ಧರ್ಮಸ್ಥಳ ಗ್ರಾಮದಲ್ಲಿ 2012ರ ಸೆಪ್ಟೆಂಬರ್ 21 ರಂದು ನಡೆದಂತಹ ಇಬ್ಬರನ್ನು ಜೀವ ತೆಗೆದ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಆನೆ ಮಾವುತ ಹಾಗೂ ಆತನ ಸಹೋದರಿ ಇಬ್ಬರು ಜೀವ ಕಳೆದುಕೊಂಡಿದ್ದರು. ಅವರ ಮಕ್ಕಳು ಎಸ್ಐಟಿ ಕಚೇರಿಗೆ ಬಂದಿದ್ದಾರೆ. ಅವರ ಮಗನಾದ ಗಣೇಶ್ ಎನ್ನುವರು ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.
ಆನೆ ಮಾವುತ ನಮ್ಮ ತಂದೆ, ಹಾಗೂ ಅವರ ತಂಗಿ ಯಮುನಾ ಇಬ್ಬರು ಇಲ್ಲ. ತಂದೆನ, ಅತ್ತೆನ ರುಬ್ಬುಗೋಲಿಗೆ ಹಾಕಿ ಜೀವ ತೆಗೆದಿದ್ದಾರೆ. ಈ ಬಗ್ಗೆ ದೂರನ್ನು ಮೊದಲು ಎಸ್ಪಿಗೆ ಕೊಟ್ಟಿದ್ದೇವು. ತನಿಖೆ ಆಗಲಿಲ್ಲ. ಅದಕ್ಕೆ ಈಗ ಎಸ್ಐಟಿಗೆ ದೂರು ಕೊಟ್ಟಿದ್ದೇವೆ. ಅಧಿಕಾರಿಗಳು ತನಿಖೆ ಮಾಡಿ ಈ ಬಗ್ಗೆ ಹೇಳುತ್ತೇವೆ ಎಂದಿದ್ದಾರೆ. ನೂರಕ್ಕೆ 101 ರಷ್ಟು ಹಕ್ಕಿಪಿಕ್ಕಿಯವರು ಈ ಕೃತ್ಯ ಮಾಡಿಲ್ಲ. ಮಾಡಿರೋರೇ ಬೇರೆ ಇದ್ದಾರೆ ಎಂದು ಮೃತ ಆನೆ ಮಾವುತನ ಮಗ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