/newsfirstlive-kannada/media/media_files/2025/08/22/ananya_bhat-2025-08-22-07-54-55.jpg)
ಇದು ಅನನ್ಯ ಭಟ್ ನಾಪತ್ತೆ ಕೇಸ್‌ನ ಅತಿ ದೊಡ್ಡ ಸುದ್ದಿ. ಅನನ್ಯ ಭಟ್ ನಾಪತ್ತೆಯಾಗಿದ್ದಾರೆ ಎಂದು ವೃದ್ಧೆ ಸುಜಾತ ಭಟ್ ಪೊಲೀಸರಿಗೆ ನೀಡಿದ್ದ ದೂರು ಭಾರೀ ಸಂಚಲನ ಸೃಷ್ಟಿಸಿದೆ. ಅನನ್ಯ ಭಟ್ ನಾಪತ್ತೆ ತೀವ್ರ ರೋಚಕ ಘಟ್ಟ ತಲುಪಿದ್ದು ಎಸ್ಐಟಿ ಹೆಗಲೇರಿದೆ. ಆದ್ರೀಗ ಅನನ್ಯಾ ಭಟ್ ಕೇಸ್ನಲ್ಲಿ ರೋಚಕ ಟ್ವಿಸ್ಟ್ ಌಂಡ್ ಟರ್ನ್ಸ್ ಸಿಕ್ಕಿದೆ. ಕೇಸ್ನಿಂದ ಸುಜಾತ ಭಟ್ ಹಿಂದೆ ಸರಿಯುತ್ತಾರಾ ಎಂಬ ಅನುಮಾನ ಮೂಡಿದೆ.
ಇದು ನಿನ್ನೆಯಷ್ಟೇ ಅನನ್ಯ ಭಟ್ ತಾಯಿ ಎನ್ನಲಾಗ್ತಿರುವ ಸುಜಾತ್ ಭಟ್ ಹೇಳಿದ ಮಾತುಗಳು. ಅನನ್ಯ ಭಟ್ ಕೇಸ್ ಎಸ್ಐಟಿಗೆ ಹಸ್ತಾಂತರವಾಗಿದ್ದಕ್ಕೆ ಸುಜಾತ್ ಭಟ್ ಖುಷಿ ವ್ಯಕ್ತಪಡಿಸಿದ್ರು. ಅಷ್ಟೇ ಅಲ್ಲ, ಎಸ್ಐಟಿ ತನಿಖೆಗೂ ಸಹಕರಿಸುವುದಾಗಿ ಹೇಳಿದ್ರು. ಆದ್ರೀಗ ಅನನ್ಯಾ ಭಟ್ ಕೇಸ್ನಲ್ಲಿ ರೋಚಕ ಟ್ವಿಸ್ಟ್ ಌಂಡ್ ಟರ್ನ್ಸ್ ಸಿಕ್ಕಿದ್ದು, ಕೇಸ್ನಿಂದಲೇ ಸುಜಾತ ಭಟ್ ಹಿಂದೆ ಸರಿಯುತ್ತಾರಾ ಎಂಬ ಸಂಶಯ ಮೂಡಿದೆ.
ಕೇಸ್ನಿಂದ ಹಿಂದೆ ಸರಿಯಲು ಚಿಂತನೆ ನಡೆಸಿದ್ರಾ ಸುಜಾತ ಭಟ್?
2003ರಲ್ಲಿ ಧರ್ಮಸ್ಥಳ ದೇಗುಲ ಬಳಿಯ ವಠಾರದಿಂದ ಅನನ್ಯ ಭಟ್ ಕಾಣೆ ಆಗಿದ್ದಳು. ನಮ್ಮ ಮಗಳ ಅಸ್ಥಿಯನ್ನಾದ್ರೂ ಹುಡುಕಿಕೊಡಿ. ಸನಾತನ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡ್ತೀನಿ ಎಂದು ಸುಜಾತ ಭಟ್ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ಕೇಸ್ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿದ್ದವು. ಇತ್ತೀಚೆಗೆ ಸುಜಾತ ಭಟ್ ತೋರಿಸಿದ ಅನನ್ಯ ಭಟ್ ಪೋಟೋ ಆಕೆಯದ್ದಲ್ಲ. ಅದು ವಾಸಂತಿ ಎಂಬ ಮತ್ತೊಬ್ಬ ಮಹಿಳೆಯದ್ದು ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಯನ್ನು ಹುಟ್ಟು ಹಾಕಿದೆ. ಇದೆಲ್ಲದರಿಂದ ಸುಜಾತ ಭಟ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನಲಾಗ್ತಿದ್ದು, ಇದರಿಂದ ಅನನ್ಯ ಭಟ್ ನಾಪತ್ತೆ ಕೇಸ್ ಅನ್ನೇ ವಾಪಸ್ ಪಡೆಯಲು ಚಿಂತನೆ ನಡೆಸಿದ್ದಾರೆ ಅನ್ನೋ ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ಫಸ್ಟ್ ಲಭ್ಯವಾಗಿದೆ.
