/newsfirstlive-kannada/media/media_files/2025/12/07/mangaluru-hanuma-kola-11-2025-12-07-13-00-02.jpg)
/newsfirstlive-kannada/media/media_files/2025/12/07/mangaluru-hanuma-kola-7-2025-12-07-12-49-32.jpg)
ಆಂಜನೇಯನಿಗೂ ಇಲ್ಲಿ ಕೋಲ
ರಾಮನ ಧೂತ ಹನುಮಂತನನ್ನು ರಕ್ಷಕನಾಗಿ ದೇವತಾ ರೂಪವಾಗಿಯೇ ಆರಾಧಿಸಿಕೊಂಡು ಬರಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಟುಂಬವೊಂದು ಭಜರಂಗಬಲಿಯನ್ನ ದೈವದ ರೂಪದಲ್ಲಿ ಆರಾಧಿಸಿಕೊಂಡು ಬರುತ್ತಿದೆ. ತುಳುನಾಡ ದೈವಾರಾಧನೆಯಲ್ಲಿ ಇತರೆ ದೈವಗಳಿಗೆ ಯಾವ ರೀತಿ ಕೋಲ ನೇಮ ಸೇವೆ ನೀಡುತ್ತಾರೋ ಅದೇ ರೀತಿಯಲ್ಲಿ ಆಂಜನೇಯನಿಗೂ ಇಲ್ಲಿ ಕೋಲ ನಡೆಸಲಾಗುತ್ತಿದೆ.
/newsfirstlive-kannada/media/media_files/2025/12/07/mangaluru-hanuma-kola-5-2025-12-07-12-50-06.jpg)
ದೈವಾರಾಧನೆಯೇ ಪ್ರಧಾನ
ತುಳುನಾಡಿನಲ್ಲಿ ದೈವಾರಾಧನೆಯೇ ಪ್ರಧಾನ. ತುಳುವರಿಗೆ ದೈವಾರಾಧನೆಯಲ್ಲೆ ಹೆಚ್ಚಿನ ನಿಷ್ಠೆ ಭಕ್ತಿ, ಭಯ. ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಕರಾವಳಿ ಭಾಗದ ಜನರು ಕರಾವಳಿ ಭಾಗದ ಪ್ರತಿಯೊಂದು ಕುಟುಂಬವೂ ಒಂದೊಂದು ದೈವಗಳನ್ನು ತಮ್ಮ ಕುಲದೇವರಾಗಿ ಆರಾಧಿಸಿಕೊಂಡು ಬರುತ್ತಿದೆ.
/newsfirstlive-kannada/media/media_files/2025/12/07/mangaluru-hanuma-kola-3-2025-12-07-12-50-45.jpg)
ಹನುಮ ಕೋಲ
ಸಾವಿರಕ್ಕೂ ಹಲವು ದೈವಗಳ ಆರಾಧನೆಗಳು ಇಲ್ಲಿ ಆಚರಣೆಯಲ್ಲಿದೆ. ಇದೀಗ ಕರಾವಳಿಯಲ್ಲಿ ಹನುಮ ಕೋಲ ಕೂಡ ನಡೆದಿದೆ. ಶ್ರೀರಾಮನ ಬಂಟ ಹನುಮಂತನನ್ನ ಪೂಜಿಸಿಕೊಂಡು ಬರುತ್ತಿರುವವರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಳಿಂತಾಜೆ ಮನೆತನವು ಅಂಜನೇಯನನ್ನು ದೇವ ಸಂಭೂತನನ್ನಾಗಿ ಆರಾಧಿಸುತ್ತಿದೆ.
/newsfirstlive-kannada/media/media_files/2025/12/07/mangaluru-hanuma-kola-1-2025-12-07-12-51-21.jpg)
ಯಾರೊಂದಿಗೂ ಮಾತನಾಡುವಂತಿಲ್ಲ
ಇತರ ಎಲ್ಲಾ ದೈವ ಕೋಲಗಳಿಂದ ಇದು ಸಂಪೂರ್ಣ ಭಿನ್ನವಾಗಿದ್ದು, ಹನುಮಂತನ ವೇಷಧಾರಿ ಇಲ್ಲಿ ಸಂಪೂರ್ಣ ಮೌನಿಯಾಗುತ್ತಾನೆ. ನೇಮದ ಹಿಂದಿನ ದಿನವೇ ತನ್ನ ಮೌನ ವೃತವನ್ನು ಆಚರಿಸುವ ಈತ, ಕೋಲ ಮುಗಿಯುವವರೆಗೂ ಯಾರೊಂದಿಗೂ ಮಾತನಾಡುವಂತಿಲ್ಲ.
