/newsfirstlive-kannada/media/media_files/2025/08/28/soujanya-mother-and-chennayya-2025-08-28-18-03-22.jpg)
ಮಂಗಳೂರು: ಬುರುಡೆ ಚೆನ್ನಯ್ಯನಿಗೆ ಮತ್ತೊಂದು ಸವಾಲು ಎದುರಾಗಿದೆ. ಎಸ್ಐಟಿ ಅಧಿಕಾರಿಗಳಿಗೆ ಸೌಜನ್ಯ ತಾಯಿ ಕುಸುಮಾವತಿ ದೂರು ನೀಡಿದ್ದಾರೆ. ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿ ಇಂದು ಮಧ್ಯಾಹ್ನ ದೂರು ಕೊಟ್ಟು ವಾಪಸ್ ಆಗಿದ್ದಾರೆ.
ಸೌಜನ್ಯ ನಿಗೂಢ ಸಾ*ವಿನ ಬಗ್ಗೆ ಎಸ್ಪಿ ಸೈಮನ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ದೂರಿನ ಬಳಿಕ ಅಧಿಕಾರಿಗಳು ಹಿಂಬರಹ ಕೊಟ್ಟಿದ್ದಾರೆ. ತಾವು ನೀಡಿದ ಅರ್ಜಿಯನ್ನು ಪರಿಶೀಲಿಸುತ್ತೇವೆ. ದೂರಿನ ಅಂಶಗಳ ಬಗ್ಗೆ ಎಸ್ಐಟಿ ತನಿಖೆಯ ವೇಳೆ ಪರಿಗಣಿಸ್ತೇವೆ ಎಂದು ಪೊಲೀಸ್ ಅಧಿಕಾರಿಗಳು ದೂರುದಾರೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರೇಕ್ ಫೇಲ್.. ಒಂದು ಮಗು ಸೇರಿ ಐವರ ಜೀವ ತೆಗೆದ KSRTC
ಚೆನ್ನಯ್ಯನ ವಿರುದ್ಧ ತನಿಖೆಗೆ ಆಗ್ರಹ
ದೂರಿನಲ್ಲಿ ಚೆನ್ನಯ್ಯನ ವಿರುದ್ಧ ತನಿಖೆಗೆ ಕುಸುಮಾವತಿ ಆಗ್ರಹಿಸಿದ್ದಾರೆ. 2014ರಲ್ಲಿ ಚೆನ್ನಯ್ಯ ಧರ್ಮಸ್ಥಳ ತೊರೆಯಲು ಸೌಜನ್ಯ ಕೊಲೆಯ ನಂತರದ ಘಟನೆಗಳೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಿತ್ತು. ಆ ಅಧಿಕಾರಿಗಳು ಪಾಂಗಾಳಕ್ಕೆ ಬಂದು ಹೇಳಿಕೆ ಪಡೆದಿದ್ದರು.
ಆಗಸ್ಟ್ 13ರಂದು ಉಜಿರೆಗೆ ಬಂದು ಹೇಳಿಕೆ ನೀಡುವಂತೆ ತಿಳಿಸಿದ್ದರು. ಅದೇ ದಿನ ಚೆನ್ನಯ್ಯನ ಅಕ್ಕ ರತ್ನ ಆಯೋಗಕ್ಕೆ ಹೇಳಿಕೆ ನೀಡ್ತಿರೋದನ್ನು ನಾನು ಕೇಳಿಸಿಕೊಂಡೆ. ರವಿ ಪೂಜಾರಿ ಎಂಬಾತ ಸೌಜನ್ಯ ಕೊ*ಲೆ ಅ*ಚಾರಕ್ಕೆ ಕಾರಣವಾದವರ ಹೆಸರನ್ನು ಚೆನ್ನಯ್ಯಗೆ ಹೇಳಿದ್ದ. ಅಪರಾಧಿಗಳು ರವಿ ಪೂಜಾರಿಗೆ ಹಣ ಕೊಟ್ಟು, ನಂತರ ಕಚೇರಿಯಲ್ಲಿ ಕೊಂ*ದಿದ್ದರು ಎಂದು ಚೆನ್ನನ ಅಕ್ಕ ರತ್ನ ವಿಚಾರಣೆಯಲ್ಲಿ ಹೇಳಿದ್ದಳು. ಸೌಜನ್ಯ ಶ*ವ ಸಿಕ್ಕ ಸ್ಥಳದಲ್ಲಿ ಆತ ಹಲವಾರು ಶವ ಹೂತು ಹಾಕಿದ್ದ. ಅಲ್ಲಿ ಸೌಜನ್ಯ ಶ*ವ ಹೂತು ಹಾಕಲು ಸಂಚು ನಡೆದಿರುವ ಸಾಧ್ಯತೆ ಇದೆ. ಈ ಎಲ್ಲ ವಿಷಯದಲ್ಲಿ ಚೆನ್ನಯ್ಯನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಬೇಕು ಎಂದು ಕುಸುಮಾವತಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಮಟ್ಟಣ್ಣನವರ್ ವಿರುದ್ಧ ಮಾನವ ಹಕ್ಕುಗಳ ಆಯೋಗದಲ್ಲಿ ಕೇಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