. ಪ್ರತಿ ದಿನ ಕನಿಷ್ಟ 30 ಸಾವಿರ ರೂಪಾಯಿಯನ್ನ ವ್ಯಯಿಸಲಾಗಿದೆ. ಇದಲ್ಲದೆ ಬೇರೆ ಯಂತ್ರಗಳ ಬಳಕೆಗೆಂದೇ 55 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ. ಒಟ್ಟಾರೆ 15 ದಿನಗಳಿಗೂ ಹೆಚ್ಚು ಕಾಲ ಉತ್ಖನನ ನಡೆಸಲಾಗಿತ್ತು. 
ಉತ್ಖನನದ ಸಲಕರಣೆ, ಕಾರ್ಮಿಕರಿಗೆ ದಿನಕ್ಕೆ ₹30 ಸಾವಿರ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case
Advertisment