Advertisment

ಮಂಗಳೂರು- ಉಡುಪಿ ವಲಯ ಈಗ ಸಿಲಿಕಾನ್ ಬೀಚ್ ಆಗಿ ಪರಿವರ್ತನೆ : 40 ಐಟಿ ಕಂಪನಿಗಳಿಂದ ಉದ್ಯೋಗ ನೀಡಿಕೆ

ಬೆಂಗಳೂರು ಐ.ಟಿ. ಸಿಟಿಯಾದಂತೆ ಮಂಗಳೂರು- ಉಡುಪಿ ವಲಯ ಈಗ ಸಿಲಿಕಾನ್ ಬೀಚ್ ಆಗಿ ಪರಿವರ್ತನೆ ಆಗಿದೆ. ಸುಮಾರು 40 ಐ.ಟಿ. ಕಂಪನಿಗಳು ಕರಾವಳಿ ವಲಯದಲ್ಲಿ ನೆಲೆಯೂರಿವೆ. ಸದ್ಯ ಸಾವಿರಾರು ಜನರಿಗೆ ಉದ್ಯೋಗ ನೀಡಿವೆ. 2034 ರ ವೇಳೆಗೆ 2 ಲಕ್ಷ ಜನರಿಗೆ ಐ.ಟಿ. ವಲಯದಲ್ಲಿ ಉದ್ಯೋಗ ನೀಡುವ ಪ್ಲ್ಯಾನ್ ಇದೆ.

author-image
Chandramohan
IT companies in mangalore

ಮಂಗಳೂರಿನಲ್ಲಿರುವ ಟಾಪ್ ಐ.ಟಿ ಕಂಪನಿಗಳು

Advertisment
  • ಉಡುಪಿ, ಮಂಗಳೂರು ಭಾಗದಲ್ಲಿ ಸದ್ಯ 40 ಐ.ಟಿ. ಕಂಪನಿಗಳ ಕಾರ್ಯಾಚರಣೆ
  • 2034ರ ವೇಳೆಗೆ 2 ಲಕ್ಷ ಜನರಿಗೆ ಉದ್ಯೋಗ ನೀಡಿಕೆ ಗುರಿ


