/newsfirstlive-kannada/media/media_files/2025/12/06/ratwiller-dog-attack-on-anitha-2025-12-06-12-29-29.jpg)
ರಾಟ್ ವೀಲ್ಹರ್ ನಾಯಿಗಳ ದಾಳಿಯಿಂದ ಮೃತಪಟ್ಟ ಅನಿತಾ
ದಾವಣಗೆರೆ ಜಿಲ್ಲೆಯ ಮಲ್ಲಶೆಟ್ಟಿಹಳ್ಳಿ ಗ್ರಾಮದಲ್ಲಿ ಮನೆಯವರೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ತವರು ಮನೆಗೆ ಹೋಗುತ್ತಿದ್ದ ಮಹಿಳೆಯ ಮೇಲೆ ರಾಟ್ ವೀಲ್ಹರ್ ನಾಯಿಗಳು ದಾಳಿ ನಡೆಸಿವೆ. ರಾತ್ರಿ 10 ರಿಂದ 11 ಗಂಟೆ ವೇಳೆ ಮಹಿಳೆ ಅನಿತಾ ಮನೆ ಬಿಟ್ಟು ನಡೆದುಕೊಂಡೇ ಹೋಗುತ್ತಿದ್ದರು. ಈ ವೇಳೆ ಗ್ರಾಮದ ಹೊರವಲಯದಲ್ಲಿ ಮಹಿಳೆಯ ಮೇಲೆ ರಾಟ್ ವೀಲ್ಹರ್ ನಾಯಿಗಳು ದಾಳಿ ನಡೆಸಿವೆ. ನಾಯಿ ಬೊಗಳುವುದು ಸಮೀಪದ ಮನೆಯವರಿಗೆ ಕೇಳಿಸಿದೆ. ಆದರೇ, ಮಹಿಳೆಯ ಮೇಲೆ ದಾಳಿ ನಡೆಸಿರುವುದು ಯಾರಿಗೂ ಗೊತ್ತಾಗಿಲ್ಲ. ನಾಯಿಗಳ ದಾಳಿಯಿಂದ ಮಹಿಳೆ ಕುಸಿದು ಬಿದ್ದಿದ್ದಾರೆ.
ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಗ್ರಾಮದ ವ್ಯಕ್ತಿಯೊಬ್ಬರು ಕೃಷಿ ಜಮೀನಿಗೆ ಬೋರ್ ವೆಲ್ ನೀರು ಹಾಯಿಸಲು ಬೈಕ್ ನಲ್ಲಿ ಹೋಗುವಾಗ ರಸ್ತೆಯಲ್ಲಿ ಮೊಬೈಲ್, ಮಹಿಳೆ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣವೇ ಮಹಿಳೆಯ ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಹಿಳೆ ಅನಿತಾ, ಶಿರಾ ಬಳಿ ಸಾವನ್ನಪ್ಪಿದ್ದಾರೆ.
ಬಳಿಕ ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿ, ಪಾರ್ಥೀವ ಶರೀರವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಇಂದು ಬೆಳಿಗ್ಗೆ ದಾವಣೆಗೆರೆಯ ಮಲ್ಲಶೆಟ್ಟಿಹಳ್ಳಿ ಗ್ರಾಮದ ನಿವಾಸಕ್ಕೆ ಮೃತ ಅನಿತಾ( 38) ಪಾರ್ಥೀವ ಶರೀರವನ್ನು ತರಲಾಗಿದೆ. ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಐದು ವರ್ಷಗಳ ಹಿಂದೆ ಅನಿತಾ ಪತಿ ಹಾಲೇಶ್ ಮೃತಪಟ್ಟಿದ್ದರು. ಅನಿತಾಗೆ ಮೂವರು ಮಕ್ಕಳಿವೆ. ಈಗ ತಾಯಿ ಅನಿತಾ ಮೃತಪಟ್ಟಿದ್ದರಿಂದ ಮೂವರು ಮಕ್ಕಳು ಅನಾಥವಾಗಿವೆ. ಇಬ್ಬರು ಹೆಣ್ಣುಮಕ್ಕಳು, ಓರ್ವ ಗಂಡು ಮಗು ಅನಾಥವಾಗಿದೆ. ನಾಯಿ ಮಾಲೀಕರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಸಂಬಂಧಿಕರು ಮನವಿ ಮಾಡಿದ್ದಾರೆ.
