ಧರ್ಮಸ್ಥಳದ ಬಗ್ಗೆ ದೂರುದಾರ ಮಾಸ್ಕ್ ಮ್ಯಾನ್ ನ ಅಸಲಿ ಮುಖ ನ್ಯೂಸ್ ಫಸ್ಟ್ ನಲ್ಲಿ ರಿವೀಲ್

ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯ ಅಲಿಯಾಸ್ ಚೆನ್ನನ ಅಸಲಿ ಈಗ ಪೋಟೋ ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ. ಈ ಮೊದಲು ಹಳೆಯ ಪೋಟೋ ಕೂಡ ನ್ಯೂಸ್ ಫಸ್ಟ್ ಗೆ ಸಿಕ್ಕಿತ್ತು. ಮಾಸ್ಕ್ ಮ್ಯಾನ್ ಚಿನ್ನಯ್ಯನ ಈಗಿನ ಲೇಟೆಸ್ಟ್ ಪೋಟೋ ಇಲ್ಲಿದೆ ನೋಡಿ.

author-image
Chandramohan
mask man face revealed01

ಮಾಸ್ಕ್ ಮ್ಯಾನ್ ಚಿನ್ನಯ್ಯನ ಈಗಿನ ಲೇಟೆಸ್ಟ್ ಪೋಟೋ!

Advertisment
  • ಈ ಪೋಟೋದಲ್ಲಿರುವ ವ್ಯಕ್ತಿಯೇ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ
  • ಮಾಸ್ಕ್ ಮ್ಯಾನ್ ಚೆನ್ನಯ್ಯನ ಪೋಟೋ ನ್ಯೂಸ್ ಫಸ್ಟ್ ಗೆ ಲಭ್ಯ

ಕಳೆದ 20 ದಿನಗಳಿಂದ ದಿನ ಮಾಸ್ಕ್ ಹಾಕಿಕೊಂಡು ಪೊಲೀಸರ ಜೊತೆ ಬಂದು ಹೊಸ ಹೊಸ ಜಾಗ ತೋರಿಸುತ್ತಿದ್ದ ಮಾಸ್ಕ್ ಮ್ಯಾನ್ ಬಗ್ಗೆ ಭಾರಿ ಕುತೂಹಲ ಇತ್ತು.  ತನ್ನ ರಕ್ಷಣೆಗಾಗಿ ಮತ್ತು ತನ್ನ ಐಡೆಂಟಿಟಿ ಬಹಿರಂಗ ಆಗಬಾರದೆಂದು ಮಾಸ್ಕ್ ಮ್ಯಾನ್, ಮಾಸ್ಕ್ ಹಾಕಿಕೊಂಡಿದ್ದಾನೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೇ, ಮಾಸ್ಕ್ ಮ್ಯಾನ್ ಮೊದಲು ಒಂದು ಬುರುಡೆ ತಂದು, ಪೊಲೀಸರಿಗೆ, ಕೋರ್ಟ್ ಗೆ ಕೊಟ್ಟ. ಆದಾದ ಬಳಿಕ ಆತ ತೋರಿಸಿದ 15 ಜಾಗದಲ್ಲಿ ಅಗೆದರೂ ಆತ ಹೇಳಿದಂತೆ ನೂರಾರು ಶವಗಳ ಅಸ್ಥಿಪಂಜರಗಳು ಸಿಗಲಿಲ್ಲ. ಹೀಗಾಗಿ ಈತನ ಬಗ್ಗೆಯೇ ಎಸ್‌ಐಟಿ ಗೆ ಅನುಮಾನ ಶುರುವಾಗಿತ್ತು. ಯಾವುದೋ ದುರುದ್ದೇಶದಿಂದ, ಧರ್ಮಸ್ಥಳಕ್ಕೆ ಕಳಂಕ ತರಬೇಕೆಂಬ ದುರುದ್ದೇಶದಿಂದ ಸುಳ್ಳು ದೂರು ನೀಡಿರಬಹುದು ಎಂಬ ಚರ್ಚೆ ವಿಧಾನಸಭೆಯಲ್ಲೂ ನಡೆಯಿತು. ಹೀಗಾಗಿ ಈಗ ಎಸ್‌ಐಟಿ ಅಧಿಕಾರಿಗಳು ಆತ ಹೇಳಿದಂತೆ ನೂರಾರು ಶವಗಳು ಸಿಗದೇ  ಇರೋದರಿಂದ ಮಾಸ್ಕ್ ಮ್ಯಾನ್ ನನ್ನೇ ಬಂಧಿಸಿದ್ದಾರೆ. ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯ ಅಲಿಯಾಸ್ ಚಿನ್ನನ ಈಗಿನ ಲೇಟೆಸ್ಟ್ ಪೋಟೋ ಕೂಡ ಬಿಡುಗಡೆಯಾಗಿದೆ. ನ್ಯೂಸ್ ಫಸ್ಟ್ ಗೆ ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯ ಅಲಿಯಾಸ್ ಚೆನ್ನನ ಈಗಿನ ಲೇಟೆಸ್ಟ್ ಪೋಟೋ ಸಿಕ್ಕಿದೆ. ಮಾಸ್ಕ್  ಮ್ಯಾನ್ ಲೇಟೆಸ್ಟ್ ಪೋಟೋ ಇಲ್ಲಿದೆ ನೋಡಿ.
ಈ ಪೋಟೋದಲ್ಲಿರುವ ವ್ಯಕ್ತಿಯೇ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ.


mask man face revealed01ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯ ಅಲಿಯಾಸ್ ಚೆನ್ನನ ಈಗಿನ ಲೇಟೆಸ್ಟ್ ಪೋಟೋ ಇದು

ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ಗಡ್ಡಬಿಟ್ಟಿದ್ದಾನೆ. ಇಂದು ಈ ಚಿನ್ನಯ್ಯನಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಬೆಳ್ತಂಗಡಿ ಕೋರ್ಟ್ ಗೆ ಎಸ್‌ಐಟಿ ಪೊಲೀಸ್ ಅಧಿಕಾರಿಗಳು ಹಾಜರುಪಡಿಸಿದ್ದಾರೆ.   ಕೋರ್ಟ್ ನಲ್ಲಿ ಚಿನ್ನಯ್ಯನನ್ನು 10 ದಿನಗಳ ಕಾಲ ಹೆಚ್ಚಿನ ವಿಚಾರಣೆಗಾಗಿ ಎಸ್‌ಐಟಿ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ಕೋರ್ಟ್ ಗೆ ಮನವಿ ಮಾಡಿದ್ದಾರೆ.   


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Mask man real face revealed
Advertisment