ಮಂಗಳೂರು ಮತ್ತು ಉಡುಪಿ ಭಾಗದ ಸ್ಟೂಡೆಂಟ್ಸ್‌ಗೆ ಒಂದು ಗುಡ್​ನ್ಯೂಸ್​. ಈ ಹಿಂದೆ ಡಿಗ್ರಿ ಮುಗಿಸಿದ ಮೇಲೆ ಜಾಬ್‌ಗಾಗಿ ಬೆಂಗಳೂರಿನಂತಹ ಮೆಟ್ರೋ ಸಿಟಿಗಳಿಗೆ ಮೈಗ್ರೇಟ್ ಆಗೋದು ಅನಿವಾರ್ಯವಾಗಿತ್ತು. ಆದ್ರೆ ಈಗ ಪರಿಸ್ಥಿತಿ ಫುಲ್ ಚೇಂಜ್ ಆಗಿದೆ. ಮಂಗಳೂರು-ಉಡುಪಿ ರೀಜನ್ ಈಗ ಭಾರತದ ಸಿಲಿಕಾನ್ ಬೀಚ್ ಆಗಿ ಮಾರ್ಪಡ್ತಿದೆ. ನಿಮ್ಮ ಮನೆ ಹತ್ತಿರವೇ ವರ್ಲ್ಡ್ ಕ್ಲಾಸ್ ಐಟಿ ಕಂಪನಿಗಳಲ್ಲಿ ಜಾಬ್ ಸಿಗೋ ಕಾಲ ಬಂದಿದೆ.
ಕಳೆದ ಎರಡು ವರ್ಷಗಳಲ್ಲಿ ಮಂಗಳೂರು-ಉಡುಪಿ ವಲಯದ ಐಟಿ ಆದಾಯ 3,200 ಕೋಟಿಯಿಂದ 5,000 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ 3,000 ಕೋಟಿ ರೂಪಾಯಿಗಳು ಐಟಿ ಎಂಪ್ಲಾಯಿಸ್‌ಗೆ ಸ್ಯಾಲರಿ ರೂಪದಲ್ಲೇ ಬರ್ತಿದೆ. ಅಷ್ಟೇ ಅಲ್ಲ, 2034ರ ವೇಳೆಗೆ ಈ ವಲಯದಲ್ಲಿ ಐಟಿ ಪ್ರೊಫೆಷನಲ್ಸ್ ಸಂಖ್ಯೆಯನ್ನ 50,000 ದಿಂದ 2 ಲಕ್ಷಕ್ಕೆ ಹೆಚ್ಚಿಸೋ ದೊಡ್ಡ ಪ್ಲ್ಯಾನ್ ಇದೆ. ಕಳೆದ 3 ವರ್ಷಗಳಲ್ಲಿ ಇಲ್ಲಿನ ಮೂರು ಕಂಪನಿಗಳು ಜಾಗತಿಕ ಮಟ್ಟದಲ್ಲಿ 100 ಮಿಲಿಯನ್ ಡಾಲರ್ ಡೀಲ್ ಮಾಡಿರೋದು ಇಲ್ಲಿನ ಟ್ಯಾಲೆಂಟ್ ಮತ್ತು ಕೆಪಾಸಿಟಿಗೆ ಸಾಕ್ಷಿಯಾಗಿದೆ.
ಬೆಂಗಳೂರಿನ ಟ್ರಾಫಿಕ್ ಜಾಮ್ ಮತ್ತು ದುಬಾರಿ ಕಾಸ್ಟ್ ಆಫ್ ಲಿವಿಂಗ್ ಇಂದ ಬೇಸತ್ತಿರೋ ಕಂಪನಿಗಳು ಈಗ ಕರಾವಳಿಯತ್ತ ಮುಖ ಮಾಡ್ತಿವೆ. ಕರ್ನಾಟಕ ಸರ್ಕಾರದ "ಬಿಯಾಂಡ್ ಬೆಂಗಳೂರು" ಸ್ಕೀಮ್ ಅಡಿಯಲ್ಲಿ ಮಂಗಳೂರು ವೇಗವಾಗಿ ಬೆಳೆಯುತ್ತಿರೋ ಟೆಕ್ ಹಬ್ ಆಗ್ತಿದೆ. ಐಟಿ ಪಾರ್ಕ್ ನಿರ್ಮಾಣಕ್ಕೆ ಸಬ್ಸಿಡಿ ಮತ್ತು ಬಾಡಿಗೆ ರಿಯಾಯಿತಿ ಸಿಗ್ತಿರೋದ್ರಿಂದ ಸುಮಾರು 40ಕ್ಕೂ ಹೆಚ್ಚು ಹೊಸ ಐಟಿ ಕಂಪನಿಗಳು ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ತಮ್ಮ ಆಪರೇಷನ್ಸ್ ಸ್ಟಾರ್ಟ್ ಮಾಡಿವೆ.
ಕೋವಿಡ್ ಸಮಯದಲ್ಲಿ ಊರಿಗೆ ವಾಪಸ್ ಬಂದಿದ್ದ ಐಟಿ ಪ್ರೊಫೆಷನಲ್ಸ್ ಈಗ ಇಲ್ಲಿನ ಕ್ವಾಲಿಟಿ ಆಫ್ ಲೈಫ್ ನೋಡಿ ಇಲ್ಲೇ ಸೆಟಲ್ ಆಗ್ತಿದ್ದಾರೆ. ಇನ್ಫೋಸಿಸ್ ಈಗಾಗ್ಲೇ ಮಂಗಳೂರಿನಲ್ಲಿ 5,000 ಎಂಪ್ಲಾಯಿಸ್ ಹೊಂದಿದ್ದು, 1,000ಕ್ಕೂ ಹೆಚ್ಚು ಜನರಿಗೆ ಜಾಬ್ ನೀಡಿರೋ ಎಂಟು ದೊಡ್ಡ ಐಟಿ ಕಂಪನಿಗಳು ಇಲ್ಲಿವೆ. ಬೆಂಗಳೂರಿಗೆ ಕಂಪನಿಗಳು ವಾಪಸ್ ಕರೀತಿದ್ರೂ, ಮನೆಯಲ್ಲೇ ಇದ್ದು ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡೋಕೆ ಸಿಗ್ತಿರೋ ಈ ಆಪರ್ಚುನಿಟಿಯನ್ನ ಯಾರು ಮಿಸ್ ಮಾಡ್ಕೊಳ್ತಿಲ್ಲ. ಇನ್ನು ಕೆಲವರು ಬೆಂಗಳೂರಿನ ಜಾಬ್ ಬಿಟ್ಟು ಮಂಗಳೂರಿನಲ್ಲೇ ಜಾಬ್ ಹುಡುಕ್ತಿದ್ದಾರೆ.
ಮಂಗಳೂರು-ಉಡುಪಿ ಭಾಗದಲ್ಲಿ ಪ್ರತಿ ವರ್ಷ ಸುಮಾರು 60,000 ಸ್ಟೂಡೆಂಟ್ಸ್ ಪದವಿ ಮುಗಿಸಿ ಹೊರಬರ್ತಿದ್ದಾರೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಎಜುಕೇಶನ್ ಹಬ್ ಆಗಿರೋ ಈ ಊರು, 2035ರ ವೇಳೆಗೆ ರಾಜ್ಯದ ಎರಡನೇ ಅತಿದೊಡ್ಡ ಐಟಿ ಹಬ್ ಆಗೋದ್ರಲ್ಲಿ ಸಂಶಯವಿಲ್ಲ. ರಸ್ತೆ ಮತ್ತು ರೈಲು ಸಂಪರ್ಕ ಚೆನ್ನಾಗಿರೋದ್ರಿಂದ ನೆರೆಯ ಕೇರಳದ ಸ್ಟೂಡೆಂಟ್ಸ್‌ಗೂ ಇದು ಫೇವರಿಟ್ ಚಾಯ್ಸ್ ಆಗ್ತಿದೆ. ಸೋ ಸ್ಟೂಡೆಂಟ್ಸ್, ಸಿಲಿಕಾನ್ ಸಿಟಿಗೆ ಹೋಗೋ ಬದಲು ಸಿಲಿಕಾನ್ ಬೀಚ್‌ನಲ್ಲಿ ನಿಮ್ಮ ಕೆರಿಯರ್ ಬಿಲ್ಡ್ ಮಾಡೋಕೆ ರೆಡಿಯಾಗಿ! 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Udupi and mangalore became silicon beach
Advertisment
Advertisment
Advertisment