ಒಂಟಿ ಮಹಿಳೆ ಮೇಲೆ ರಾಟ್ ವಿಲ್ಲರ್ ಡೆಡ್ಲಿ ಅಟ್ಯಾಕ್ ಮಾಡಿದ ಪ್ರಕರಣದಲ್ಲಿ ಮಲ್ಲಿಕಾರ್ಜುನ ಅವರು ಪ್ರತ್ಯಕ್ಷದರ್ಶಿಯಾಗಿದ್ದಾರೆ. ರಾತ್ರಿ ನಡೆದ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ. ತೋಟಕ್ಕೆ ನೀರು ಬಿಡಲು ನಮ್ಮ ಸಂಬಂಧಿಕರ ಜೊತೆ ಬೈಕ್ ನಲ್ಲಿ ತೆರಳುತಿದ್ದೆ, ಈ ವೇಳೆ ಮಹಿಳೆ ಪೋನ್ ರಸ್ತೆ ಮೇಲೆ ಬಿದ್ದಿತ್ತು . ಬೈಕ್ ನಿಂದ ಕೆಳಗಿಳಿದಾಗ ಮಹಿಳೆ ಕೂಗಿಕೊಂಡ ಶಬ್ದ ಕೇಳಿದೆ. ಮಹಿಳೆಗೆ ಗುಂಡಿಯಲ್ಲಿ ನಾಯಿಗಳು ಕಚ್ಚುತಿದ್ದವು. ಈ ವೇಳೆ ನಮ್ಮ ಮನೆ ಪಕ್ಕದಲ್ಲಿ ಇರುವುದಕ್ಕೆ ನಮಗೆ ದೊಣ್ಣೆ ಕೋಲು ತರಲು ಆತ ಹೇಳಿದ. ಆಗ ನಾಯಿಗಳಿಗೆ ಹೆದರಿಸಿದರೂ ಕೂಡ ನಾಯಿಗಳು ಭಯ ಪಡುತ್ತಿರಲಿಲ್ಲ. ಪೊಲೀಸರಿಗೆ ಮಾಹಿತಿ ತಿಳಿಸಿ ಅವರನ್ನ ಕರೆಯಿಸಿ ನಾಯಿ ಓಡಿಸಿದ್ದೇವು. ಈ ವೇಳೆ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕಳಿಸಿದ್ದೇವು. ಆದ್ರೂ ಕೂಡ ಮಹಿಳೆ ಬದುಕುಳಿಯಲಿಲ್ಲ ಎಂದು ಮಲ್ಲಿಕಾರ್ಜುನ ಮಾಹಿತಿ ನೀಡಿದ್ದಾರೆ.
ಇನ್ನೂ ಅನಿತಾ ಎಂಬ ಮಹಿಳೆಯ ಮೇಲೆ ರಾಟ್ ವಿಲ್ಲರ್ ನಾಯಿಗಳು ದಾಳಿ ಪ್ರಕರಣದಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿದ ನಾಯಿಗಳೆರಡೂ ಸಾವನ್ನಪ್ಪಿವೆ. ನಾಯಿಗಳ ದೇಹದ ಒಳಭಾಗದಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿವೆ. ಬೇರೆಯವರ ಮೇಲೆ ನಾಯಿಗಳು ದಾಳಿ ಮಾಡಬಾರದು ಎಂದು ದೊಣ್ಣೆಯಿಂದ ನಾಯಿಗಳನ್ನು ಬಡಿದು ಗ್ರಾಮಸ್ಥರು ಸೆರೆ ಹಿಡಿದಿದ್ದರು. ಬಳಿಕ ದಾವಣಗೆರೆ ತಾಲೂಕಿನ ಚಟ್ಟೋಬನಹಳ್ಳಿಯ ಎಬಿಸಿ ಸೆಂಟರ್ ಗೆ ನಾಯಿಗಳನ್ನು ರವಾನೆ ಮಾಡಲಾಗಿತ್ತು. ಈ ವೇಳೆ ನಾಯಿಗಳ ದೇಹದೊಳಗೆ ಅಂತರಿಕ ರಕ್ತ ಸ್ರಾವದಿಂದ ಎರಡು ನಾಯಿಗಳು ಸಾವನ್ನಪ್ಪಿವೆ. ಚಟ್ಟೋಬನಹಳ್ಳಿಯಲ್ಲಿ ನಾಯಿಗಳ ಮರಣೋತ್ತರ ಪರೀಕ್ಷೆಯನ್ನು ಪಶು ವೈದ್ಯರು ನಡೆಸುವರು.
/filters:format(webp)/newsfirstlive-kannada/media/media_files/2025/12/06/ratwiller-dog-attack-on-anitha02-2025-12-06-12-32-24.jpg)
ಈ ರಾಟ್ ವೀಲ್ಹರ್ ನಾಯಿಗಳ ಮಾಲೀಕರು ಯಾರು ಎಂಬುದು ಪತ್ತೆಯಾಗಿಲ್ಲ. ದಾವಣಗೆರೆ ನಗರದ ಯಾರೋ ತಮ್ಮ ಮನೆಯಲ್ಲಿ ಈ ಜೋಡಿ ರಾಟ್ ವೀಲ್ಹರ್ ನಾಯಿಗಳನ್ನು ಸಾಕಿದ್ದಾರೆ. ಬಳಿಕ ಮನೆಯಲ್ಲಿ ರಾಟ್ ವೀಲ್ಹರ್ ನಾಯಿಗಳ ಕಾಟ ಜಾಸ್ತಿಯಾಗಿದೆ. ಬಳಿಕ ನಗರದಿಂದ ದೂರದ ಹಳ್ಳಿಯ ಹೊರಗೆ ರಾಟ್ ವೀಲ್ಹರ್ ನಾಯಿಗಳನ್ನು ಬಿಟ್ಟು ಹೊರಟು ಹೋಗಿದ್ದಾರೆ. ಮನೆಯವರು ಊರ ಹೊರಗೆ ಬಿಟ್ಟು ಹೋದ ಬಳಿಕ ನಾಯಿಗಳು ರಸ್ತೆಯಲ್ಲಿ ಬಂದ ಮಹಿಳೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us