/newsfirstlive-kannada/media/media_files/2025/08/15/dharmasthala-case5-2025-08-15-18-23-33.jpg)
ಮಂಗಳೂರು: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ 7 ತಲೆ ಬುರುಡೆ ಅಸ್ಥಿಪಂಜರದ ಕುರುಹು ಪತ್ತೆಯಾದ ಹಿನ್ನಲೆಯಲ್ಲಿ, ಯುಡಿಆರ್ ಪ್ರಕರಣ ದಾಖಲಿಸಲು ಎಸ್ಐಟಿ ತಯಾರಿ ನಡೆಸಿದೆ.
ಧರ್ಮಸ್ಥಳ ಪ್ರಕರಣ ದಿನಕ್ಕೊಂದು ಮಜಲು ಪಡೆದುಕೊಳ್ಳುತ್ತಿದೆ. ಈಗ ಧರ್ಮಸ್ಥಳದಿಂದ ಬಂಗ್ಲೆಗುಡ್ಡೆಯ ಕಡೆ ಎಸ್​ಐಟಿ ಅಧಿಕಾರಿಗಳು ಹೋಗಿದ್ದು ಅಲ್ಲಿ ಕೂಡ ಏಳು ಬುರುಡೆಗಳು ಹಾಗೂ ಅಸ್ಥಿಪಂಜರಗಳು ಪತ್ತೆ ಆಗಿವೆ. ಈ ಸಂಬಂಧ ಸ್ಥಳೀಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವುಗಳ ಕುರಿತು ಪ್ರಕರಣವನ್ನು ಎಸ್​ಐಟಿ ದಾಖಲಿಸಲಿದೆ.
ಸದ್ಯ ಪತ್ತೆ ಆಗಿರುವ ಅಸ್ಥಿಪಂಜರಗಳು ಯಾರದ್ದು, ಇಲ್ಲಿಗೆ ಬಂದು ಯಾಕೆ ಜೀವ ಕಳೆದುಕೊಂಡರು ಎಂಬುದನ್ನು ಎಸ್​ಐಟಿ ಅಧಿಕಾರಿಗಳು ಕಂಡುಕೊಳ್ಳಲು ತನಿಖೆ ನಡೆಸಲಿದ್ದಾರೆ. ಈಗಾಗಲೆ ಒಂದು ಅಸ್ಥಿಪಂಜರದ ಕುರುಹು ಸಿಕ್ಕಿದ್ದು ಅದು, ಕೊಡಗು ಮೂಲದ ಯು.ಬಿ ಅಯ್ಯಪ್ಪರದ್ದು ಎಂದು ಬಹುತೇಕ ಖಚಿತವಾಗಿದೆ. ಇನ್ನೂಳಿದ ಆರು ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಎಸ್​ಐಟಿ ಜಾಡು ಹಿಡಿದಿದ್ದು, ಪ್ರಯೋಗಾಲಯಕ್ಕೆ ಡಿಎನ್​ಎ ಟೆಸ್ಟ್​ಗೆ ಕಳುಹಿಸಲು ತಯಾರಿ ಮಾಡಿಕೊಂಡಿದೆ.