/newsfirstlive-kannada/media/media_files/2025/12/08/ratwheeler-dog-owner-arrested-2025-12-08-14-20-20.jpg)
ರಾಟ್ ವೀಲ್ಹರ್ ನಾಯಿ ಮಾಲೀಕ ಶೈಲೇಶ್ ಕುಮಾರ್ ಬಂಧನ
ದಾವಣಗೆರೆ ಜಿಲ್ಲೆಯ ಹೊನ್ನೂರು ಗೊಲ್ಲರಹಟ್ಟಿ ಬಳಿ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್‌ಗೆ ಮಹಿಳೆ ಬಲಿಯಾದ ಪ್ರಕರಣದಲ್ಲಿ ನಾಯಿಗಳ ಬಗ್ಗೆ ಕೆಲ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ಈ ನಾಯಿಗಳು ಸೇರಿದಂತೆ ಮೂರು ರಾಟ್ ವೀಲ್ಹರ್ ನಾಯಿಗಳನ್ನು ದಾವಣಗೆರೆಯ ದೇವರಾಜ ಅರಸ್ ಬಡಾವಣೆಯ ಶೈಲೇಶ್ ಕುಮಾರ್ ಎಂಬಾತ ಸಾಕಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ರಾಟ್ ವೀಲ್ಹರ್ ನಾಯಿಗಳಿಗೆ ಬ್ರಾಡೋ, ಪಪ್ಪಿ, ಹೀರೋ ಎಂದು ಶೈಲೇಶ್‌ಕುಮಾರ್ ಹೆಸರಿಟ್ಟಿದ್ದ.
ಇತ್ತೀಚೆಗೆ ಹೀರೋ, ಪಪ್ಪಿ ಹೆಸರಿನ ರಾಟ್‌ವೀಲರ್ ನಾಯಿಗಳು ವೈಲೆಂಟ್ ಆಗಿ ವರ್ತಿಸುತ್ತಿದ್ದವು.
ಡಿಸೆಂಬರ್ 2ರಂದು ಶೈಲೇಶ್‌ಕುಮಾರ್ ಮಾವ ಶಿವಕುಮಾರ್ ಮೇಲೆ ಎರಡು ನಾಯಿಗಳು ಅಟ್ಯಾಕ್ ಮಾಡಿದ್ದವು. ಎರಡು ನಾಯಿಗಳು ಕಚ್ಚಿದ್ದರಿಂದ ಶಿವಕುಮಾರ್ ಗಾಯಗೊಂಡಿದ್ದರು. ಬಳಿಕ ಡಿಸೆಂಬರ್ 4ರಂದು ಮಾಲೀಕ ಶೈಲೇಶ್‌ಕುಮಾರ್ ಮೇಲೆ ಅಟ್ಯಾಕ್ ಮಾಡಿದ್ದವು. ಶೈಲೇಶ್‌ಕುಮಾರ್ ಮೇಲೆ ಅಟ್ಯಾಕ್ ಮಾಡಿ ಹೊಟ್ಟೆ, ಕೈ ಪರಚಿದ್ದ ನಾಯಿಗಳ ವರ್ತನೆಯಿಂದ ನಾಯಿ ಮಾಲೀಕ ಶೈಲೇಶ್‌ಕುಮಾರ್ ಬೇಸರಗೊಂಡಿದ್ದರು.
ಡಿಸೆಂಬರ್ 4ರ ರಾತ್ರಿ ಗೂಡ್ಸ್ ಆಟೋ ಬಾಡಿಗೆ ಮಾಡಿ ನಾಯಿಗಳನ್ನು ಮನೆಯಿಂದ ಬೇರೆಡೆಗೆ ಶಿಫ್ಟ್ ಮಾಡಲಾಗಿತ್ತು. ದಾವಣಗೆರೆಯಿಂದ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಹೊನ್ನೂರು ಗೊಲ್ಲರಹಟ್ಟಿ ಬಳಿ ಬಿಟ್ಟು ಶೈಲೇಶ್‌ಕುಮಾರ್ ತೆರಳಿದ್ದ. ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದ. ಡಿಸೆಂಬರ್ 4 ರ ರಾತ್ರಿ 10.30ರ ಸುಮಾರಿಗೆ ನಾಯಿಗಳ ಬಿಟ್ಟು ಶೈಲೇಶ್ ಕುಮಾರ್ ಎಸ್ಕೇಪ್ ಆಗಿದ್ದ. ಡಿಸೆಂಬರ್ 4ರ ರಾತ್ರಿ 11ಕ್ಕೆ ಅದೇ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಅನಿತಾ ಮೇಲೆ ಇದೇ ರಾಟ್ ವೀಲ್ಹರ್ ನಾಯಿಗಳು ದಾಳಿ ಮಾಡಿವೆ. ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ ಹೊನ್ನೂರು ಗೊಲ್ಲರಹಟ್ಟಿ ಗ್ರಾಮಕ್ಕೆ ತೆರಳುತ್ತಿದ್ದರು. ಮಗಳ ಜೊತೆ ಜಗಳವಾಡಿ ತಾಯಿ ಮನೆಗೆ ರಾತ್ರಿ ವೇಳೆಯೇ ಅನಿತಾ ತೆರಳುತ್ತಿದ್ದ ವೇಳೆ ಅಟ್ಯಾಕ್ ಮಾಡಿವೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಪಕ್ಕದ ಕಾಲುವೆಗೆ ಅನಿತಾ ಬಿದ್ದಿದ್ದರು. ಅನಿತಾ ಮೇಲೆ ಎಗರಿ ದೇಹದ ತುಂಬೆಲ್ಲಾ ಕಚ್ಚಿ ಗಾಯಗೊಳಿಸಿ ಇದೇ ರಾಟ್ ವೀಲ್ಹರ್ ನಾಯಿಗಳು ಸಾಯಿಸಿದ್ದವು . ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದೇ ರಾಟ್ ವೀಲ್ಹರ್ ನಾಯಿಗಳ ಜೊತೆ ಶೈಲೇಶ್ ಕುಮಾರ್ ಇರುವ ಪೋಟೋಗಳು ಕೂಡ ಪೊಲೀಸರಿಗೆ ತನಿಖೆಯ ವೇಳೆ ಸಿಕ್ಕಿವೆ. ಆರೋಪಿ ಶೈಲೇಶ್ ಕುಮಾರ್ ದಾವಣಗೆರೆಯ ಸಿನಿಮಾ ಥಿಯೇಟರ್ ಮಾಲೀಕರೊಬ್ಬರ ಅಳಿಯ ಎಂಬುದು ತನಿಖೆಯ ವೇಳೆ ಪೊಲೀಸರಿಗೆ ಗೊತ್ತಾಗಿದೆ.
