/newsfirstlive-kannada/media/media_files/2026/03/07/export-to-middle-east-stopped-2026-03-07-18-47-25.jpg)
ಅಮೆರಿಕ-ಇಸ್ರೇಲ್ ಕೋಪ ಇರಾನ್ ಮೇಲೆ ಸಂಘರ್ಷವಾಗಿ ಬದಲಾಗಿ ಎಂಟು ದಿನ ಕಳೆದಿದೆ. ಇದರ ಎಫೆಕ್ಟ್​​ ಭಾರತದ ವ್ಯಾಪಾರ ವಹಿವಾಟಿನ ಮೇಲೂ ಗೋಚರಿಸುತ್ತಿದೆ. ಅದರಲ್ಲೂ ರಾಜ್ಯದ ಕರಾವಳಿಯ ಉದ್ಯಮಗಳ ಮೇಲೆ ಯುದ್ದದ ದುಷ್ಪರಿಣಾಮ ಬೆಳಕಿಗೆ ಬರುತ್ತಿದೆ. ಕರಾವಳಿಯ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದು ರಫ್ತು ವಹಿವಾಟು ಬಂದ್ ಆಗಿದ್ದು, ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಇರಾನ್ - ಇಸ್ರೇಲ್ ಮಧ್ಯೆ ವಾರ್.. ಭಾರತದ ಮೇಲೆ ಎಫೆಕ್ಟ್!
ಕರಾವಳಿಯ ಉದ್ಯಮಗಳ ಮೇಲೆ ಯುದ್ದದ ಭಾರೀ ಪರಿಣಾಮ!
ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಉಂಟಾಗಿದೆ. ಇದು ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಈ ಯುದ್ಧದ ದುಷ್ಪರಿಣಾಮ ರಾಜ್ಯದ ಕರಾವಳಿಯ ರಫ್ತು ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಮಧ್ಯಪ್ರಾಚ್ಯ ದೇಶಗಳಿಗೆ ನವ ಮಂಗಳೂರು ಬಂದರಿನಿಂದ ಕಾಫಿ, ಮೀನು ಉತ್ಪನ್ನ, ಗೋಡಂಬಿ ಸೇರಿದಂತೆ ಇನ್ನಿತರ ವಸ್ತುಗಳು ಕಂಟೈನರ್​ಗಳ ಮೂಲಕ ಸಮುದ್ರ ಮಾರ್ಗವಾಗಿ ರಫ್ತಾಗುತ್ತವೆ. ಕೊಲ್ಲಿ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಯುತ್ತಿರೋ ಹಿನ್ನೆಲೆಯಲ್ಲಿ ಎಲ್ಲಾ ವ್ಯಾಪಾರ ವಹಿವಾಟು ರಫ್ತು ಚಟುವಟಿಕೆಗಳು ಬಂದ್ ಆಗಿದೆ. ಇದರಿಂದಾಗಿ ಮಂಗಳೂರಿನ ರಫ್ತುದಾರಿಗೆ ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ಸ್ ವೆಚ್ಚ ಹೆಚ್ಚಾಗುವ ಭೀತಿ ಎದುರಿಸುತಿದ್ದಾರೆ.
ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮಧ್ಯಪ್ರಾಚ್ಯಕ್ಕೆ ರವಾನೆಯಾಗಬೇಕಿದ್ದ ಒಟ್ಟು 54 ಕಂಟೈನರ್‌ಗಳು ಬಾಕಿ ಉಳಿದಿವೆ. ಇದರಲ್ಲಿ 21 ಕಾಫಿ ಕಂಟೈನರ್‌ಗಳು ಮತ್ತು 5 ಮೀನಿನ ಉತ್ಪನ್ನಗಳು, ಫ್ಯಾಬ್ರಿಕೇಷನ್ ಮೆಟೀರಿಯಲ್ಸ್, ಯಂತ್ರೋಪಕರಣಗಳ ಕಂಟೈನರ್‌ಗಳು ಸೇರಿವೆ. ಹೊರ್ಮುಜ್ ಜಲಸಂಧಿಯ ಮೂಲಕ ಸಂಚರಿಸಬೇಕಾದ ಈ ಹಡಗುಗಳು ಸಂಘರ್ಷದ ಕಾರಣದಿಂದ ಸ್ಥಗಿತಗೊಂಡಿವೆ. ಇದು ರಫ್ತುದಾರರಿಗೆ ಭಾರಿ ನಷ್ಟ ಅನುಭವಿಸುವಂತೆ ಮಾಡಿದೆ.
ಮದ್ಯ ಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ದ ಮುಂದುವರೆದರೆ ವೆಚ್ಚ ಹೆಚ್ಚಾಗುವ ಭೀತಿಯನ್ನ ಕರಾವಳಿ ಉದ್ಯಮಿಗಳು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರೋ ಕರಾವಳಿಯ ರಫ್ತುದಾರರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರುವಂತೆ ಉದ್ಯಮಿಗಳು ಒತ್ತಾಯಿಸಿದ್ದಾರೆ.
ಕಿರಣ್​ ನ್ಯೂಸ್ ಫಸ್ಟ್ ಮಂಗಳೂರು
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us