/newsfirstlive-kannada/media/media_files/2025/12/07/mangaluru-hanuma-kola-9-2025-12-07-12-52-09.jpg)
ಎಲ್ಲರೂ ಮೌನಿಗಳು
ಇತರೆ ದೈವ ಕೊಲಗಳಲ್ಲಿರುವಂತೆ ಇಲ್ಲಿ ವಾದ್ಯ ಘೋಷಗಳಿಲ್ಲ, ಏನಿದ್ದರೂ ಕೇವಲ ಜಾಗಟೆ, ತಾಳ ಹಾಗೂ ಡೋಲು ಮಾತ್ರ, ವಾನರಂತೆ ಜಿಗಿಯುತ್ತಾ ಸಾಗುವ ಹನುಮಂತ ವೇಷಧಾರಿಯ ಮುಂದೆ ಯಾರೂ ಬರುವಂತಿಲ್ಲ. ಮಾತನಾಡುವಂತಿಲ್ಲ. ಮಕ್ಕಳೂ ಸೇರಿದಂತೆ ಯಾರೂ ವೇಷಧಾರಿಯತ್ತ ಕೈ ತೋರಿಸುವಂತಿಲ್ಲ. ಅರ್ಧ ಗಂಟೆಗಳ ಕಾಲ ಇಲ್ಲಿ ಎಲ್ಲರೂ ಮೌನಿಗಳು.
/newsfirstlive-kannada/media/media_files/2025/12/07/mangaluru-hanuma-kola-6-2025-12-07-12-52-36.jpg)
ಕೃಷಿ ಚಟುವಟಿಕೆಗಳಿಗೆ ಹಾಗೂ ಹನುಮಂತನಿಗೆ ನೇರ ಸಂಭಂದವಿದೆ. ಈ ದೈವದ ಕೋಲದಲ್ಲಿ ಹನುಮಂತ ವೇಷಧಾರಿ ಉಳುಮೆ ಮಾಡಿದ ಗದ್ದೆಯ ಬದಿಯಲ್ಲಿರುವ ಮರವನ್ನು ಹತ್ತಿ ಅದರಿಂದ ಎಲೆಗಳನ್ನು ತೆಗೆದು ಗದ್ದೆಯ ಮೇಲೆ ಹಾಕುತ್ತಾನೆ.
/newsfirstlive-kannada/media/media_files/2025/12/07/mangaluru-hanuma-kola-10-2025-12-07-12-53-14.jpg)
ಎಷ್ಟು ಎಲೆಗಳು ಗದ್ದೆಯ ಮೇಲೆ ಬೀಳುತ್ತದೋ ಅದಕ್ಕಿಂತ ಹತ್ತು ಪಾಲು ಇಳುವರಿ ಆ ಗದ್ದೆಯಲ್ಲಿ ಬರುತ್ತದೆ ಎನ್ನುವುದು ಇವರ ನಂಬಿಕೆ.
/newsfirstlive-kannada/media/media_files/2025/12/07/mangaluru-hanuma-kola-2025-12-07-12-53-33.jpg)
ಕೃಷಿಗೆ ಮಂಗಗಳ ಕಾಟ ಹೆಚ್ಚಾದಾಗ ಕರಾವಳಿ ಭಾಗದ ಜನ ಅಂಜನೇಯನ ಮೊರೆ ಹೋಗೋದು ಸಾಮಾನ್ಯ. ಈ ಕಾರಣಕ್ಕಾಗಿಯೇ ಇಲ್ಲಿ ಅಂಜನೇಯನನ್ನೇ ದೈವದ ರೂಪದಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದ್ದು, ಕೃಷಿಯ ಜೊತೆಗೆ ದೈವದ ಪ್ರಾಧಾನತೆಯೂ ಈ ಆಚರಣೆಯ ಹಿಂದಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us