ಸುಳ್ಳು ದೂರು ನೀಡಿದ್ದ ಸುಜಾತಾ ಭಟ್ ಇಂದು SIT ವಶಕ್ಕೆ ಸಾಧ್ಯತೆ!

ಅನನ್ಯ ಭಟ್ ಮಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್​ಐಟಿ ಅಧಿಕಾರಿಗಳು ಸುಜಾತ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ದಾಖಲೆ ಪತ್ರ ಒದಗಿಸುವಲ್ಲಿ ವಿಫಲರಾಗಿದ್ದಾರೆ.

author-image
Veenashree Gangani
sjutha bhat
Advertisment

ಮಂಗಳೂರು: ಅನನ್ಯ ಭಟ್ ಮಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್​ಐಟಿ ಅಧಿಕಾರಿಗಳು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. 

ಇದನ್ನೂ ಓದಿ: ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್​ ನಿರೂಪಕಿ ಅನುಶ್ರಿ-ರೋಷನ್; PHOTOS

ಹೌದು, ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ದಾಖಲೆ ಪತ್ರ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಸುಳ್ಳು ದೂರು ನೀಡಿದ್ದ ಕುರಿತು ಸುಜಾತಾ ಭಟ್ ಮೇಲೆ ಆರೋಪ ಕೇಳಿ ಬಂದಿದೆ. ಹೀಗಾಗಿ ಇಂದು ಎಸ್​ಐಟಿ ಅಧಿಕಾರಿಗಳು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

sujatha

ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎಂದು ಸುಜಾತಾ ಭಟ್ ದೂರು ನೀಡಿದ್ದರು. ಇದೇ ಕೇಸ್​ಗೆ ಸಂಬಂಧಿಸಿದಂತೆ ಸುಜಾತಾ ಭಟ್ ಅವರು​ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೋಟಿಸ್ ನೀಡಿತ್ತು.

ಹೀಗಾಗಿ ಸುಜಾತಾ ಭಟ್ ಮಂಗಳೂರಿನ ಬೆಳ್ತಂಗಡಿಯ SIT ಕಚೇರಿಗೆ ಆಗಮಿಸಿದ್ದರು. ಎರಡು ದಿನಗಳ ತನಿಖೆಯ ವೇಳೆ ಹಲವು ಸಂಗತಿಗಳು ಬಹಿರಂಗವಾಗಿದ್ದು, ಇಂದು ಎಸ್​ಐಟಿ ಅಂತಿಮ ಹಂತದ ವಿಚಾರಣೆ ನಡೆಸಲಿದೆ. ತನಿಖಾಧಿಕಾರಿ ಎಸ್​ಐ ಗುಣಪಾಲ್ ಮತ್ತು ದಯಾಮಾ​ರಿಂದ ಸುಜಾತಾ ಭಟ್​​ ವಿಚಾರಣೆ ನಡೆಸಲಾಗುತ್ತಿದೆ. 

SUJATHA_BHAT

ಅನನ್ಯ ಭಟ್​​ ಮಿಸ್ಸಿಂಗ್​ ಕೇಸ್​ ಸುಳ್ಳು ಅನ್ನೋದು ಗೊತ್ತಾಗ್ತಿದ್ದಂತೆ ಸುಜಾತಾ ಭಟ್​​ ಏಕಾಂಗಿಯಾಗಿದ್ದಾರೆ.ಆರಂಭದಲ್ಲಿ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯ ಅಸ್ತಿಯನ್ನ ಹುಡುಕಿಕೊಡಿ ಅಂತ ಸುಜಾತ ಭಟ್​ ಕಾರಿನಲ್ಲಿ ಬಂದು ದೂರು ಕೊಟ್ಟಿದ್ದರು. ನಂತರ ಸುಳ್ಳು ಫೋಟೋ ತೋರಿಸಿ ಸುಜಾತ ಭಟ್​​ಸಿಕ್ಕಿಹಾಕಿಕೊಂಡಿದ್ದರು. ಸದ್ಯ ವಿಚಾರಣೆ ಅಂತ್ಯವಾಗುತ್ತಿದ್ದಂತೆ ಎಸ್​ಐಟಿ ಅಧಿಕಾರಿಗಳು ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sujata bhat
Advertisment