ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯನ್ನು ಎಸ್ಐಟಿ (SIT) ನಡೆಸ್ತಿದೆ. ಇದೀಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬುರುಡೆ ತಂದು ಕೊಟ್ಟಿದ್ದು ನಾನಲ್ಲ, ಮಟ್ಟಣ್ಣನವರ್ ಎಂದು ಪ್ರಕರಣದ ಎರಡನೇ ದೂರುದಾರ ಟಿ.ಜಯಂತ್ ಎಸ್ಐಟಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.
ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ನಡೆದ ವಿಚಾರಣೆ ವೇಳೆ, ಬುರುಡೆ ತಂದ ರಹಸ್ಯ ಹೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಗಿರೀಶ್ ಮಟ್ಟಣ್ಣವರ್, ನಾನು ಬುರುಡೆ ತಂದಿಲ್ಲ, ಬುರುಡೆ ತಂದಿದ್ದು ಯಾರು ಅಂತಾ ಗೊತ್ತಿಲ್ಲ ಎಂದಿದ್ದರು. ಇದೀಗ ಜಯಂತ್ ಅವರ ಹೇಳಿಕೆ, ಮಟ್ಟಣ್ಣವರ್ಗೆ ಮುಳುವಾಗುವ ಸಾಧ್ಯತೆ ಇದೆ. ಜೊತೆಗೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕರೂ ಅಚ್ಚರಿಯಿಲ್ಲ. ಸಂಪೂರ್ಣ ಮಾಹಿತಿಗಾಗಿ ಮೇಲಿನ ವಿಡಿಯೋ ಕ್ಲಿಕ್ ಮಾಡಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