ಈ ಅಪಾಯಕಾರಿ ರಾಟ್ ವೀಲ್ಹರ್ ನಾಯಿಗಳನ್ನು ಹೈವೇ ಬಳಿ ಬಿಡುವ ಬದಲು ಶೈಲೇಶ್ ಕುಮಾರ್ ನಾಯಿ ಪುನರ್ ವಸತಿ ಕೇಂದ್ರಕ್ಕೋ, ಪ್ರಾಣಿ ದಯಾ ಸಂಘಗಳಿಗೋ ನೀಡಬೇಕಾಗಿತ್ತು. ಆದರೇ, ಹೆದ್ದಾರಿ ಬಳಿ ಬಿಟ್ಟು ಅಮಾಯಕಿ ಅನಿತಾ ಸಾವಿಗೆ ಶೈಲೇಶ್ ಕುಮಾರ್ ಕಾರಣನಾಗಿದ್ದಾನೆ.
/filters:format(webp)/newsfirstlive-kannada/media/media_files/2025/12/08/ratwheeler-dog-owner-arrested02-2025-12-08-14-29-46.jpg)
ದಾವಣಗೆರೆ ಗ್ರಾಮಾಂತರ ಸಿಪಿಐ ಅಣ್ಣಯ್ಯ ಕೆ.ಟಿ.ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಹೈವೇಗೆ ಹೊಂದಿಕೊಂಡ ಹೋಟೆಲ್, ಪೆಟ್ರೋಲ್ ಬಂಕ್ ಸೇರಿ ವಿವಿಧೆಡೆ ಅಳವಡಿಸಿದ್ದ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪಡೆದು ಆರೋಪಿಗಾಗಿ ಹುಡುಕಾಟ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಗಳಲ್ಲಿ ಗೂಡ್ಸ್ ಆಟೋದಲ್ಲಿ ನಾಯಿಗಳನ್ನು ಒಯ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಗೂಡ್ಸ್ ಆಟೋ ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಆರೋಪಿ ಶೈಲೇಶ್‌ಕುಮಾರ್ ವಿರುದ್ಧ ಕಲಂ 291, 105, 106(1) ಬಿಎನ್‌ಎಸ್ ಅಡಿ ಕೇಸ್ ದಾಖಲಾಗಿದೆ. ಆರೋಪಿ ಶೈಲೇಶ್‌ಕುಮಾರ್ ಬಂಧಿಸಿ ದಾವಣಗೆರೆ ಗ್ರಾಮೀಣ ಪೊಲೀಸರು ಜೈಲಿಗೆ ಕಳಿಸಿದ್ದಾರೆ.
BNS ಸೆಕ್ಷನ್ 291 ರಡಿ ಆರೋಪ ಸಾಬೀತಾದರೇ, 6 ತಿಂಗಳು ಜೈಲುಶಿಕ್ಷೆ ವಿಧಿಸಲು ಅವಕಾಶ ಇದೆ. ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಧೋರಣೆ ಸಾಬೀತಾದರೇ, 6 ತಿಂಗಳು ಜೈಲುಶಿಕ್ಷೆ ವಿಧಿಸಲಾಗುತ್ತೆ. ಬಿಎನ್ಎಸ್ ಸೆಕ್ಷನ್ 105 ಉದ್ದೇಶಪೂರ್ವಕವಲ್ಲದ ನರಹತ್ಯೆಗೆ ಜೈಲುಶಿಕ್ಷೆ ವಿಧಿಸುವ ಸೆಕ್ಷನ್. ಈ ಸೆಕ್ಷನ್ ನಡಿ ಆರೋಪ ಸಾಬೀತಾದರೇ, ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.
ಆರೋಪಿಯ ವಿರುದ್ಥ ಉದ್ದೇಶಪೂರ್ವಕವಲ್ಲದ ನರಹತ್ಯೆಯ ಕೇಸ್ ದಾಖಲಾಗಿದೆ. ಬಿಎನ್‌ಎಸ್ ಸೆಕ್ಷನ್ 106(1) ರಡಿ ನಿರ್ಲಕ್ಷ್ಯದಿಂದ ಸಾವಿಗೆ ಉದ್ದೇಶಪೂರ್ವಕವಲ್ಲದ ನರಹತ್ಯೆಗೆ ಕಾರಣವಾಗುವುದು. ಈ ಸೆಕ್ಷನ್ ನಡಿ ಆರೋಪ ಸಾಬೀತಾದರೇ, 5 ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us