ನಿಖರ ಮಾಹಿತಿಗಳು ಇಲ್ಲ
- ಅನನ್ಯ ಭಟ್ ನಾಪತ್ತೆ ಬಗ್ಗೆ ಯಾವುದೇ ಸಾಕ್ಷಿ, ಆಧಾರಗಳೂ ಇಲ್ಲ
- ಅನನ್ಯ ಭಟ್ ಹುಟ್ಟು, ಬೆಳವಣಿಗೆ, ಶಾಲಾ ಕಾಲೇಜು ದಾಖಲಾತಿ
- ಎಂಬಿಬಿಎಸ್ ಅಡ್ಮಿಷನ್ ಬಗ್ಗೆಯೂ ಯಾವುದೇ ದಾಖಲಾತಿ ಇಲ್ಲ
- ಅನನ್ಯ ಭಟ್ ಎಂಬ ಮಗಳಿದ್ದಳು ಎಂದು ಸಾಬೀತು ಪಡಿಸೋದೇ ಕಷ್ಟ
- ಸುಜಾತ ಭಟ್ಗೆ ಬೆಂಬಲ ನೀಡಲು ಯಾರು ಕೂಡ ಮುಂದೆ ಬರುತ್ತಿಲ್ಲ
- ಈ ಹಿಂದೆ ಬೆಂಬಲ ಕೊಟ್ಟವರು ಅವರದ್ದೇ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ
- ಜೊತೆಗೆ ಈಗ ಸುಜಾತ ಭಟ್ ರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ
- ಕಾನೂನು ಹೋರಾಟಕ್ಕೆ ಹಿಂದಿನ ಬೆಂಬಲವೂ ಕೂಡ ಈಗ ಸಿಗುತ್ತಿಲ್ಲ
- ಹೀಗಾಗಿ ಲಿಖಿತ ದೂರನ್ನೇ ವಾಪಸ್ ಪಡೆಯಲು ಸುಜಾತ ಭಟ್ ಚಿಂತನೆ
ಇದನ್ನೂ ಓದಿ:ಯೂಟ್ಯೂಬರ್ ಸಮೀರ್ MD ವಿರುದ್ಧ ಮತ್ತೊಂದು ಪ್ರಕರಣ.. ಈ ಕೇಸ್ ದಾಖಲಿಸಿದ್ದು ಯಾವ ತಾಲೂಕಲ್ಲಿ?
ಕುತೂಹಲ ಮೂಡಿಸಿದ ಎಸ್ಐಟಿ ಮುಂದಿನ ನಡೆ
ಅನನ್ಯ ಭಟ್ ಕೇಸ್ ಎಸ್ಐಟಿಗೆ ಹಸ್ತಾಂತರ ಆಗಿರೋದ್ರಿಂದ ತನಿಖೆಯನ್ನು ಕೈ ಬಿಡ್ತಾರಾ ಅಥವಾ ಸುಜಾತ ಭಟ್ ಹೀಗೆ ದೂರು ನೀಡಲು ಕಾರಣರಾದವರು ಯಾರು ಅನ್ನೋದರ ಬಗ್ಗೆಯೇ ಗಮನ ಕೇಂದ್ರೀಕರಿಸಿ ತನಿಖೆ ನಡೆಸ್ತಾರಾ ಎನ್ನುವ ಕುತೂಹಲ ಇದೆ. ಯಾಕಂದ್ರೆ, ಸುಳ್ಳು ದೂರು ನೀಡುವುದು ಕೂಡ ಅಪರಾಧ. ಒಂದ್ವೇಳೆ ತನಿಖೆಯಲ್ಲಿ ಅನನ್ಯ ಭಟ್ ಕೇಸ್ ಸುಳ್ಳು ಅನ್ನೋದು ಗೊತ್ತಾದ್ರೆ, ಸುಜಾತ ಭಟ್ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲ ಇದೆ.
ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಮತ್ತೊಂದೆಡೆ ಸುಜಾತ ಭಟ್ ದಿನಕ್ಕೊಂದು ಹೇಳಿಕೆ ನೀಡ್ತಿರೋದು ಮತ್ತಷ್ಟುಗೊಂದಲ ಮಯವಾಗಿದ್ದು, ಎಸ್ಐಟಿ ಮುಂದೇನು ಮಾಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